ಕರ್ನಾಟಕ

karnataka

ETV Bharat / entertainment

ನೀನೇನಾ, ನೀನೇನಾ..: 'ಪ್ರಭುತ್ವ'ದ ಮೊದಲ ಮೆಲೊಡಿ ಹಾಡು ಬಿಡುಗಡೆ - ಈಟಿವಿ ಭಾರತ ಕನ್ನಡ

ನಟ ಚೇತನ್​ ಚಂದ್ರ 'ಪ್ರಭುತ್ವ' ಸಿನಿಮಾ ಮೂಲಕ ಕಮ್​ಬ್ಯಾಕ್​ ಆಗಿದ್ದಾರೆ. ಚಿತ್ರತಂಡ ಮೊದಲ ಹಾಡನ್ನು ಬಿಡುಗಡೆಗೊಳಿಸಿದೆ.

prabhutva
ಪ್ರಭುತ್ವ

By

Published : Mar 5, 2023, 10:56 AM IST

Updated : Mar 5, 2023, 11:40 AM IST

ನಟ ಚೇತನ್​ ಚಂದ್ರ ಅವರು ರಾಜಧಾನಿ, ಸಂಯುಕ್ತ 2 ಹಾಗು ಕುಂಭರಾಶಿ ಸಿನಿಮಾಗಳ‌ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಬಹಳ‌ ವರ್ಷಗಳ ಬಳಿಕ ಮತ್ತೆ 'ಪ್ರಭುತ್ವ'ದ ಮೂಲಕ ಅದೃಷ್ಟ ಪರೀಕ್ಷೆಗಿಳಿದಿರುವ ಚೇತನ್ ಈ‌ ಸಿನಿಮಾದಲ್ಲಿ ಗೆಲ್ಲುವ ಪಣ ತೊಟ್ಟಿದ್ದಾರೆ‌.‌ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ 'ಪ್ರಭುತ್ವ' ಸಿನಿಮಾ ಇದೀಗ 'ನೀನೇನಾ ನೀನೇನಾ' ಎಂಬ ಮೆಲೊಡಿ ಸಾಂಗನ್ನು ಬಿಡುಗಡೆ ಮಾಡಿದೆ.

ಚೇತನ್​ ಚಂದ್ರ ಮಾತನಾಡಿ, "ಪ್ರಭುತ್ವ ಚಿತ್ರ ನನ್ನ ಕರಿಯರ್‌ನಲ್ಲೇ ಬಿಗ್ ಬಜೆಟ್ ಸಿನಿಮಾ. ಇದಕ್ಕೆ ಪ್ರಮುಖ ಕಾರಣ ನಿರ್ಮಾಪಕರು. ಯಾವುದಕ್ಕೂ ಕೊರತೆ ಇಲ್ಲದೆ ಸಿನಿಮಾ ನಿರ್ಮಾಣ‌ ಮಾಡಿದ್ದಾರೆ. ನಿರ್ದೇಶಕ ರಂಗನಾಥ್ ಚಿತ್ರವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. 'ನೀನೇನಾ ನೀನೇನಾ' ಹಾಡನ್ನು ಬಿಡುಗಡೆಗೊಳಿಸಿದ್ದೇವೆ. ನಿರ್ದೇಶಕ ಹರಿ ಸಂತೋಷ್ ಹಾಡು ಬರೆದಿದ್ದು, ಕಾರ್ತಿಕ್ ಹಾಗೂ ಸುಪ್ರಿಯಾ ರಾಮ್ ಸೊಗಸಾಗಿ ಧ್ವನಿ ನೀಡಿದ್ದಾರೆ. ಎಮಿಲ್ ಅವರು ಸಂಗೀತ ಸಂಯೋಜನೆ ಮಾಡಿದ್ದು, ಸಿನಿಮಾಗೆ ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಸದ್ಯದಲ್ಲೇ ಟ್ರೇಲರ್ ಬಿಡುಗಡೆಯಾಗಲಿದೆ. ಎಲ್ಲಾ ಕಲಾವಿದರು ಉತ್ತಮವಾಗಿ ಅಭಿನಯಿಸಿದ್ದಾರೆ" ಎಂದು ಹೇಳಿದರು.

