ಕರ್ನಾಟಕ

karnataka

ವಿಜಯ್ ದೇವರಕೊಂಡ ಬರ್ತ್​​ ಡೇ ಗಿಫ್ಟ್​​: 'ನನ್ನ ರೋಜಾ ನೀನೇ' ಹಾಡು ಅನಾವರಣ

By

Published : May 9, 2023, 1:17 PM IST

ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್​ ಪ್ರಭು ಅಭಿನಯದ ಖುಷಿ ಚಿತ್ರದ 'ನನ್ನ ರೋಜಾ ನೀನೇ' ಹಾಡು ಅನಾವರಣಗೊಂಡಿದೆ.

nanna roja neene
ನನ್ನ ರೋಜಾ ನೀನೇ

ಅರ್ಜುನ್​ ರೆಡ್ಡಿ ಸಿನಿಮಾ ಖ್ಯಾತಿಯ ವಿಜಯ್ ದೇವರಕೊಂಡ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 34ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ದಕ್ಷಿಣದ ಟಾಪ್​ ಹೀರೋಗೆ ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ವಿಜಯ್ ದೇವರಕೊಂಡ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಖುಷಿ' ತಂಡ ನಟನಿಗೆ ವಿಶೇಷವಾಗಿ ಶುಭ ಕೋರಿದೆ.

ಸೌತ್ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಜನ್ಮದಿನಕ್ಕೆ ಸ್ಪೆಷಲ್ ಆಗಿ 'ಖುಷಿ' ಸಿನಿಮಾದ ಮೊದಲ ಹಾಡು ರಿಲೀಸ್ ಮಾಡಲಾಗಿದೆ. 'ನನ್ನ ರೋಜಾ ನೀನೇ' ಎಂಬ ಮೆಲೋಡಿ ಟ್ರ್ಯಾಕ್ ಬಿಡುಗಡೆ ಆಗಿದ್ದು, ಕೇಳುಗರನ್ನು ಇಂಪ್ರೆಸ್ ಮಾಡುತ್ತಿದೆ. ಬಹುಬೇಡಿಕೆಯ ನಟಿ ಸಮಂತಾ ರುತ್​ ಪ್ರಭು ಎರಡನೇ ಬಾರಿ ವಿಜಯ್​ ದೇವರಕೊಂಡ ಜೊತೆ ಸ್ಕ್ರೀನ್​ ಶೇರ್ ಮಾಡಿದ್ದು, ಹಾಡು ಸಂಗೀತಪ್ರಿಯರ ಮನಸೂರೆಗೊಳ್ಳುತ್ತಿದೆ.

5 ಭಾಷೆಗಳಲ್ಲಿ ಸಾಂಗ್​ ರಿಲೀಸ್​: ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದ್ದು, 'ನನ್ನ ರೋಜಾ ನೀನೇ' ಹಾಡು ಇಂದು ಐದು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ಸಮಂತಾ ಮತ್ತು ವಿಜಯ್ ಅವರ ಹೊಸ ಲುಕ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಈ ಹಾಡಿನ ಪೋಸ್ಟರ್ ರಿಲೀಸ್​ ಆಗಿ, ಅಭಿಮಾನಿಗಳ ಉತ್ಸಾಹಕ್ಕೆ ಕಾರಣವಾಗಿತ್ತು.

ಕಾಶ್ಮೀರದಲ್ಲಿ ಸಾಂಗ್​ ಶೂಟಿಂಗ್​​: ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿರುವ ಹಾಡಿಗೆ ಹೇಶಮ್ ಅಬ್ದುಲ್ ವಹಾಬ್ ದನಿಯಾಗುವುದರ ಜೊತೆಗೆ ಟ್ಯೂನ್ ಹಾಕಿದ್ದಾರೆ. ಲವರ್ ಬಾಯ್ ಆಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದು, ಸಮಂತಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾಶ್ಮೀರ ಭಾಗದಲ್ಲಿ ಇಡೀ ಸಾಂಗ್ ಚಿತ್ರೀಕರಿಸಲಾಗಿದೆ. ಹಾಡಿಗೆ ತೆಲುಗು ಸಾಹಿತ್ಯವನ್ನು ನಿರ್ದೇಶಕ ಶಿವ ನಿರ್ವಾಣ ನೀಡಿದ್ದಾರೆ. ಈ ಹಿಂದೆ ಬಿಡುಗಡೆಯಾದ ಈ ಹಾಡಿನ ಗ್ಲಿಂಪ್ಸ್ ಕೂಡ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು.

