ಕರ್ನಾಟಕ

karnataka

ETV Bharat / entertainment

'RC15' ಸೆಟ್​ನಲ್ಲಿ RRR ಸ್ಟಾರ್ ಪ್ರೀ ಬರ್ತ್‌ಡೇ ಸೆಲೆಬ್ರೇಶನ್: ಆಸ್ಕರ್‌ ತಾರೆಗೆ ಹೂಮಳೆ - ಕಿಯಾರಾ ಅಡ್ವಾಣಿ

RC15 ಶೂಟಿಂಗ್​ ಸೆಟ್​ನಲ್ಲಿ ನಟ ರಾಮ್​ ಚರಣ್​ ಅವರ ಪ್ರೀ ಬರ್ತ್​ ಡೇ ಸೆಲೆಬ್ರೇಶನ್​ ನಡೆಯಿತು.

Ram Charan birthday celebration
ರಾಮ್​​ ಚರಣ್​​ ಪ್ರೀ ಬರ್ತ್​ ಡೇ ಸೆಲೆಬ್ರೇಶನ್

By

Published : Mar 26, 2023, 1:28 PM IST

ಆರ್​ಆರ್​ಆರ್​ ಸಿನಿಮಾದಲ್ಲಿ ಅಮೋಘ ಅಭಿನಯದ ಮೂಲಕ ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿರುವ ಸೌತ್​ ಸೂಪರ್​ ಸ್ಟಾರ್​ ರಾಮ್​​ ಚರಣ್​​ ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಆದ್ರೆ ಅವರ ಮುಂದಿನ ಸಿನಿಮಾ ಸೆಟ್​ನಲ್ಲಿ ಈಗಾಗಲೇ ಪ್ರೀ ಬರ್ತ್​ ಡೇ ಸೆಲೆಬ್ರೇಶನ್​ ನಡೆದಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

'RC15' ರಾಮ್​ ಚರಣ್​ ಅವರ ಮುಂದಿನ ಚಿತ್ರ. ಇತ್ತೀಚೆಗಷ್ಟೇ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿರುವ ಬಾಲಿವುಡ್​ ಬಹುಬೇಡಿಕೆಯ ತಾರೆ ಕಿಯಾರಾ ಅಡ್ವಾಣಿ ಚಿತ್ರದ ನಾಯಕಿ. 'RC15' ಎಂಬ ತಾತ್ಕಾಲಿಕ ಶೀರ್ಷಿಕೆಯ ಸಿನಿಮಾ ಶೂಟಿಂಗ್​ ಭರದಿಂದ ಸಾಗುತ್ತಿದೆ. ಆಸ್ಕರ್​ ಸಮಾರಂಭ ಮುಗಿಸಿ ಬಂದಿರುವ ರಾಮ್​ ಚರಣ್​ ಇತ್ತೀಚೆಗಷ್ಟೇ ತಮ್ಮ ಶೂಟಿಂಗ್​ ಸೆಟ್​ಗೆ ಮರಳಿದ್ದರು.

'RC15' ಸೆಟ್​ನಲ್ಲಿ ಗುಲಾಬಿ ದಳಗಳ ಸುರಿಮಳೆ ನಡುವೆ ಕೇಕ್ ಕತ್ತರಿಸುವ ಮೂಲಕ ರಾಮ್​ಚರಣ್​ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿದೆ. ಆರ್​ಆರ್​ಆರ್​ ತಾರೆಯ ಪ್ರೀ ಬರ್ತ್‌ ಡೇ ಸೆಲೆಬ್ರೇಶನ್​ನಲ್ಲಿ ಕಿಯಾರಾ ಅಡ್ವಾಣಿ, ನಿರ್ದೇಶಕ ಎಸ್.ಶಂಕರ್, ನಿರ್ಮಾಪಕ ದಿಲ್‌ ರಾಜು ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಹುಟ್ಟುಹಬ್ಬಾಚರಣೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಮೆಚ್ಚುಗೆ ಸಂಪಾದಿಸಿವೆ.

ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಹೈ ಬಜೆಟ್ ಚಿತ್ರದ ಒಂದು ಹಾಡಿನ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಒಂದು ಹಂತದ ಶೂಟಿಂಗ್​​ ಮುಗಿಯುತ್ತಿದ್ದಂತೆ ಆರ್‌ಸಿ 15 ಸಿಬ್ಬಂದಿ ನಾಯಕ ನಟನ ಹುಟ್ಟುಹಬ್ಬ ಆಯೋಜಿಸಿ ಸರ್​ಪ್ರೈಸ್​ ಕೊಟ್ಟರು. ರಾಮ್​​ ಚರಣ್​​ ವೈಟ್​ ಪ್ಯಾಂಟ್​, ಸ್ಕೈ ಬ್ಲ್ಯೂ ಶರ್ಟ್ ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಕಿಯಾರಾ ಅವರು ಬ್ಲ್ಯೂ ಡೆನಿಮ್​, ವೈಟ್​ ಕ್ರಾಪ್​ ಟಾಪ್‌ನಲ್ಲಿ ಶೋಭಿಸುತ್ತಿದ್ದರು. ಗುಲಾಬಿ ದಳಗಳ ಸುರಿಮಳೆ ನಡುವೆ ರಾಮ್​ಚರಣ್​ ಕೇಕ್​ ಕತ್ತರಿಸಿದ್ದಾರೆ.

ಈ ಸಂಭ್ರಮದ ಚಿತ್ರಗಳೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ನಟನ ಜನ್ಮದಿನಕ್ಕೂ ಮುಂಚಿತವಾಗಿಯೇ ಶುಭ ಕೋರಲಾಗುತ್ತಿದೆ. ಅಭಿಮಾನಿಗಳು ಮೆಚ್ಚಿನ ತಾರೆಗೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ. ಪ್ರೀ ಬರ್ತ್​ ಡೇ ಸೆಲೆಬ್ರೇಶನ್​ ಹೀಗಿರಬೇಕಾದರೆ, ನಾಳೆಯ ಜನ್ಮ ದಿನಾಚರಣೆಯೂ ಜೋರಾಗಿಯೇ ಇರಲಿದೆ ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.

ಇದನ್ನೂ ಓದಿ:ನಾಟು ನಾಟು ಕ್ರೇಜ್: RC15 ಶೂಟಿಂಗ್​ ಸೆಟ್​​ ಮರಳಿದ ರಾಮ್​ ಚರಣ್​ ಜೊತೆ ಕುಣಿದು ಕುಪ್ಪಳಿಸಿದ ಪ್ರಭುದೇವ ಟೀಂ

ಕೆಲವು ದಿನಗಳ ಹಿಂದೆ ರಾಮ್​ ಚರಣ್​ ಈ ಸೆಟ್​ಗೆ ಮರಳಿದಾಗ ಅವರಿಗೆ ಪ್ರಭುದೇವ ಆ್ಯಂಡ್​ ಟೀಂ ಸರ್​ಪ್ರೈಸ್​ ಕೊಟ್ಟಿತ್ತು. ಪ್ರಭುದೇವ ಸೇರಿದಂತೆ ಸುಮಾರು 100 ಮಂದಿ ಆಸ್ಕರ್​​ ವಿಜೇತ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿ, ರಾಮ್​ ಚರಣ್‌ರನ್ನು ಬರಮಾಡಿಕೊಂಡಿದ್ದರು.

ಇದನ್ನೂ ಓದಿ:ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳು: ರಾಮ್ ಚರಣ್ ನಂಬರ್​ 1, ಎರಡನೇ ಸ್ಥಾನದಲ್ಲಿ ದೀಪಿಕಾ

ಈ ಚಿತ್ರದ ಬಗ್ಗೆ ಹೇಳುವುದಾದರೆ, ಮಗಧೀರ ನಟ ರಾಮ್​ ಚರಣ್​​ ಐಎಎಸ್ ಅಧಿಕಾರಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ರಾಮ್​ ಚರಣ್​ ಜೋಡಿಯಾಗಿ ಕಿಯಾರ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗದ ಎಸ್.ಜೆ.ಸೂರ್ಯ ಕೂಡ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ನಿರ್ದೇಶಕ ಶಂಕರ್ ಮತ್ತು ರಾಮ್​ ಚರಣ್​ ಮೊದಲ ಬಾರಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

ABOUT THE AUTHOR

...view details