ವಿವಾದಗಳ ನಡುವೆಯೇ ತೆರೆ ಕಂಡ ಬಾಲಿವುಡ್ ಸಿನಿಮಾ ಪಠಾಣ್ ಕಂಡ ಯಶಸ್ಸು ಅಭೂತಪೂರ್ವ. ಬಾಲಿವುಡ್ ಬಹುಬೇಡಿಕೆ ತಾರೆಯರಾದ ಶಾರುಖ್ ಖಾನ್, ದಿಪೀಕಾ ಪಡುಕೋಣೆ, ಜಾನ್ ಅಬ್ರಹಾಂ ನಟನೆಯ ಈ ಸೂಪರ್ ಹಿಟ್ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿ ಭರ್ಜರಿ ಗೆಲುವು ಕಂಡಿದ್ದಾರೆ.
'ಪಠಾಣ್' ಚಿತ್ರ ಆರು ವಾರಗಳಲ್ಲಿ ವಿಶ್ವದಾದ್ಯಂತ 1,000 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆಸಿದೆ. ಇನ್ನೂ 'ಪಠಾಣ್' ಚಿತ್ರಮಂದಿರಗಳಲ್ಲಿ ಓಡುತ್ತಿದೆ. ಶೀಘ್ರದಲ್ಲಿಯೇ ಪ್ರತಿ ಮನೆಯಲ್ಲೂ ಪ್ರಸಾರವಾಗಲಿದೆ ಪಠಾಣ್. ಹೌದು, 'ಪಠಾಣ್' ಏಪ್ರಿಲ್ 24 ರಂದು ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಇದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಆದ್ರೀಗ 'ಪಠಾಣ್' ಕುರಿತು ಹೊಸ ಅಪ್‌ಡೇಟ್ ಒಂದು ಬಂದಿದೆ. ಥಿಯೇಟರ್‌ಗಳಲ್ಲಿ ಪ್ರದರ್ಶನಗೊಂಡ 'ಪಠಾಣ್' ಅನ್ನು ಒಟಿಟಿನಲ್ಲಿ ತೋರಿಸಲಾಗುವುದಿಲ್ಲ. ಬದಲಿಗೆ ಚಿತ್ರಮಂದಿರಗಳಲ್ಲಿ ನೋಡದ ದೃಶ್ಯಗಳನ್ನು OTTನಲ್ಲಿ ತೋರಿಸಲಾಗುತ್ತದೆ.
ಅಮೆಜಾನ್ ಪ್ರೈಮ್‌ನಲ್ಲಿ ಪಠಾಣ್:'ಪಠಾಣ್' ಏಪ್ರಿಲ್ 24ರಂದು ಒಟಿಟಿ ಪ್ಲಾಟ್‌ಫಾರ್ಮ್ ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್ ಆಗಲಿದೆ. ಆದರೆ ಅದಕ್ಕೂ ಮೊದಲು ಚಿತ್ರ ತಯಾರಕರು ದೊಡ್ಡ ಘೋಷಣೆ ಮಾಡಿದ್ದಾರೆ. 'ಪಠಾಣ್' ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ಮಾಹಿತಿ ನೀಡಿದ್ದಾರೆ. ಹಾಗಾಗಿ ಥಿಯೇಟರ್‌ನಲ್ಲಿ ಚಿತ್ರವನ್ನು ವೀಕ್ಷಿಸಿರುವ ಜನರು ಕೂಡ 'ಪಠಾಣ್' ಅನ್ನು ಒಟಿಟಿಯಲ್ಲೂ ನೋಡಲಿದ್ದಾರೆ.
ಪಠಾಣ್ ವಿಸ್ತೃತ ಆವೃತ್ತಿ: ವರದಿಗಳ ಪ್ರಕಾರ, ಸಿದ್ಧಾರ್ಥ್ ಆನಂದ್ ಇತ್ತೀಚಿನ ಸಂದರ್ಶನದಲ್ಲಿ ಪಠಾಣ್‌ನ ಒಟಿಟಿ ಆವೃತ್ತಿಯು ಇನ್ನಷ್ಟು ಯಶಸ್ವಿಯಾಗಲಿದೆ ಎಂದು ಸುಳಿವು ನೀಡಿದ್ದಾರೆ. ಒಟಿಟಿಯಲ್ಲಿ ಪಠಾಣ್‌ನ ವಿಸ್ತೃತ ಆವೃತ್ತಿ ಲಭ್ಯವಾಗಲಿದೆ, ಅಂದರೆ ಚಲನಚಿತ್ರವನ್ನು ಹೆಚ್ಚು ಸಮಯ ತೋರಿಸಲಾಗುತ್ತದೆ, ಇದರಲ್ಲಿ ಹೆಚ್ಚು ಸಾಹಸ ದೃಶ್ಯಗಳನ್ನು ನೋಡಬಹುದು ಎಂದು ತಿಳಿಸಿದ್ದಾರೆ.