ಖುಷಿ ಸಿನಿಮಾ ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿಯೂ ತೆರೆಗೆ ಬರಲಿದೆ. ಮೈತ್ರಿ ಮೂವಿ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಳ್ಳುತ್ತಿರುವ ಚಿತ್ರಕ್ಕೆ 'ಮಜಿಲಿ' ನಿರ್ದೇಶಕ ಶಿವ ನಿರ್ವಾಣ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ:ಬಂಗಾಳದಲ್ಲಿ ಬ್ಯಾನ್, ಯುಪಿಯಲ್ಲಿ ರತ್ನಗಂಬಳಿ: 4 ದಿನಕ್ಕೆ ₹45 ಕೋಟಿ ಬಾಚಿದ 'ದಿ ಕೇರಳ ಸ್ಟೋರಿ'

ರೊಮ್ಯಾಂಟಿಕ್ ಲವ್ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಖುಷಿ ಸಿನಿಮಾ ಸೆಪ್ಟೆಂಬರ್ 1ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವಿನ್ನಿಲ್ಲಾ ಕಿಶೋರ್, ರೋಹಿನಿ ಸೇರಿದಂತೆ ಹಲವರು ಚಿತ್ರದ ಭಾಗವಾಗಿದ್ದಾರೆ. ಹೇಶಂ ಸಂಗೀತ, ಜಿ.ಮುರಳಿ ಛಾಯಾಗ್ರಹಣ, ಪ್ರವೀಣ್ ಪುಡಿ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ:ಕಾಂತಾರ 2 ಸಿನಿಮಾ ಸ್ಕ್ರಿಪ್ಟ್​ ಬಹುತೇಕ ರೆಡಿ; ಶೀಘ್ರದಲ್ಲೇ ಶೂಟಿಂಗ್‌ಗೆ ತಯಾರಿ

'ಶಾಕುಂತಲಂ' ಸಿನಿಮಾ ಏಪ್ರಿಲ್​ 14ರಂದು ತೆರೆಕಂಡಿದ್ದು, ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ಸು ಕಂಡಿಲ್ಲ. ಇದು ಸಮಂತಾ ರುತ್ ಪ್ರಭು ನಟನೆಯ ಕೊನೆ ಸಿನಿಮಾ. ಶಾಕುಂತಲಂ ಸೋತ ಹಿನ್ನೆಲೆಯಲ್ಲಿ ಮುಂದಿನ ಖುಷಿ ಮತ್ತು ಸಿಟಾಡೆಲ್​ ವೆಬ್​ ಸೀರಿಸ್​ ಮೇಲೆ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಶಾಕುಂತಲಂ ಚಿತ್ರಕ್ಕೆ ಹೆಚ್ಚಿನ ಮಹತ್ವ ಕೊಟ್ಟರೂ, ಸೋಲಿನ ರುಚಿ ಕಂಡಿದ್ದಾರೆ. ಖುಷಿ ಮತ್ತು ಸಿಟಾಡೆಲ್ ಅಲ್ಲದೇ ಮತ್ತೊಂದು ಪ್ರಾಜೆಕ್ಟ್​ ಕೆಲಸಗಳು ನಡೆಯುತ್ತಿವೆ. ಬಾಲಿವುಡ್ ಬಹುಬೇಡಿಕೆ ನಟಿ ಅನುಷ್ಕಾ ಶರ್ಮಾ ಜೊತೆ ಚಿತ್ರವೊಂದಕ್ಕೆ ಮಾತುಕತೆ ನಡೆಸುತ್ತಿದ್ದಾರೆಂಬ ವರದಿ ಇದೆ.

ABOUT THE AUTHOR

...view details