ಕರ್ನಾಟಕ

karnataka

ETV Bharat / entertainment

ಮಗಳ ಜೊತೆ ರಣಬೀರ್​ - ಆಲಿಯಾ ಔಟಿಂಗ್​; ಮೊಮ್ಮಗಳಿಗೆ ಲಹೋರಿ ಶುಭ ಕೋರಿದ ನೀತು ಕಪೂರ್​​ - ಮಗಳು ರಾಹಾಳನ್ನು ಮುಂಬೈನಲ್ಲಿ ಹೊರಗೆ

ಮೊದಲ ಲಹೋರಿ ಸಂಭ್ರಮದಲ್ಲಿ ಆಲಿಯಾ, ರಾಹಾ - ಸೊಸೆ, ಮೊಮ್ಮಗಳಿಗೆ ಶುಭ ಕೋರಿದ ನೀತು ಕಪೂರ್​ - ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಮಗಳೊಂದಿಗಿನ ರಾಲಿಯಾ ಫೋಟೋ

ಮಗಳ ಜೊತೆ ರಣಬೀರ್​- ಆಲಿಯಾ ಔಟಿಂಗ್​; ಮೊಮ್ಮಗಳಿಗೆ ಲಹೋರಿ ಶುಭ ಕೋರಿದ ನೀತು ಕಪೂರ್​​
ranbir-alia-outing-with-daughter-neetu-kapoor-wished-lahori-to-her-granddaughter

By

Published : Jan 13, 2023, 3:45 PM IST

ಮುಂಬೈ: ಮೊದಲ ಬಾರಿಗೆ ಪೋಷಕರಾಗಿ ಬಡ್ತಿ ಪಡೆದಿರುವ ಬಾಲಿವುಡ್​ ಸ್ಟಾರ್​ ಜೋಡಿ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​​ ತಮ್ಮ ಮುದ್ದಿನ ಮಗಳ ಜೊತೆ ಕ್ಯಾಮೆರಾಗೆ ಸೆರೆಯಾಗಿದ್ದಾರೆ. ಮಗಳು ರಾಹಾಳನ್ನು ಮುಂಬೈನಲ್ಲಿ ಹೊರಗೆ ಕರೆದುಕೊಂಡು ಹೋಗಿರುವ ಫೋಟೋಗಳು ವೈರಲ್​ ಆಗಿದೆ. ಆದರೆ, ಮಗಳ ಫೋಟೋವನ್ನು ಮಾತ್ರ ಅವರು ಎಮೋಜಿ ಮೂಲಕ ಮುಚ್ಚಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಈ ನಡುವೆ ಮೊಮ್ಮಗಳ ಮೊದಲ ಲಹೋರಿ ಹಬ್ಬಕ್ಕೆ ರಾಹಾ ಅಜ್ಜಿಯಾಗಿರುವ ಬಾಲಿವುಡ್​ ಹಿರಿಯ ನಟಿ ನೀತು ಕಪೂರ್​ ಶುಭಕೋರಿದ್ದಾರೆ.

ಸಹೋದರಿ ಶಹೀನಾ ಭಟ್​ ಜೊತೆ ಮಗಳನ್ನು ಕರೆದುಕೊಂಡು ಆಲಿಯಾ ಮತ್ತು ರಣಬೀರ್​ ಔಟಿಂಗ್​ ಹೊರಟ್ಟಿದ್ದಾರೆ. ನಟಿ ಆಲಿಯಾ ಮಗಳನ್ನು ಎತ್ತಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಮಗಳ ಫೋಟೋವನ್ನು ಹಂಚಿಕೊಳ್ಳದಂತೆ ಈ ವೇಳೆ ಪ್ಯಾಪಾರಾಜಿಗಳಿಗೆ ರಣಬೀರ್​ ಆಲಿಯಾ ಮನವಿ ಮಾಡಿದ್ದು, ಅದರಂತೆ ರಾಹಾ ಮುಖವನ್ನು ಮರೆಮಾಡಲಾಗಿದೆ.

ಎರಡು ವರ್ಷದವರೆಗೆ ಮಗಳ ಫೋಟೋ ಬೇಡ: ಮಗಳು ಎರಡು ವರ್ಷ ಆಗುವವರೆಗೂ ಯಾವುದೇ ಫೋಟೋಗಳನ್ನು ತೆಗೆಯದಂತೆ ಈ ಹಿಂದೆ ಔತಣಕೂಟದ ಕಾರ್ಯಕ್ರಮದಲ್ಲಿ ರಾಲಿಯಾ ದಂಪತಿಗಳು ಪ್ಯಾಪಾರಾಜಿಗಳಿಗೆ ಮನವಿ ಮಾಡಿದ್ದರು. ಆಕೆ ಇನ್ನು ಮಗುವಾಗಿದ್ದು, ಎರಡು ವರ್ಷದ ಬಳಿಕ ಆಕೆಯ ಮುಖವನ್ನು ಬಹಿರಂಗಗೊಳಿಸಿ ಎಂದು ತಿಳಿಸಿದ್ದರು. ಅದಕ್ಕೆ ಒಪ್ಪಿರುವ ಪ್ಯಾಪಾರಾಜಿಗಳು ರಾಹಾ ಅವರ ಮುಖವನ್ನು ಸಾರ್ವಜನಿಕವಾಗಿ ಪ್ರಕಟಿಸದೇ ಎಮೋಜಿ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಮೊಮ್ಮಗಳಿಗೆ ಲಹೋರಿ ಶುಭ ಕೋರಿದ ನೀತು ಕಪೂರ್​​

