ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಜೋನಾಸ್ ಇತ್ತೀಚೆಗೆ ತಾವು ಪಾಲಿಟಿಕ್ಸ್ ಕಾರಣದಿಂದ ಬಾಲಿವುಡ್ ತೊರೆದಿದ್ದೇನೆ ಎಂದು ಬಹಿರಂಗಪಡಿಸಿ ಸುದ್ದಿ ಆಗಿದ್ದರು. ಬಳಿಕ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆಗೆ ಕುಟುಂಬ ಸಮೇತ ಭಾರತಕ್ಕೆ ಅಗಮಿಸಿ ಸದ್ದು ಮಾಡಿದ್ದರು. ಇದೀಗ ಮತ್ತೊಂದು ವಿಚಾರವಾಗಿ ನಟಿ ಹೆಡ್ಲೈನ್ನಲ್ಲಿದ್ದಾರೆ. ಹೌದು, ಇದೀಗ ಪಾಕಿಸ್ತಾನಿ ನಟರೊಬ್ಬರು ಪ್ರಿಯಾಂಕಾ ಚೋಪ್ರಾ ಅವರನ್ನು ಟ್ರೋಲ್ ಮಾಡಿದ್ದಾರೆ. ಪ್ರಿಯಾಂಕಾ ಅವರ ಜ್ಞಾನವನ್ನು ಸುಧಾರಿಸಿಕೊಳ್ಳಲು ಕೇಳಿಕೊಂಡಿದ್ದಾರೆ. ಆದರೆ ಈ ಹೇಳಿಕೆ ಮೂಲಕ ಸ್ವತಃ ಪಾಕ್ ನಟನೇ ಟ್ರೋಲ್ಗೆ ಒಳಗಾಗಿದ್ದಾರೆ.
''ಶರ್ಮೀನ್ ಒಬೈದ್ ಚಿನೋಯ್ ಅವರು ಕಲರ್ಸ್‌ನ ಮೊದಲ ಮಹಿಳೆ ಮತ್ತು ಸ್ಟಾರ್ ವಾರ್ಸ್ ಚಲನಚಿತ್ರವನ್ನು ನಿರ್ದೇಶಿಸಿದ ಮೊದಲ ಮಹಿಳೆ. ಅವರು ದಕ್ಷಿಣ ಏಷ್ಯಾದವರು. ಎಂಥಾ ಐತಿಹಾಸಿಕ ಕ್ಷಣ, ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇನೆ'' ಎಂದು ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದರು.
ಶರ್ಮೀನ್ ಒಬೈದ್ ಚಿನೋಯ್ ಅವರನ್ನು ಶ್ಲಾಘಿಸುವ ಪ್ರಿಯಾಂಕಾ ಚೋಪ್ರಾ ಅವರ ಪೋಸ್ಟ್‌ಗೆ, ಮಾಮ್ ಚಿತ್ರದಲ್ಲಿ ಶ್ರೀದೇವಿ ಅವರೊಂದಿಗೆ ನಟಿಸಿದ ಪಾಕಿಸ್ತಾನಿ ನಟ ಅದ್ನಾನ್ ಸಿದ್ದಿಕಿ (Adnan Siddiqui) ಪ್ರತಿಕ್ರಿಯಿಸಿದ್ದಾರೆ. ಅವರು, ಪ್ರಿಯಾಂಕಾ ಅವರ ಪಾಕ್ ನಿರ್ಲಕ್ಷ್ಯವನ್ನು ಟೀಕಿಸಿದ್ದಾರೆ.
ಪಾಕಿಸ್ತಾನಿ ನಟ ಅದ್ನಾನ್ ಸಿದ್ದಿಕಿ ತಮ್ಮ ಟ್ವಿಟರ್ ಖಾತೆಯಲ್ಲಿ, ''ಗೌರವದೊಂದಿಗೆ ಪ್ರಿಯಾಂಕಾ ಚೋಪ್ರಾ ಅವರೇ, ಶರ್ಮೀನ್ ಒಬೈದ್ ಚಿನೋಯ್ ಅವರು ಪಾಕಿಸ್ತಾನಿ. ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ ನೀವು ದಕ್ಷಿಣ ಏಷ್ಯಾದವರು ಎನ್ನುವುದಕ್ಕಿಂದ ನೀವು ನಿಮ್ಮ ಭಾರತೀಯ ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುವ ರೀತಿಯಂತೆ ಇದನ್ನು ಸರಿಪಡಿಸಿಕೊಳ್ಳಿ'' ಎಂದು ಟ್ವೀಟ್ ಮಾಡಿದ್ದಾರೆ. ಪಾಕ್ ನಟನ ಟ್ವೀಟ್ ವೈರಲ್ ಆಗುತ್ತಿದ್ದು, ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.