ಕರ್ನಾಟಕ

karnataka

ದಿ ಕೇರಳ ಸ್ಟೋರಿ ಬ್ಯಾನ್​​.. 'ಸಿನಿಮಾ ನಿಷೇಧಿಸುವ ಹಕ್ಕು ಪಕ್ಷ, ಸರ್ಕಾರಕ್ಕಿಲ್ಲ'ವೆಂದ ನಿರ್ಮಾಪಕರ ಸಂಘ

By

Published : May 9, 2023, 8:03 PM IST

ದಿ ಕೇರಳ ಸ್ಟೋರಿ ಬ್ಯಾನ್ ವಿಚಾರವಾಗಿ ಭಾರತೀಯ ನಿರ್ಮಾಪಕರ ಸಂಘ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

The Kerala Story ban
ದಿ ಕೇರಳ ಸ್ಟೋರಿ ಬ್ಯಾನ್

ಪಶ್ಚಿಮ ಬಂಗಾಳದಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ನಿಷೇಧ ಮಾಡಲಾಗಿದೆ. ಈ ಬ್ಯಾನ್​ ಅನ್ನು ಖಂಡಿಸಿರುವ ಭಾರತೀಯ ನಿರ್ಮಾಪಕರ ಸಂಘ ಇಂದು 'ಚಲನಚಿತ್ರವನ್ನು ಬಿಡುಗಡೆ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಹಕ್ಕು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ಗೆ ಇದೆಯೇ ಹೊರತಾಗಿ ಬೇರೆ ಯಾರಿಗೂ ಇಲ್ಲ' ಎಂದು ಹೇಳಿದೆ. "ದ್ವೇಷ ಮತ್ತು ಹಿಂಸಾಚಾರದ ಘಟನೆ"ಗಳನ್ನು ನಿಯಂತ್ರಿಸಲು ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದಲ್ಲಿ ದಿ ಕೇರಳ ಸ್ಟೋರಿ ಚಲನಚಿತ್ರದ ಪ್ರದರ್ಶನವನ್ನು ಚಿತ್ರಮಂದಿರಗಳಲ್ಲಿ ನಿಷೇಧಿಸುವಂತೆ ಆದೇಶಿಸಿದ ಒಂದು ದಿನದ ನಂತರ ಭಾರತೀಯ ನಿರ್ಮಾಪಕರ ಸಂಘ ಈ ಹೇಳಿಕೆಯನ್ನು ನೀಡಿದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು, ಸಾರ್ವಜನಿಕ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ತಮಿಳುನಾಡಿನಾದ್ಯಂತ ಮಲ್ಟಿಪ್ಲೆಕ್ಸ್‌ಗಳು ಈ ಚಿತ್ರದ ಪ್ರದರ್ಶನವನ್ನು ಭಾನುವಾರದಿಂದ ರದ್ದುಗೊಳಿಸಿವೆ. ಇತ್ತ ಪಶ್ಚಿಮ ಬಂಗಾಳದಲ್ಲೂ ಸಿನಿಮಾ ಪ್ರದರ್ಶನ ರದ್ದಾಗಿದೆ. ಭಾರತೀಯ ನಿರ್ಮಾಪಕರ ಸಂಘ ಈ ನಿರ್ಧಾರವನ್ನು ಖಂಡಿಸಿದೆ.

"ಈ ಹಿಂದೆ ಹಲವಾರು ಸಂದರ್ಭಗಳಲ್ಲಿ ನಾವು ಹೇಳಿದಂತೆ, ಚಲನಚಿತ್ರ ಬಿಡುಗಡೆ ಕುರಿತ ನಿರ್ಧಾರಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ ನೋಡಿಕೊಳ್ಳುತ್ತದೆ. ಪ್ರೇಕ್ಷಕರಿಗೆ ಸಿನಿಮಾ ನೋಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವ ಆಯ್ಕೆ ಇದೆ. ಅದು ಪ್ರೇಕ್ಷಕರ ಆಯ್ಕೆಯಾಗಿರಬೇಕು. CBFC ಹೊರತುಪಡಿಸಿ ಯಾವುದೇ ಪಕ್ಷಕ್ಕೆ ಸಿನಿಮಾ ಬ್ಯಾನ್​​ ಮಾಡುವ ಹಕ್ಕು ಇಲ್ಲ'' ಎಂದು ಹೇಳಿದೆ.

