ಹೈದರಾಬಾದ್:ಅದ್ಬುತನಟನೆಯಿಂದಲೇ ಅಭಿಮಾನಿಗಳ ಮನ ಗೆದ್ದಿರುವ ನಟ ರಣದೀಪ್ ಹೂಡಾ ಅತಿ ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ತಮ್ಮ ಬಹುಕಾಲದ ಗೆಳತಿ ಲಿನ್ ಲೈಶ್ರಾಮ್ ಅವರೊಂದಿಗೆ ನಟ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದರ ನಡುವೆಯೇ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಕೆರಳಿಸಿದೆ.
ಇಂದು ಮುಂಬೈನ ಬಾಂದ್ರಾದಲ್ಲಿರುವ ವಾಕಿ ಎಂಬ ಜಪಾನೀಸ್ ರೆಸ್ಟೋರೆಂಟ್ಗೆ ಊಟಕ್ಕೆ ತೆರಳುವಾಗ ಇಬ್ಬರೂ ಒಟ್ಟಿಗೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಾರೆ. ಮೊದಲು ಕಾರಿನಿಂದ ಹೊರ ಬಂದ ರಣದೀಪ್ ನಂತರ ತಮ್ಮ ಗೆಳತಿಯೊಂದಿಗೆ ರೆಸ್ಟೋರೆಂಟ್ ಒಳ ಹೋಗುವ ಮುನ್ನ ಕ್ಯಾಮೆರಾದ ಮುಂದೆ ಒಟ್ಟಿಗೆ ನಿಂತು ಪೋಸ್ ಕೊಟ್ಟಿದ್ದಾರೆ. ಇದರಿಂದ ಈ ಇಬ್ಬರ ಮದುವೆ ವಿಚಾರ ಮತ್ತೇ ಬಾಲಿವುಡ್ ಅಂಗಳದಲ್ಲಿ ಹರಿದಾಡಲಾರಂಭಿಸಿದೆ.
ರಣದೀಪ್ ಹೂಡಾ ಮತ್ತು ಲಿನ್ ಲೈಶ್ರಾಮ್ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲವಾದರೂ, ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರು ಜತೆಗಿರುವ ವಿವಿಧ ಚಿತ್ರಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸೂಕ್ಷ್ಮವಾಗಿ ಸುಳಿವು ನೀಡಿದ್ದಾರೆ. ಮೂಲಗಳ ಪ್ರಕಾರ ರಂದೀಪ್ ಮತ್ತು ಲಿನ್ ಮದುವೆ ಮುಂಬೈನಲ್ಲಿ ನಡೆಯುವುದಿಲ್ಲ ಎಂದು ಹೇಳಲಾಗುತ್ತದೆ. ಅಲ್ಲಿದೇ ತಮ್ಮ ಮದುವೆ ಸಮಾರಂಭಕ್ಕೆ ಆಪ್ತರು ಮತ್ತು ಕುಟುಂಬದವರು ಮಾತ್ರ ಪಾಲ್ಗೊಳ್ಳಲಿದ್ದಾರೆ ಎಂಬ ಬಗ್ಗೆ ಮಾತು ಕೇಳಿ ಬಂದಿವೆ.