ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರಥಮ್ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ. 'ಒಳ್ಳೆ ಹುಡ್ಗ' ಅಂತಾನೇ ಫೇಮಸ್ ನೊಡಿ. ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ ನಾಲ್ಕರ ವಿಜೇತರೂ ಹೌದು. ಇದೀಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಇತ್ತೀಚೆಗಷ್ಟೇ ಶುಭಾರಂಭ ಮಾಡಿರುವ ಪಾಪುಲರ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ಕ್ಕೆ ಸಿಪಾಯಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಪ್ರೋಮೋ: ಬಿಗ್ ಬಾಸ್ ಸೀಸನ್ ನಾಲ್ಕರ ವಿಜೇತ 'ಒಳ್ಳೆ ಹುಡ್ಗ' ಪ್ರಥಮ್ ಅವರ ನಡೆ ನುಡಿ ವಿಭಿನ್ನ. ಬಿಗ್ ಬಾಸ್ ಮನೆಯಲ್ಲಿ ಇವರು ನಡೆದುಕೊಳ್ಳುತ್ತಿದ್ದ ರೀತಿಗೆ ಒಂದು ದೊಡ್ಡ ಫ್ಯಾನ್ ಬೇಸ್ ಇತ್ತು. ಹಾವ ಭಾವ ಕೊಂಚ ವಿಚಿತ್ರ ಎನಿಸಿದರೂ, ಅಪಾರ ಸಂಖ್ಯೆಯ ಅಭಿಮಾನಿಗಳಿದ್ದರು. ಕೊನೆಗೆ ಬಿಗ್ ಬಾಸ್ ನಾಲ್ಕರ ಟ್ರೋಫಿಯನ್ನೂ ಗೆದ್ದರು. ಇತ್ತೀಚೆಗಷ್ಟೇ ನಡೆದ ಬಿಗ್ ಬಾಸ್ ಸೀಸನ್ 10ರ ಗ್ರ್ಯಾಂಡ್ ಲಾಂಚ್ ಈವೆಂಟ್ಗೆ ಪ್ರಥಮ್ ಆಮಿಸಿದ್ದರು. ಇದೀಗ ಮತ್ತೊಮ್ಮೆ ಲಾರ್ಡ್ ಪ್ರಥಮ್ ಆಗಿ ದೊಡ್ಡನೆ ಪ್ರವೇಶಿಸಿದ್ದಾರೆ. ಪ್ರಥಮ್ ಅವರಿಗೆ ಭವ್ಯ ಸ್ವಾಗತ ಕೋರಲಾಗಿದೆ. ಅವರು ಎಂಟ್ರಿ ಕೊಟ್ಟ ಶೈಲಿಗೂ ಮೆಚ್ಚುಗೆ ವ್ಯಕ್ತವಾಗಿದೆ. ಕಲರ್ಸ್ ಕನ್ನಡ ಪ್ರೋಮೋ ಅನಾವರಣಗೊಳಿಸಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಲಾರ್ಡ್ ಪ್ರಥಮ್....ಸಾಮಾಜಿಕ ಜಾಲತಾಣಗಳಲ್ಲೂ ಪ್ರೋಮೋ ಶೇರ್ ಮಾಡಿರುವ ಕಲರ್ಸ್ ಕನ್ನಡ, ''ತಮಾಷೆ ಮಾಡಿದ್ರೆ 'ಅಮಾಸೆ' ತೋರಿಸೋ ಲಾರ್ಡ್ ಪ್ರಥಮ್ ಬಂದ್ರು'' ಎಂಬ ಕ್ಯಾಪ್ಷನ್ ಕೊಟ್ಟಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9.30 ಕ್ಕೆ ಮತ್ತು ಶನಿವಾರ - ಭಾನುವಾರ ರಾತ್ರಿ 9ಕ್ಕೆ ಬಿಗ್ ಬಾಸ್ ಸೀಸನ್ ಸೀಸನ್ 10 ಪ್ರಸಾರ ಆಗುತ್ತಿದೆ.