ತೆಲುಗು ಸಿನಿಮಾ ರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ತಮ್ಮದೇ ಆದ ಸ್ಟಾರ್‌ಡಮ್ ಹೊಂದಿರುವ ನಟ ರಾಮ್ ಪೋತಿನೇನಿ. ಉಸ್ತಾದ್ ರಾಮ್ ಪೋತಿನೇನಿ ಹಾಗೂ ಬೋಯಾಪಾಟಿ ಶ್ರೀನು ಕಾಂಬೀನೇಶನ್ನಲ್ಲಿ ಹೊಸ ಸಿನಿಮಾ ರೆಡಿ ಆಗಿದೆ. ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ.
ಪವರ್‌ಫುಲ್ ಟೈಟಲ್ ಅನಾವರಣ: 'ಸ್ಕಂದ'ನಾಗಿ ಉಸ್ತಾದ್ ರಾಮ್ ಪೋತಿನೇನಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಸಣ್ಣ ಗ್ಲಿಂಪ್ಸ್ ಮೂಲಕ ಚಿತ್ರತಂಡ ಪವರ್ ಫುಲ್ ಟೈಟಲ್ ಅನಾವರಣಗೊಳಿಸಿದೆ. ಕಾರ್ತಿಕೇಯ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಮತ್ತೊಂದು ಹೆಸರೇ ಸ್ಕಂದ. ಸ್ಕಂದ ಎಂಬ ಶೀರ್ಷಿಕೆಯಲ್ಲೇ ಸಿನಿಮಾ ರೆಡಿ ಆಗಿದೆ, ಪಂಚಿಂಗ್ ಡೈಲಾಗ್ ಮೂಲಕ ಮಾಸ್ ಅವತಾರದಲ್ಲಿ ರಾಮ್ ಪೋತಿನೇನಿ ಅಬ್ಬರಿಸಿದ್ದಾರೆ.
ಮಾಸ್ ಅವತಾರದಲ್ಲಿ ಲವರ್ ಬಾಯ್: ಈಗಾಗಲೇ ಬಣ್ಣದ ಲೋಕದಲ್ಲಿ ಲವರ್ ಬಾಯ್ ಆಗಿ ಮಿಂಚಿರುವ ರಾಮ್ ಪೋತಿನೇನಿ ಮೊದಲ ಬಾರಿಗೆ ಸ್ಕಂದ ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ನಟಿಸಿದ್ದಾರೆ. ಕನ್ನಡತಿ ಶ್ರೀಲೀಲಾ ರಾಮ್ ಜೋಡಿಯಾಗಿದ್ದಾರೆ. ಸಂತೋಷ್ ಡಿಟೇಕ್ ಕ್ಯಾಮರಾ ವರ್ಕ್, ತಮನ್ ಎಸ್.ಎಸ್. ಮ್ಯೂಸಿಕ್ ಕಿಕ್ ಬಹುನಿರೀಕ್ಷಿತ ಚಿತ್ರಕ್ಕಿದೆ.
ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ತೆರೆಗೆ: ಚಿತ್ರವನ್ನು ಶ್ರೀನಿವಾಸ್ ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿ ಶ್ರೀನಿವಾಸ್ ಚಿತ್ತೂರಿ ಅವರು ನಿರ್ಮಾಣ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಸೌತ್ ಹಾಗೂ ಪವನ್ ಕುಮಾರ್ ಅರ್ಪಿಸುತ್ತಿರುವ ಸ್ಕಂದ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿದೆ. ನಟನ ಮಾಸ್ ಅವತಾರ, ಪವರ್ ಫುಲ್ ಟೈಟಲ್ ಮೂಲಕ ಸ್ಕಂದ ಅಬ್ಬರ ಜೋರಾಗಿದೆ.