ಕರ್ನಾಟಕ

karnataka

ETV Bharat / entertainment

ಮೂರು ದಶಕಗಳ ನಂತರ ಜಮ್ಮು ಕಾಶ್ಮೀರದಲ್ಲಿ ಸಾರ್ವಜನಿಕರಿಗಾಗಿ ತೆರೆದ ಚಿತ್ರಮಂದಿರಗಳು - Multiplex opens for public

ಶ್ರೀನಗರದಲ್ಲಿನ ಸಿನಿಮಾ ಹಾಲ್‌ಗಳು 32 ವರ್ಷಗಳ ನಂತರ ಇಂದು ಸಾರ್ವಜನಿಕರಿಗಾಗಿ ಮತ್ತೆ ತೆರೆದಿದೆ.

Multiplex opens for public today in Srinagar
ಜಮ್ಮು ಕಾಶ್ಮೀರದಲ್ಲಿ ಮೂರು ದಶಕಗಳ ನಂತರ ತೆರೆದ ಚಿತ್ರಮಂದಿರಗಳು

By

Published : Oct 1, 2022, 8:16 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಮನರಂಜನೆಯಿಂದ ದೂರ ಉಳಿದಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಮನ್ವಂತರ ಶುರುವಾಗಿದೆ. ಉಗ್ರಗಾಮಿ ಪೀಡಿತ ಕಾಶ್ಮೀರದಲ್ಲಿ ಸಿನಿಮಾ ಸಂಸ್ಕೃತಿ ಪುನರುಜ್ಜೀವನಗೊಳಿಸಲಾಗುತ್ತಿದೆ. ಶ್ರೀನಗರದಲ್ಲಿನ ಸಿನಿಮಾ ಹಾಲ್‌ಗಳು 32 ವರ್ಷಗಳ ನಂತರ ಸಾರ್ವಜನಿಕರಿಗಾಗಿ ಮತ್ತೆ ತೆರೆದಿದೆ.

ಶ್ರೀನಗರದ ಮೊದಲ ಮಲ್ಟಿಪ್ಲೆಕ್ಸ್ ಥಿಯೇಟರ್ ಇಂದು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಏಕಕಾಲದಲ್ಲಿ ಎರಡು ಹಾಲ್​ಗಳಲ್ಲಿ ಎರಡು ಚಲನ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ವಿಕ್ರಮ್ ವೇದ ಮತ್ತು ದಕ್ಷಿಣ ಭಾರತದ ಪೊನ್ನಿಯಿನ್ ಸೆಲ್ವನ್ ಸಿನಿಮಾ ಅನ್ನು ಈ ಮಲ್ಟಿಪ್ಲೆಕ್ಸ್ ಥಿಯೇಟರ್​ನಲ್ಲಿ ನೋಡಬಹುದಾಗಿದೆ. ಪ್ರೇಕ್ಷಕರು ಸಹ ಖುಷಿಯಿಂದ ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ.

''ಶ್ರೀನಗರದಲ್ಲಿರುವ ಶಿವಪುರದ ಅತ್ಯಂತ ಭದ್ರತೆಯ ಪ್ರದೇಶದಲ್ಲಿರುವ INOX ಮಲ್ಟಿಪ್ಲೆಕ್ಸ್ ಥಿಯೇಟರ್ ಅನ್ನು ಇಂದು ಸಾರ್ವಜನಿಕರಿಗೆ ತೆರೆಯಲಾಗಿದೆ'' ಎಂದು ಮೇಲೆ ತಿಳಿಸಲಾದ ಮಲ್ಟಿಪ್ಲೆಕ್ಸ್ ಮಾಲೀಕ, ಪ್ರಮುಖ ಕಾಶ್ಮೀರಿ ಪಂಡಿತ್​ ರಾಜಕಾರಣಿ ಮತ್ತು ಇಂದಿರಾ ಗಾಂಧಿ ಸರ್ಕಾರದಲ್ಲಿ ಸಚಿವರಾಗಿದ್ದ ದಿವಂಗತ ಡಿ.ಪಿ ಧಾರ್​ ಅವರ ಪುತ್ರ ಮತ್ತು ಪ್ರಮುಖ ಉದ್ಯಮಿ ವಿಜಯ್ ಧರ್ ಹೇಳಿದ್ದಾರೆ. ಈ ಮಲ್ಟಿಪ್ಲೆಕ್ಸ್ 520 ಜನರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುವ ಮೂರು ಹಾಲ್​​ಗಳನ್ನು ಹೊಂದಿದ್ದು, ಸದ್ಯ ಎರಡನ್ನು ಮಾತ್ರ ತೆರೆಯಲಾಗಿದೆ.