ಇದನ್ನೂ ಓದಿ:ಕನ್ನಡಕ್ಕೆ ಮತ್ತೊಂದು ದೊಡ್ಡ ಗೆಲುವಿನ ಲಕ್ಷಣ: ಕಬ್ಜ ಟ್ರೇಲರ್ ಅನಾವರಣಗೊಳಿಸಿದ ಅಮಿತಾಭ್ ಬಚ್ಚನ್

"ಈ ಹಿಂದೆ "ಅರಿವು" ಹಾಗೂ "ಕೂಗು" ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದೆ. ಇದು ನನ್ನ ಮೂರನೇ ಚಿತ್ರ. ನಿರ್ಮಾಪಕ ರವಿರಾಜ್ ಅವರ ತಂದೆ ಮೇಘಡಹಳ್ಳಿ ಡಾ.ಶಿವಕುಮಾರ್ ಅವರೇ ಕಥೆ ಬರೆದಿದ್ದಾರೆ. ಸಂಭಾಷಣೆ ವಿನಯ್ ಅವರದು. ಎಮಿಲ್ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಚಿತ್ರದಲ್ಲಿದೆ. ಇದರಲ್ಲಿ ಮೊದಲ ಹಾಡನ್ನು ಬಿಡುಗಡೆಗೊಳಿಸಿದ್ದೇವೆ. ಈ ಸಿನಿಮಾವು ಮತದಾನದ ಮಹತ್ವ ಸಾರುತ್ತದೆ. ಚೇತನ್ ಚಂದ್ರ, ಪಾವನ, ಶರತ್ ಲೋಹಿತಾಶ್ವ, ವಿಜಯ್ ಚೆಂಡೂರ್, ಡ್ಯಾನಿ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಉತ್ತಮ ಕಾರ್ಯವೈಖರಿಯಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ" ಎಂದು ನಿರ್ದೇಶಕ ಆರ್.ರಂಗನಾಥ್ ನುಡಿದರು.

ನಾಯಕಿ ಪಾವನ ಮಾತನಾಡಿ, ‌"ಈ‌ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡಿದ್ದೇನೆ. ಸದ್ಯ ಬಿಡುಗಡೆಯಾಗಿರುವ ಹಾಡು ತುಂಬಾ ಚೆನ್ನಾಗಿದೆ" ಎಂದರು. ಬಳಿಕ, "ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಮೊದಲ ಮೊಲೋಡಿ ಸಾಂಗ್ ಬಿಡುಗಡೆಯಾಗಿದೆ. ಕಾರ್ತಿಕ್ ಹಾಗೂ ಸುಪ್ರಿಯಾರಾಮ್ ಈ ಹಾಡನ್ನು ಹಾಡಿದ್ದಾರೆ" ಎಂದು ಸಂಗೀತ ನಿರ್ದೇಶಕ ಎಮಿಲ್ ತಿಳಿಸಿದರು.

ಚಿತ್ರತಂಡ ಹೀಗಿದೆ..: ಚೇತನ್ ಚಂದ್ರ ಮತ್ತು ಪಾವನ ಅಲ್ಲದೇ ಹಿರಿಯ ನಟ‌ ಶರತ್ ಲೋಹಿತಾಶ್ವ, ವಿಜಯ್ ಚೆಂಡೂರ್, ಡ್ಯಾನಿ ಸೇರಿದಂತೆ ಸಾಕಷ್ಟು ಕಲಾವಿದರಿದ್ದಾರೆ. ರವಿರಾಜ್ ಎಸ್.ಕುಮಾರ್ ನಿರ್ಮಿಸಿದ್ದಾರೆ. ಅಂತೂ ಬಹಳ ವರ್ಷಗಳ ನಂತರ ಚೇತನ್ ಚಂದ್ರ ಒಂದೊಳ್ಳೆ ಕಥೆಯ ಜೊತೆಗೆ ಸಿನಿ ಪ್ರಿಯರ ಮುಂದೆ ಬರೋದಕ್ಕೆ ರೆಡಿಯಾಗಿದ್ದಾರೆ.

ಇದನ್ನೂ ಓದಿ:'ನಿಮ್ಮೆಲ್ಲರ ಆಶೀರ್ವಾದ ರಾದ್ಯಾಳ ಮೇಲಿರಲಿ..': ರಿಷಬ್​ ಶೆಟ್ಟಿ ಮುದ್ದು ಮಗಳ ವಿಡಿಯೋ ನೋಡಿ

Last Updated : Mar 5, 2023, 11:40 AM IST

ABOUT THE AUTHOR

...view details