ಕರ್ನಾಟಕ

karnataka

ETV Bharat / entertainment

'ಬಾಳೇ ಬಂಗಾರ'ಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಅನಿರುದ್ಧ್ ಜತ್ಕರ್​ಗೆ ಅಭಿಮಾನಿಗಳಿಂದ ಪ್ರೀತಿಯ ಸನ್ಮಾನ - etv bharat kannada

'ಬಾಳೇ ಬಂಗಾರ' ಸಾಕ್ಷ್ಯ ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಅನಿರುದ್ಧ್ ಜತ್ಕರ್ ಅವರನ್ನು ಅಭಿಮಾನಿಗಳು ಸನ್ಮಾನಿಸಿ, 'ನ್ಯಾಚುರಲ್ ಸ್ಟಾರ್' ಎಂಬ ಬಿರುದು ನೀಡಿದ್ದಾರೆ.

National award winner Anirudh Jatkar is honored by fans
'ಬಾಳೇ ಬಂಗಾರ'ಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಅನಿರುದ್ಧ್ ಜತ್ಕರ್​ಗೆ ಅಭಿಮಾನಿಗಳಿಂದ ಪ್ರೀತಿಯ ಸನ್ಮಾನ

By ETV Bharat Karnataka Team

Published : Sep 26, 2023, 11:05 PM IST

ಕಿರುತೆರೆ ಹಾಗೂ ಬೆಳ್ಳಿತೆರೆ ಮೇಲೆ ತನ್ನ ಗಾಂಭೀರ್ಯದ ನಟನೆಯಿಂದ ಮಿಂಚಿದ ನಟ‌ನೆಂದರೆ ಅದು ಅನಿರುದ್ಧ್ ಜತ್ಕರ್. ಸದ್ಯ ಅವರು 'chef ಚಿದಂಬರ' ಸಿನಿಮಾ ಮಾಡ್ತಾ ಇರೋದು ಗೊತ್ತಿರುವ ವಿಚಾರ. ಅನಿರುದ್ಧ್ ಒಬ್ಬ ನಟ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಭಾರತೀ ವಿಷ್ಣುವರ್ಧನ್ ಅವರ ಬಗ್ಗೆ 'ಬಾಳೇ ಬಂಗಾರ' ಎಂಬ ಸಾಕ್ಷ್ಯ ಚಿತ್ರವನ್ನು ನಿರ್ದೇಶನ ಮಾಡಿರೋದು ನಮಗೆಲ್ಲಾ ಗೊತ್ತಿದೆ.

ಸದ್ಯ ಈ 'ಬಾಳೇ ಬಂಗಾರ' ಸಾಕ್ಷ್ಯ ಚಿತ್ರದ ನಿರ್ದೇಶನಕ್ಕಾಗಿ ಅನಿರುದ್ಧ್ ಅವರಿಗೆ ರಾಷ್ಟ ಪ್ರಶಸ್ತಿಯ ಮನ್ನಣೆ ದೊರೆತಿದೆ. ಈ ಸಂಭ್ರಮವನ್ನು ಅನಿರುದ್ಧ್ ಅವರ ಅಭಿಮಾನಿಗಳು ಇತ್ತೀಚೆಗೆ ಆಚರಿಸಿದ್ದಾರೆ. ಅನಿರುದ್ದ್ ಅವರನ್ನು ಸನ್ಮಾನಿಸಿ, ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

'ಬಾಳೇ ಬಂಗಾರ'ಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಅನಿರುದ್ಧ್ ಜತ್ಕರ್​ಗೆ ಅಭಿಮಾನಿಗಳಿಂದ ಪ್ರೀತಿಯ ಸನ್ಮಾನ

