ಮುಂಬೈ (ಮಹಾರಾಷ್ಟ್ರ):ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನ ಹೊಸ ಸೀಸನ್‌ಗಾಗಿ ಶಿಲ್ಪಾ ಶೆಟ್ಟಿ ಅವರ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ ಅವರನ್ನು ಸಂಪರ್ಕಿಸಲಾಗಿದೆ. ಒಂದು ಮೂಲದ ಪ್ರಕಾರ, ರಾಜ್ ಮತ್ತು ಕಾರ್ಯಕ್ರಮದ ತಯಾರಕರ ನಡುವೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.
ಎಲ್ಲವೂ ಸರಿಯಾಗಿದ್ದರೆ ರಾಜ್ ಬಿಗ್ ಬಾಸ್ 16 ರಲ್ಲಿ ಸ್ಪರ್ಧಿಗಳಲ್ಲಿ ಒಬ್ಬರಾಗಬಹುದಿತ್ತು. ಅಶ್ಲೀಲ ವಿಡಿಯೋಗಳನ್ನು ನಿರ್ಮಿಸಿದ ಆರೋಪದಲ್ಲಿ ರಾಜ್ ಅವರನ್ನು ಜುಲೈ 2021 ರಲ್ಲಿ ಬಂಧಿಸಲಾಗಿತ್ತು. ಮತ್ತು ಸೆಪ್ಟೆಂಬರ್‌ನಲ್ಲಿ ಜಾಮೀನು ಕೂಡಾ ಸಿಕ್ಕಿತ್ತು. ಆ ಬಳಿಕ ರಾಜ್ ಕುಂದ್ರಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಕಡಿಮೆ. ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಅವರು ಮುಖವಾಡ ಸಹ ಹಾಕಿದ್ದಿದೆ.