ನಟಿ ಪ್ರಣೀತಾ ಸುಭಾಷ್ ಅಭಿಮಾನಿಗಳ ಕೋಪವನ್ನು ಈ ಮೂಲಕ ತಣ್ಣಗಾಗಿಸಿದ್ದಾರೆ. ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಂತರ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದರು. ಈಗ ಅವರ ಪತಿಯ ಜನ್ಮದಿನದಂದು ಸಂತಸದ ವಿಷಯವನ್ನು ಹಂಚಿಕೊಂಡಿದ್ದಾರೆ. ಪ್ರಣೀತಾ ಅವರು ತಾಯಿಯಾಗುತ್ತಿದ್ದಾರೆ. ಈ ಸಂಬಂಧ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಾಯಿಯಾಗುತ್ತಿದ್ದಾರೆ ಪ್ರಣೀತಾ : ವಿಭಿನ್ನವಾದ ಫೋಟೋ ಹಂಚಿಕೊಂಡ ನಟಿ - ತಾಯಿಯಾಗುತ್ತಿದ್ದಾರೆ ನಟಿ ಪ್ರಣೀತಾ
ಪ್ರಣೀತಾ ಅವರು ಕಳೆದ ವರ್ಷ ಮೇ 30ರಂದು ನಿತಿನ್ ಜತೆ ಗುಟ್ಟಾಗಿ ಮದುವೆ ಆಗಿದ್ದರು. ದರ್ಶನ್ ಅಭಿನಯದ ಪೊರ್ಕಿ ಸಿನಿಮಾದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಇವರು ಕಾಲಿಟ್ಟು ನಂತರ ತೆಲುಗು, ತಮಿಳು ಸಿನಿಮಾಗಳಲ್ಲೂ ತಮ್ಮದೇ ಹೆಸರು ಗಳಿಸಿಕೊಂಡಿದ್ದಾರೆ..
ಫೋಟೋದಲ್ಲಿ ನಿತಿನ್ ಅವರು ಪ್ರಣಿತಾರನ್ನು ಎತ್ತಿಕೊಂಡಿದ್ದು, ಮತ್ತೊಂದು ಫೋಟೋದಲ್ಲಿ ಪ್ರಣೀತಾ ಮತ್ತು ನಿತಿನ್ ಪ್ರಗ್ನೆಂಟ್ ಕಿಟ್ ಹಿಡಿದಿದ್ದಾರೆ. ಇದೇ ವೇಳೆ ಪ್ರಣೀತಾ ಸ್ಕ್ಯಾನ್ ರಿಪೋರ್ಟ್ ಅನ್ನು ಕ್ಯಾಮೆರಾಗೆ ಪ್ರದರ್ಶಿಸಿದ್ದಾರೆ. ಪ್ರಣೀತಾ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಪ್ರಣೀತಾ ಅವರು ಕಳೆದ ವರ್ಷ ಮೇ 30ರಂದು ನಿತಿನ್ ಜತೆ ಗುಟ್ಟಾಗಿ ಮದುವೆ ಆಗಿದ್ದರು. ದರ್ಶನ್ ಅಭಿನಯದ ಪೊರ್ಕಿ ಸಿನಿಮಾದ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಇವರು ಕಾಲಿಟ್ಟು ನಂತರ ತೆಲುಗು, ತಮಿಳು ಸಿನಿಮಾಗಳಲ್ಲೂ ತಮ್ಮದೇ ಹೆಸರು ಗಳಿಸಿಕೊಂಡಿದ್ದಾರೆ.