ಇದನ್ನೂ ಓದಿ:ಶಕೀಲಾ ಬಾನು ಪಾತ್ರ ನನಗೆ ತುಂಬಾ ಖುಷಿ ಕೊಟ್ಟಿದೆ: ತೋತಾಪುರಿ ನಟಿ ಅದಿತಿ ಪ್ರಭುದೇವ

ಉಗ್ರರ ಕುಕೃತ್ಯ ಭೀತಿ ಹಿನ್ನೆಲೆ ಸಿನಿಮಾ ಮಂದಿರಗಳನ್ನು ಮುಚ್ಚಲಾಗಿತ್ತು. ಸರ್ಕಾರವು 1999ರಲ್ಲಿ ಮೂರು ಚಿತ್ರಮಂದಿರಗಳನ್ನು ಪುನಃ ತೆರೆಯಲು ಪ್ರಯತ್ನಿಸಿತ್ತು. ಆದರೆ, ಈ ಪ್ರಯತ್ನವು ಯಶಸ್ವಿಯಾಗಿರಲಿಲ್ಲ. ಇದೀಗ ಮತ್ತೆ ಚಿತ್ರಮಂದಿರಗಳನ್ನು ತೆರೆಯಲಾಗುತ್ತಿದೆ. ಕೆಲ ದಿನಗಳ ಹಿಂದೆ ಪುಲ್ವಾಮಾ ಮತ್ತು ಶೋಪಿಯಾನ್‌ನಲ್ಲಿ ಸಹ ಎರಡು ಚಿತ್ರಮಂದಿರಗಳನ್ನು ಉದ್ಘಾಟಿಸಲಾಗಿದೆ.

ಉಗ್ರರ ಅಟ್ಟಹಾಸ:1990ರ ದಶಕದ ಆರಂಭದಲ್ಲಿ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಿಂಸಾಚಾರ ಪ್ರಾರಂಭವಾದಾಗ ಉಗ್ರಗಾಮಿ ಸಂಘಟನೆಗಳು ಚಿತ್ರ ಮಂದಿರಗಳ ಮಾಲೀಕರಿಗೆ ಬೆದರಿಕೆ ಹಾಕಿದ ಹಿನ್ನೆಲೆ ಪ್ರಮುಖ ಪಟ್ಟಣಗಳ ಎಲ್ಲ ಸಿನೆಮಾ ಮಂದಿರಗಳನ್ನು ಮುಚ್ಚಲಾಯಿತು. ರೀಗಲ್, ಪಲ್ಲಾಡಿಯಮ್, ಖಯಾಮ್, ಫಿರ್ದೌಸ್, ಷಾ ಸಿನೆಮಾ, ನೀಲಂ, ಶಿರಾಜ್, ಖಯಾಮ್ ಮತ್ತು ಬ್ರಾಡ್‌ವೇ ಚಿತ್ರಮಂದಿರಗಳನ್ನು 1990ರ ದಶಕದ ಆರಂಭದಲ್ಲಿ ಮುಚ್ಚಲಾಗಿತ್ತು. ಷಾ ಸಿನೆಮಾ, ಶಿರಾಜ್, ಪಲ್ಲಾಡಿಯಮ್ ಮತ್ತು ಫಿರ್ದೌಸ್‌ನಂತಹ ಕೆಲವು ಚಿತ್ರ ಮಂದಿರಗಳ ಕಟ್ಟಡಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡವು. ಉಗ್ರವಾದಿಗಳ ವಿರುದ್ಧದ ಹೋರಾಟಕ್ಕಾಗಿ ಅವುಗಳನ್ನು ತಾತ್ಕಾಲಿಕ ಪ್ರಧಾನ ಕಚೇರಿಗಳನ್ನಾಗಿ ಪರಿವರ್ತಿಸಲಾಯಿತು.

ಕಣಿವೆ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಶ್ರೀನಗರದ ಅಥ್ವಜಾನ್ ಹೊರ ವಲಯದಲ್ಲಿ ಡಿಪಿಎಸ್​ ಶಾಲೆಯನ್ನೂ ಪ್ರಾರಂಭಿಸಿದ್ದಾರೆ. ಸದ್ಯ ಇದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ಇನ್ನೂ ದಿವಗಂತ ಡಿ.ಪಿ ಧಾರ್​ ಅವರು ಇಂದಿರಾ ಗಾಂಧಿ ಸರ್ಕಾರದಲ್ಲಿ ಸಚಿವರಾಗಿದ್ದರು. ಅಲ್ಲದೇ, 1947ರ ಮುಹಮ್ಮದ್​ ಅಬ್ದುಲ್ಲಾ ಅವರ ಸರ್ಕಾರದಲ್ಲಿ ಕಾಶ್ಮೀರದ ಉಪಮುಖ್ಯ ಮಂತ್ರಿಯಾಗಿದ್ದರು.

ABOUT THE AUTHOR

...view details