ಕರ್ನಾಟಕ

karnataka

ETV Bharat / entertainment

Big B- Rajini reunited: ಹೊಸ ಸಾಹಸಕ್ಕಿಳಿದ ಲೈಕಾ ಪ್ರೊಡಕ್ಷನ್​: 32 ವರ್ಷಗಳ ಬಳಿಕ ಮತ್ತೆ ಒಂದಾದ್ರು ರಜಿನಿ- ಬಚ್ಚನ್​ - Big B Rajni reunited

ಲೈಕಾ ಪ್ರೊಡಕ್ಷನ್ ನಿರ್ಮಾಣದ ಹೊಸ ಸಿನಿಮಾದಲ್ಲಿ 32 ವರ್ಷಗಳ ನಂತರ ಕಾಲಿವುಡ್​ ಸೂಪರ್​ ಸ್ಟಾರ್ ರಜಿನಿಕಾಂತ್​ ಮತ್ತು ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ನಟಿಸಲಿದ್ದಾರೆ.

Big B- Rajni reunited
ರಜಿನಿ- ಬಚ್ಚನ್​

By

Published : Jun 10, 2023, 7:27 PM IST

ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್​ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಇಂಡಿಯನ್​, ಖೈದಿ ನಂಬರ್​ 150, 2.0, ದರ್ಬಾರ್​, ಇತ್ತೀಚೆಗೆ ಪೊನ್ನಿಯನ್​ ಸೆಲ್ವನ್​ನಂತಹ ಹಿಟ್​ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್​ ಕಾಲಿವುಡ್​ ಸೂಪರ್​ ಸ್ಟಾರ್​ ರಜಿನಿಕಾಂತ್​ ಜೊತೆ ಮತ್ತೆ ಕೈ ಜೋಡಿಸಿದೆ.

ರಜಿನಿಯ 170ನೇ ಚಿತ್ರಕ್ಕೆ ಲೈಕಾ ಹಣ ಸುರಿಯುತ್ತಿದೆ. ಅದರಲ್ಲೂ ವಿಶೇಷ ಅಂದ್ರೆ ಮೆಗಾಸ್ಟಾರ್​ ಜೊತೆ ಬಾಲಿವುಡ್​ ದಂತಕಥೆ, ಬಿಗ್​ ಬಿ ಅಮಿತಾಭ್​ ಬಚ್ಚನ್​ ಕೂಡ ನಟಿಸುತ್ತಿದ್ದಾರೆ. ಇದು ಸಿನಿ ಪ್ರೇಮಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ. ಇವರಿಬ್ಬರು ಕೂಡ ಭಾರತೀಯ ಚಿತ್ರರಂಗದ ಘಟಾನುಘಟಿ ನಾಯಕರು ಕೂಡ ಹೌದು.

ಈ ಹಿಂದೆ ಇಬ್ಬರು ಸೂಪರ್​ ಸ್ಟಾರ್​ಗಳು ಅಂದಾ ಕಾನೂನ್, ಗೆರಾಫ್ತಾರ್ ಮತ್ತು ಹಮ್ ಸಿನಿಮಾಗಳಲ್ಲಿ ನಟಿಸಿದ್ದರು. ಇವುಗಳು ಪ್ರೇಕ್ಷಕರನ್ನು ವಿಶೇಷವಾಗಿ ಆಕರ್ಷಿಸಿತ್ತು. ರಜಿನಿ ಮತ್ತು ಬಚ್ಚನ್​ ಅಭಿನಯಕ್ಕೂ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು. ಈ ಸಿನಿಮಾಗಳ ಯಶಸ್ಸಿನ ನಂತರ ಇದೀಗ ಮತ್ತೆ 30 ವರ್ಷಗಳ ಬಳಿಕ ರಜಿನಿಕಾಂತ್​ ಮತ್ತು ಅಮಿತಾಭ್​ ಬಚ್ಚನ್​ ಒಟ್ಟಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಸಿನಿಮಾಗೆ ಲೈಕಾ ಪ್ರೊಡಕ್ಷನ್​ ಹಣ ಹಾಕುತ್ತಿದೆ.

