ಕರ್ನಾಟಕ

karnataka

ETV Bharat / entertainment

ನಟಿ ನಯನತಾರಾ ಆಸ್ಪತ್ರೆ ಸೇರಲು ಕಾರಣವಾಗಿದ್ದು ಗಂಡನ ವೀಕೆಂಡ್‌ ಸ್ಪೆಷಲ್‌ ಅಡುಗೆ - Etv bharat kannada

ಕಳೆದ ಎರಡು ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಯನಾ ತಾರಾ ಗಂಡ ಮಾಡಿರುವ ಎಡವಟ್ಟಿನಿಂದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Nayanthara Hospital
Nayanthara Hospital

By

Published : Aug 10, 2022, 10:00 PM IST

ದಕ್ಷಿಣ ಭಾರತದ ಸೂಪರ್​ ಸ್ಟಾರ್​ ನಯನತಾರಾ ಹಾಗೂ ವಿಘ್ನೇಶ್​ ಶಿವನ್ ಕಳೆದ ಎರಡು ತಿಂಗಳ ಹಿಂದೆ ಸಪ್ತಪದಿ ತುಳಿದಿದ್ದಾರೆ. ಮದುವೆ ಆಗಿ ಕೇವಲ ಎರಡು ತಿಂಗಳಿಗೆ ನಯನತಾರಾ ಆಸ್ಪತ್ರೆಗೆ ದಾಖಲಾಗಿದ್ದು, ಇದಕ್ಕೆ ಗಂಡ ಮಾಡಿರುವ ಎಡವಟ್ಟು ಎಂಬುದು ತಿಳಿದು ಬಂದಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಅನ್ಯೋನ್ಯವಾಗಿ ತಾರಾ ಜೋಡಿ ಸಂಸಾರ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಪತಿ ವಿಘ್ನೇಶ್​ ವೀಕೆಂಡ್​​ ಸ್ಪೆಷಲ್ ಅಡುಗೆ ಮಾಡಿದ್ದು, ಅದನ್ನು ತಿಂದಿರುವ ನಯನತಾರಾ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಹೀಗಾಗಿ, ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸುಮಾರು ಐದು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ನಟಿ, ಚೇತರಿಸಿಕೊಂಡಿದ್ದು ತದನಂತರ ಡಿಸ್ಚಾರ್ಜ್​ ಆಗಿದ್ದಾರೆ. ಆದರೆ, ಕೆಲವೊಂದು ವರದಿಗಳ ಪ್ರಕಾರ ಅವರು ಚರ್ಮದ ಸೋಂಕಿಗೆ ಚಿಕಿತ್ಸೆ ಪಡೆದುಕೊಂಡಿದ್ದಾರೆಂದು ಹೇಳಲಾಗ್ತಿದೆ.

ಇದನ್ನೂ ಓದಿ:ಥಾಯ್ಲೆಂಡ್‌ನಲ್ಲಿ ಹನಿಮೂನ್‌- ನಯನತಾರಾ- ವಿಘ್ನೇಶ್ ದಂಪತಿಯ ರೊಮ್ಯಾಂಟಿಕ್ ಫೋಟೋಗಳಿವು

ABOUT THE AUTHOR

...view details