ರಾಹಾಗೆ ಮೊದಲ ಲಹೋರಿ:ರಾಹಾ ಇದೇ ಮೊದಲ ಬಾರಿ ಲಹೋರಿ ಆಚರಣೆ ಮಾಡುತ್ತಿದ್ದಾರೆ. ವಿಶೇಷ ಎಂದರೆ, ಇದು ಆಲಿಯಾ ಭಟ್​​ಗೂ ಮದುವೆಯಾದ ಬಳಿಕ ಮೊದಲ ಲಹೋರಿಯಾಗಿದೆ. ರಾಹಾ ಮತ್ತು ಆಲಿಯಾ ಮೊದಲ ಲಹೋರಿ ಆಗಿರುವ ಹಿನ್ನೆಲೆ ಈ ಹಬ್ಬವನ್ನು ಸಂಭ್ರಮಿಸಲು ಕಪೂರ್​ ಕುಟುಂಬ ಸಿದ್ದತೆ ನಡೆಸಿದ್ದು, ಈ ಸಂಬಂಧ ನೀತು ಕಪೂರ್​ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಆಲಿಯಾ ಮತ್ತು ರಣಬೀರ್​ ಮಗಳ ಕೈಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಕಳೆದ ನವೆಂಬರ್​ನಲ್ಲಿ ಈ ತಾರಾ ಜೋಡಿ ತಮ್ಮ ಮೊದಲ ಮಗುವನ್ನು ಆಗಮನ ಮಾಡಿಕೊಂಡಿದ್ದರು.

ಇನ್ನು ಕಳೆದವಾರ ರಣಬೀರ್​ ಒಡೆತನದ ಫುಟ್​ಬಾಲ್​ ತಂಡದ ಪಂದ್ಯದಲ್ಲೂ ಕೂಡ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡು ತಮ್ಮ ತಂಡಕ್ಕೆ ಹುರಿದುಂಬಿಸಿದ್ದರು. ಇತ್ತೀಚೆಗಷ್ಟೇ ರಣಬೀರ್​ ಕಪೂರ್​, ಅಭಿಷೇಕ್​ ಬಚ್ಚನ್​ ಮತ್ತು ಮೌನಿ ರಾಯ್​ ಅಭಿನಯದ ಅಯಾನ್​ ಮುಖರ್ಜಿ ನಿರ್ದೇಶದನ ಬ್ರಹ್ಮಸ್ತ್ರ ಪಾರ್ಟ್​ 1ರಲ್ಲಿ ಆಲಿಯಾ ಕಾಣಿಸಿಕೊಂಡಿದ್ದರು. ಮುಂದೆ ಅವರು ಕರಣ್​ ಜೋಹರ್​ ನಿರ್ದೇಶನದ ರೋಮ್ಯಾಂಟಿಕ್​ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದಲ್ಲಿ ಅವರು ರಣವೀರ್​ ಸಿಂಗ್​ಗೆ ಜೊತೆಯಾಗಲಿದ್ದಾರೆ. ಈ ಚಿತ್ರ ಇದೇ ಏಪ್ರಿಲ್​ 28, 2023ರಂದು ಬಿಡುಗಡೆಯಾಗಲಿದೆ. ಇದರ ಹೊರತಾಗಿ ಫರಾನ್​ ಆಖ್ತರ್​ ಅವರ ಜೀಲೆ ಜರ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತ ರಣಬೀರ್​ ರಶ್ಮಿಕಾ ಮಂದಣ್ಣ ಜೊತೆ ಅನಿಮಲ್​ ಚಿತ್ರದಲ್ಲಿ ನಟಿಸುತ್ತಿದ್ದು, ಲವ್​ ರಂಜನ್​ ಅವರ ತು ಜೂಟಿ ಮೇ ಮಕ್ಕರ್​ ಬಿಡುಗಡೆಗೆ ಸಿದ್ದವಾಗಿದೆ.

ಇದನ್ನೂ ಓದಿ: 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರ ಪ್ರೀತಿ-ಪ್ರೇಮದೊಂದಿಗೆ ಒಲವಾಗುವಂತೆ ಮಾಡುತ್ತೆ: ರಮ್ಯಾ

ABOUT THE AUTHOR

...view details