ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ತಾರೆ ಆಲಿಯಾ ಭಟ್ ಶುಕ್ರವಾರ ತಮ್ಮ ಚೊಚ್ಚಲ ಹಾಲಿವುಡ್ ಸಿನಿಮಾ 'ಹಾರ್ಟ್ ಆಫ್ ಸ್ಟೋನ್' ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.
ಸ್ಪೈ ಥ್ರಿಲ್ಲರ್ ಆಗಿರುವ 'ಹಾರ್ಟ್ ಆಫ್ ಸ್ಟೋನ್' ಚಿತ್ರದಲ್ಲಿ ವಂಡರ್ ವುಮನ್ ತಾರೆ ಗಾಲ್ ಗಾಡೋಟ್ ಮತ್ತು ಬೆಲ್‌ಫಾಸ್ಟ್ ನಟ ಜೇಮೀ ಡೋರ್ನಾನ್ ಸಹ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಟಾಮ್ ಹಾರ್ಪರ್ ನಿರ್ದೇಶಿಸಿದ್ದಾರೆ.
ನಟಿ ಆಲಿಯಾ ಭಟ್ ಚಿತ್ರೀಕರಣ ಮುಗಿಸಿರುವ ಬಗ್ಗೆ ಚಿತ್ರದ ಸೆಟ್‌ಗಳಲ್ಲಿರುವ ಹಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಮರೆಯಲಾಗದ ಅನುಭವ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಎಂದು ಅವರು ತಿಳಿಸಿದ್ದಾರೆ.