ಕರ್ನಾಟಕದಾದ್ಯಂತ ಎಲ್ಲಿ ನೋಡಿದ್ರೂ 'ಟೋಬಿ' ಸಿನಿಮಾದ್ದೇ ಕ್ರೇಜ್. ಟ್ರೇಲರ್ನಿಂದಲೇ ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಹವಾ ಕ್ರಿಯೇಟ್ ಮಾಡಿದೆ. 'ನಾನು ನೋಡೋದಕ್ಕೆ ಸಿಂಪಲ್ ಆದ್ರೂ ನನ್ನಲ್ಲೊಬ್ಬ ಮಾಸ್ ನಟನಿದ್ದಾನೆ' ಅನ್ನೋದನ್ನು ಈ ಚಿತ್ರದ ಮೂಲಕ ರಾಜ್ ಬಿ. ಶೆಟ್ಟಿ ಪ್ರೂವ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಒಂದು ಕೋಟಿಗೂ ಹೆಚ್ಚು ಜನರು ಟೋಬಿ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ಅದರಲ್ಲಿ ಬರುವ ಪ್ರತಿ ಸಂಭಾಷಣೆಗಳು ಸಿನಿಮಾ ಮೇಲಿನ ಅಭಿಮಾನಿಗಳ ನಿರೀಕ್ಷೆಯನ್ನು ಮುಗಿಲೆತ್ತರಕ್ಕೇರಿಸಿದೆ.
'ಹರಕೆ ಕುರಿಯೊಂದು ತಪ್ಪಿಸಿಕೊಂಡಿದೆ. ಯಾವುದೇ ಕಾರಣಕ್ಕೂ ತಪ್ಪಿಸಿಕೊಂಡಿರುವ ಕುರಿ ವಾಪಸ್ ಬರಬಾರದು. ಬಂದರೆ ಅದು ಕುರಿಯಾಗಿರುವುದಿಲ್ಲ, ಮಾರಿಯಾಗಿರುತ್ತದೆ' ಎಂಬ ಪಂಚಿಂಗ್ ಡೈಲಾಗ್ ಕ್ಯೂರಿಯಾಸಿಟಿ ಹುಟ್ಟು ಹಾಕಿದೆ. ಜೊತೆಗೆ, 'ಟೋಬಿ ಕಣ್ಣು ಮುಚ್ಚಿದರೆ ಒಳ್ಳೇದಿತ್ತು, ಆದರೆ ಅವನು ಕಣ್ಣು ಬಿಟ್ಟಾಗಿತ್ತು' ಎಂಬ ಸಂಭಾಷಣೆ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ.
ಟೋಬಿ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಮೂರು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರೇಕ್ಷಕರನ್ನು ರಂಜಿಸುವ ದೃಷ್ಟಿಯಿಂದ ರಿಯಲ್ ಆಗಿ ಮೂಗಿಗೆ ಮೂಗುತ್ತಿ ಚುಚ್ಚಿಕೊಂಡು ಅವರು ಅಭಿನಯಿಸಿರೋದು ನೋಡಿದ್ರೆ ಅವರ ಡೆಡಿಕೇಷನ್ ಎಂತಹದ್ದು ಅನ್ನೋದು ಗೊತ್ತಾಗುತ್ತೆ. ಈ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಟೋಬಿ ಚಿತ್ರತಂಡ ರಾಜ್ ಬಿ. ಶೆಟ್ಟಿಯ ಪಾತ್ರದ ಬಗ್ಗೆ ಕಲರ್‌ಫುಲ್ ಮೇಕಿಂಗ್ ಅನ್ನು ರಿವೀಲ್ ಮಾಡಿದೆ.
ಅಷ್ಟೇ ಅಲ್ಲ, ಟೋಬಿ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ರೀಚ್ ಮಾಡಲು ರಾಜ್ ಬಿ.ಶೆಟ್ಟಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳ ಪ್ರತಿಷ್ಠಿತ ಕಾಲೇಜುಗಳಲ್ಲಿ ಭರ್ಜರಿ ಪ್ರಮೋಷನ್ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಶೆಟ್ರಿಗೆ ಸಿಕ್ಕ ರೆಸ್ಪಾನ್ಸ್. ಸಹಜವಾಗಿ ಉತ್ತರ ಕರ್ನಾಟಕದ ಜನತೆಗೆ ಟೋಬಿ ಚಿತ್ರದ ಮೇಲೆ ಎಷ್ಟು ಕ್ರೇಜ್ ಇದೆ ಅನ್ನೋದಕ್ಕೆ ಈ ದೃಶ್ಯಗಳೇ ಉದಾಹರಣೆ.