ಇದನ್ನೂ ಓದಿ:Kangana Ranaut.. 'ಬಿಳಿ ಇಲಿ ರಾಮನ ಪಾತ್ರಕ್ಕೆ ಬೇಡ': ಭಗವಾನ್​ನಂತೆ ಯಶ್​ ಕಾಣುತ್ತಾರೆಂದ ಕಂಗನಾ

ಬಹಳ ಅದ್ಧೂರಿಯಾಗಿ ಮೂಡಿಬರಲಿರುವ ಈ ಪ್ರಾಜೆಕ್ಟ್​ ಮುಂದಿನ ತಿಂಗಳ ಅಂತ್ಯಕ್ಕೆ ಟೇಕಾಫ್​ ಆಗಲಿದೆ. ರಜಿನಿ ಮತ್ತು ಬಚ್ಚನ್​ ನಟಿಸುತ್ತಿರುವ ಈ ಸಿನಿಮಾವನ್ನು ಜೈ ಭೀಮ್​ ಖ್ಯಾತಿಯ ಟಿಜೆ ಜ್ಞಾನವೇಲ್​ ನಿರ್ದೇಶಿಸಲಿದ್ದಾರೆ. ಜೈ ಭೀಮ್ ಮೂಲಕ ಇಂಡಿಯನ್ ಸಿನಿಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಜ್ಞಾನವೇಲ್ ಇದೀಗ ರಜಿನಿ ಹಾಗೂ ಬಚ್ಚನ್​ರಂತಹ ಸೂಪರ್ ಸ್ಟಾರ್ಸ್​ಗೆ ಆಕ್ಷನ್ ಕಟ್ ಹೇಳುತ್ತಿರುವುದು ಈ ಪ್ರಾಜೆಕ್ಟ್ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

'ಜೈಲರ್​'ನಲ್ಲಿ ರಜಿನಿ ಬ್ಯುಸಿ:ಸದ್ಯ ರಜಿನಿಕಾಂತ್​ ಜೈಲರ್​ ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದಾರೆ. ನೆಲ್ಸನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಶೂಟಿಂಗ್​ ಈಗಾಗಲೇ ಮುಕ್ತಾಯಗೊಂಡಿದೆ. ಆಗಸ್ಟ್​ 10ರಂದು ತೆರೆ ಕಾಣಲಿದೆ. ​ ಸಿನಿಮಾವನ್ನು ಕಲಾನಿಧಿ ಮಾರನ್ ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ. ತಮಿಳಿನ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಸಂಗೀತ ನೀಡಿದ್ದಾರೆ.​

ಸ್ಯಾಂಡಲ್​ವುಡ್​ ಹ್ಯಾಟ್ರಿಕ್​ ಹೀರೋ ಶಿವರಾಜ್​ ​ಕುಮಾರ್​, ಮಲಯಾಳಂ ಸೂಪರ್​ ಸ್ಟಾರ್​ ಮೋಹನ್​ ಲಾಲ್​, ಜಾಕಿ ಶ್ರಾಫ್​, ರಮ್ಯಾ ಕೃಷ್ಣ, ಹಾಸ್ಯನಟ ಸುನೀಲ್​ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ. ಆರ್.ನಿರ್ಮಲ್​ ಸಂಕಲನ ಮತ್ತು ವಿಜಯ್ ಕಾರ್ತಿಕ್ ಕಣ್ಣನ್ ಛಾಯಾಗ್ರಹಣ ಚಿತ್ರಕ್ಕಿದೆ. ಅದ್ಧೂರಿ ವೆಚ್ಚದಲ್ಲಿ ತಯಾರಾದ ಜೈಲರ್ ಚಿತ್ರವನ್ನು ಚೆನ್ನೈ, ನೈವೇಲಿ, ಹೈದರಾಬಾದ್, ಕೊಚ್ಚಿ ಸೇರಿದಂತೆ ದೇಶದ ಹಲವೆಡೆ ದೊಡ್ಡ ವೆಚ್ಚದಲ್ಲಿ ಚಿತ್ರೀಕರಿಸಲಾಗಿದೆ.

'ಪ್ರಾಜೆಕ್ಟ್​ ಕೆ'ಗೆ ಬಿಗ್​ ಬಿ ಸಿದ್ಧ:ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಅವರೊಂದಿಗೆ 'ಪ್ರಾಜೆಕ್ಟ್ ಕೆ' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಪ್ರಾಜೆಕ್ಟ್ ಕೆ ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾದ ದ್ವಿಭಾಷಾ (ಹಿಂದಿ ಮತ್ತು ತೆಲುಗು) ಚಲನಚಿತ್ರವಾಗಿದೆ. ರಿಭು ದಾಸ್‌ಗುಪ್ತಾ ಅವರ ಮುಂದಿನ ಚಿತ್ರ 'ಸೆಕ್ಷನ್ 84' ರಲ್ಲಿಯೂ ಬಿಗ್ ಬಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:On Father's Day.. ಪತ್ನಿ ಪ್ರಿಯಾಂಕಾ ಚೋಪ್ರಾ ಜೊತೆಗೆ ಫಾದರ್ಸ್​ ಡೇ ಆಚರಣೆ; ನಿಕ್​ ನೀಡಿದ ಕಾರಣ ಇದು!

ABOUT THE AUTHOR

...view details