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಅನಿರುದ್ಧ್ ಜತ್ಕರ್​ ಅವರಿಗೆ ಅಭಿಮಾನಿ ಬಳಗದ ನಿಶಾದ್ (ಹೈದರಾಬಾದ್ ), ಗಾಯತ್ರಿ (ತಮಿಳುನಾಡು), ಸೋನಿ (ಸಿಂಗಾಪುರ), ಪುಷ್ಪ (ಬೆಂಗಳೂರು) ಸೇರಿದಂತೆ ಅನೇಕ ಅಭಿಮಾನಿಗಳು ಅನಿರುದ್ದ್ ಅವರಿಗೆ ಆತ್ಮೀಯ ಅಭಿನಂದನಾ ಸಮಾರಂಭವನ್ನು ಆಯೋಜಿಸಿ,‌ ನ್ಯಾಚುರಲ್ ಸ್ಟಾರ್ ಎಂಬ ಬಿರುದು ನೀಡಿದ್ದಾರೆ. ಈ ವೇಳೆ ಹಿರಿಯ ನಟ ಬಿ.ಎಂ.ವೆಂಕಟೇಶ್ ಹಾಗೂ ನಿರ್ದೇಶಕ ಎಂ.ಆನಂದರಾಜ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅನಿರುದ್ಧ್ ಜತ್ಕರ್ ಕುಟುಂಬದ ಸದಸ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

'ಬಾಳೇ ಬಂಗಾರ'ಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಅನಿರುದ್ಧ್ ಜತ್ಕರ್​ಗೆ ಅಭಿಮಾನಿಗಳಿಂದ ಪ್ರೀತಿಯ ಸನ್ಮಾನ

ಇದನ್ನೂ ಓದಿ:ಅನಿರುದ್ಧ್ 'chef ಚಿದಂಬರ' ಚಿತ್ರಕ್ಕೆ ಸಿಕ್ತು ಭಾರತಿ ವಿಷ್ಣುವರ್ಧನ್, ಉಪ್ಪಿ ಸಾಥ್

ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಿರುದ್ಧ್, ಅಭಿಮಾನಿಗಳ ಈ ಪ್ರೀತಿಗೆ ಮನತುಂಬಿ ಬಂದಿದೆ. ಅವರ ಪ್ರೀತಿಗೆ ಏನು ಹೇಳೋದಿಕ್ಕೆ ಆಗುವುದಿಲ್ಲ. ಅವರಿಗೆ ನನ್ನ ಧನ್ಯವಾದ ಎಂದು ಸಂತಸ ವ್ಯಕ್ತಪಡಿಸಿದರು.

'chef ಚಿದಂಬರ'ನಾಗಿ ಅನಿರುದ್ಧ್​: ಸದ್ಯ ಅನಿರುದ್ಧ್​ 'chef ಚಿದಂಬರ' ಸಿನಿಮಾ ಮಾಡ್ತಾ ಇದ್ದು, 'ರಾಘು' ಖ್ಯಾತಿಯ ನಿರ್ದೇಶಕ ಎಂ.ಆನಂದರಾಜ್ ನಿರ್ದೇಶನ ಮಾಡುತ್ತಿದ್ದಾರೆ. ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, ವಿಕ್ರಾಂತ್ ರೋಣ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

'ಬಾಳೇ ಬಂಗಾರ'ಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಅನಿರುದ್ಧ್ ಜತ್ಕರ್​ಗೆ ಅಭಿಮಾನಿಗಳಿಂದ ಪ್ರೀತಿಯ ಸನ್ಮಾನ

ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್‌ ಅಭಿನಯಿಸುತ್ತಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್‌, ಶಿವಮಣಿ ಮುಂತಾದವರು "chef ಚಿದಂಬರ" ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:"chef ಚಿದಂಬರ "ನಾದ ವಿಷ್ಣುವರ್ಧನ್​ ಅಳಿಯ.. ಅನಿರುದ್ಧ್​ ಹೊಸ ಸಿನಿಮಾಗೆ ಕಿಚ್ಚನ ಸಾಥ್​

ABOUT THE AUTHOR

...view details