ತೆಲಂಗಾಣ (ಹೈದರಾಬಾದ್): ಆನಂದ್ ಅಹುಜಾ ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಸೋನಮ್ ಕಪೂರ್ ಇದೀಗ ಹೊಸ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಾರದೊಳಗೆ ಬಾಲಿವುಡ್ನಿಂದ ಸಿನಿ ಪ್ರಿಯರಿಗೆ ಗುಡ್ ನ್ಯೂಸ್ ಸಿಗಲಿದ್ದು ಅದಕ್ಕೂ ಮುನ್ನ ತನ್ನ ತಾಯ್ತನದ ಖುಷಿಯನ್ನು ಅವರು ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ. ಸದ್ಯ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ.
ಸೋನಂ ಕಪೂರ್ ಬೇಬಿ ಶವರ್ ಫೋಟೋ ತಾಯಿಯಾಗುತ್ತಿರುವ ಸೋನಮ್ ಕಪೂರ್ ತಾವು ಗರ್ಭಿಣಿ ಎಂದು ಗೊತ್ತಾದ ದಿನದಿಂದ ಈ ವರೆಗೂ ಹಲವು ವಿಚಾರಗಳನ್ನು ಪೋಟೋ ಮೂಲಕವೇ ಹೇಳಿಕೊಂಡು ಬರುತ್ತಿದ್ದಾರೆ. ಹಲವು ಸಲಮಗುವಿನ ನಿರೀಕ್ಷೆಯಲ್ಲಿರುವ ಗರ್ಭಿಣಿಯರಿಗೆ ಸಲಹೇ ನೀಡಿದ್ದು ಇದೆ. ಇದೀಗ ಈ ಫೋಟೋ ಮೂಲಕ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ತಮ್ಮ ಊದಿಕೊಂಡಿರುವ ಪಾದಗಳನ್ನು ಫೋಟೋದಲ್ಲಿ ತೋರಿಸಿರುವ ಅವರು, ಪ್ರೆಗ್ನೆನ್ಸಿ ಅಂದುಕೊಂಡಷ್ಟು ಸುಲಭವಲ್ಲ, ಸುಂದರವಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಹಲವು ಫೋಟೋಗಳನ್ನು ಹಂಚಿಕೊಂಡಿದ್ದ ಅವರು, ನಮ್ಮ ಮನೆಯಲ್ಲಿ ಯಾವುದೇ ಕ್ಷಣದಲ್ಲಾದರೂ ಪ್ರತಿಧ್ವನಿಯೊಂದು ಕೇಳಬಹುದು ಎಂದು ಹೇಳಿಕೊಂಡಿದ್ದರು. ಇದೀಗ ಪ್ರೆಗ್ನೆನ್ಸಿ ಸಮಯದ ಚಾಲೆಂಜಿಂಗ್ ದಿನಗಳ ಬಗ್ಗೆ ಮಾತನಾಡಿದ್ದಾರೆ. ಸದ್ಯ ತಾಯ್ತನದ ಖುಷಿಯಲ್ಲಿರುವ ಅವರಿಗೆ ದಿನ ತುಂಬಿದ್ದು ಯಾವುದೇ ಕ್ಷಣದಲ್ಲಾದರೂ ಮಗುವಿಗೆ ಜನ್ಮ ನೀಡಬಲ್ಲರು.
ಪತಿ ಆನಂದ್ ಅಹುಜಾ ಅವರೊಂದಿಗೆ ಸೋನಂ ಕಪೂರ್ ಇತ್ತೀಚೆಗೆ ನಟಿ ಸೋನಂ ಕಪೂರ್ ಅವರು ಲಂಡನ್‌ನಲ್ಲಿ ಪತಿ ಮತ್ತು ಆಪ್ತ ಸ್ನೇಹಿತರೊಂದಿಗೆ ತನ್ನ ಬೇಬಿ ಶವರ್ ಫೋಟೋಗಳಿಗೆ ಪೋಸ್ ನೀಡಿದ್ದರು. ಅದಾದ ಬಳಿಕ ಬೇಬಿ ಶವರ್‌ಗಾಗಿ ಮುಂಬೈನಲ್ಲಿಯೂ ಸಿದ್ಧತೆ ನಡೆಸಿದ್ದರು. ಆದರೆ, ಕೊರೊನಾ ಕಾರಣದಿಂದ ಈ ಕಾರ್ಯಕ್ರಮವನ್ನು ರದ್ದುಗೊಳಿಸಬೇಕಾಯಿತು.
ಸೋನಂ ಕಪೂರ್ ಬೇಬಿ ಶವರ್ ಫೋಟೋ ನಟ ಅನಿಲ್ ಕಪೂರ್ ಪುತ್ರಿಯೂ ಆಗಿರುವ ಸೋನಂ ಕಪೂರ್ ಯಾವುದೇ ಕ್ಷಣದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಬಹುದು ಎಂದು ಬಾಲಿವುಡ್ನಲ್ಲಿ ಮಾತನಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಅನಿಲ್ ಕಪೂರ್ ಮನೆಯಲ್ಲಿ ಸಂತಸದ ವಾತಾವರಣವಿದ್ದು, ಮನೆಯಲ್ಲಿ ಚೊಚ್ಚಲ ಮಗುವನ್ನು ಸ್ವಾಗತಿಸಲು ಎಲ್ಲರೂ ತಯಾರಿ ನಡೆಸುತ್ತಿದ್ದಾರಂತೆ. ಸಾವರಿಯಾ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಸೋನಮ್, ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅವಕಾಶಗಳು ಅರಸಿ ಬರುತ್ತಿರುವಾಗಲೇ ಆನಂದ್ ಅಹುಜಾ ಅವರನ್ನ 2018ರಲ್ಲಿ ಮದುವೆಯಾದರು.