ಇದನ್ನೂ ಓದಿ:ಕೇರಳ ಸ್ಟೋರಿ ಬ್ಯಾನ್​ 'ರಾಜಕೀಯ ಪ್ರೇರಿತ': ಸಿನಿಮಾ ವೀಕ್ಷಿಸಿ ನಿರ್ಧಾರ ಕೈಗೊಳ್ಳಿ ಎಂದ ನಿರ್ದೇಶಕ

ನಿರ್ದೇಶಕ ಸುದಿಪ್ತೋ ಸೇನ್ ಸಹ ಇಂದು ಈ ಬ್ಯಾನ್​ ವಿಚಾವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರವು "ರಾಜಕೀಯ ಪ್ರೇರಿತ". ಸಿಎಂ ಮಮತಾ ಬ್ಯಾನರ್ಜಿ ಅವರು ಈ ಸಿನಿಮಾ ವೀಕ್ಷಿಸಿಲ್ಲ. ಸಿನಿಮಾ ನೋಡದೇ ಬ್ಯಾನ್​ ಮಾಡಿರುವುದು ದುರದೃಷ್ಟಕರ ಸಂಗತಿ. ಕೇವಲ ಕೆಲ ಜನರ ಅಭಿಪ್ರಾಯಗಳಿಗೆ ಮಹತ್ವ ಕೊಡಬೇಡಿ. ನಮ್ಮ ಈ ಚಲನಚಿತ್ರವನ್ನು ವೀಕ್ಷಿಸಿ ನಂತರ ನಿರ್ಧಾರವನ್ನು ತೆಗೆದುಕೊಳ್ಳಿ ಎಂದು ತಿಳಿಸಿದ್ದರು. ಅಲ್ಲದೇ ಈ ರಾಜ್ಯದಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಮಂದಿಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿತ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಬಂಗಾಳದಲ್ಲಿ ಬ್ಯಾನ್, ಯುಪಿಯಲ್ಲಿ ರತ್ನಗಂಬಳಿ: 4 ದಿನಕ್ಕೆ ₹45 ಕೋಟಿ ಬಾಚಿದ 'ದಿ ಕೇರಳ ಸ್ಟೋರಿ'

ಸುದಿಪ್ತೋ ಸೇನ್ ನಿರ್ದೇಶನದ ದಿ ಕೇರಳ ಸ್ಟೋರಿ ಕೇರಳದ ಮಹಿಳೆಯರ ಸುತ್ತ ಸುತ್ತುತ್ತದೆ. ಯುವತಿಯರು ಮತಾಂತರಗೊಳ್ಳಲು ಅವರ ಮೇಲೆ ಯಾವ ರೀತಿಯಾಗಿ ಒತ್ತಡ ಹೇರಲಾಯಿತು, ಎಂತಹ ಪರಿಸ್ಥಿತಿಗಳು ನಿರ್ಮಾಣವಾದವು ಮತ್ತು ಭಯೋತ್ಪಾದಕ ಗುಂಪಿಗೆ ಹೇಗೆ ನೇಮಕಗೊಂಡರು ಎಂಬುದನ್ನು ಚಿತ್ರಿಸುತ್ತದೆ. ಇದು ನೈಜ ಘಟನೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮೇ 5ರಂದು ಬಿಡುಗಡೆಯಾದ ಈ ಚಿತ್ರ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಹ ಚಲನಚಿತ್ರಕ್ಕೆ ಮನ್ನಣೆ ನೀಡಿದ್ದಾರೆ. ರಾಜಕೀಯ ಪಕ್ಷಗಳಿಂದ ಪರ ವಿರೋಧ ಚರ್ಚೆ ಎದ್ದಿದೆ.

ABOUT THE AUTHOR

...view details