ಕರ್ನಾಟಕ

karnataka

ETV Bharat / entertainment

LGM movie: ಧೋನಿ ಅಭಿಮಾನಿಗಳಿಗೆ ನಿರಾಸೆ; ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತ 'ಎಲ್​ಜಿಎಂ'

Dhoni LGM movie review: ಜುಲೈ 28 ರಂದು ತೆರೆ ಕಂಡ ಎಂಎಸ್​ ಧೋನಿ ನಿರ್ಮಾಣದ 'ಲೆಟ್ಸ್ ಗೆಟ್​ ಮ್ಯಾರೀಡ್' (ಎಲ್‌ಜಿಎಂ) ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ.

LGM movie
ಎಲ್​ಜಿಎಂ'

By

Published : Jul 30, 2023, 4:11 PM IST

ಭಾರತದ ಯಶಸ್ವಿ ಕ್ರಿಕೆಟ್​ ಆಟಗಾರ ಮಹೇಂದ್ರ ಸಿಂಗ್​​ ಧೋನಿ ಅವರು ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಸಿಂಗ್ ನಿರ್ಮಾಣದ ಮೊದಲ ಚಿತ್ರ 'ಲೆಟ್ಸ್ ಗೆಟ್​ ಮ್ಯಾರೀಡ್' (ಎಲ್‌ಜಿಎಂ) ಜುಲೈ 28 ರಂದು ತೆರೆ ಕಂಡಿದೆ. 'ಎಲ್​​ಜಿಎಂ' ತಮಿಳು ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮೈದಾನದಲ್ಲಿ ಬ್ಯಾಟ್​ ಹಿಡಿದು ಫೋರ್​, ಸಿಕ್ಸ್​ ಬಾರಿಸುತ್ತಿದ್ದ ನಾಯಕ ಎಂಎಸ್​ ಧೋನಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಆದರೆ ಇದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ.

ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ಸೋತ 'ಎಲ್​ಜಿಎಂ': ಎಲ್‌ಜಿಎಂ ಸಿನಿಮಾಗೆ ಸಂಬಂಧಿಸಿದಂತೆ ಟೀಸರ್​, ಟ್ರೇಲರ್​ ಮತ್ತು ಪೋಸ್ಟರ್​ಗಳು ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಅದಕ್ಕಿಂತ ಮುಖ್ಯವಾಗಿ ಧೋನಿ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದರಿಂದ ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿತ್ತು. ಎಲ್‌ಜಿಎಂ ಜುಲೈ 28 ರಂದು ತೆರೆ ಕಂಡಿದ್ದು, ಚಿತ್ರ ವಿಮರ್ಶೆಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ನಿರೀಕ್ಷಿತ ಮಟ್ಟದಲ್ಲಿ ಅಭಿಮಾನಿಗಳನ್ನು ಮೆಚ್ಚಿಸಿಲ್ಲ ಎಂಬುದು ವಿಮರ್ಶೆಗಳಿಂದ ಸ್ಪಷ್ಟವಾಗಿದೆ.

ಹೌದು, ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕಥೆ ಮತ್ತು ಚಿತ್ರಕಥೆ ಸಾಧಾರಣವಾಗಿದೆ ಎಂದು ಚಿತ್ರ ಪ್ರೇಮಿಗಳು ಟ್ವೀಟ್​ ಮಾಡುತ್ತಿದ್ದಾರೆ. ಚಿತ್ರದಲ್ಲಿ ಯೋಗಿ ಬಾಬು ಅವರ ಕಾಮಿಡಿ ಮಾತ್ರ ಅದ್ಭುತವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರಿಗಾಗಿ ಮಾತ್ರ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಬಹುದು ಎನ್ನುತ್ತಿದ್ದಾರೆ.​ ಇದರಿಂದಾಗಿ ಲಾಂಗ್​ ರನ್​ ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಕಡಿವಾಣ ಬೀಳುವ ಸಾಧ್ಯತೆಗಳೂ ಇವೆ. ಒಟ್ಟಿನಲ್ಲಿ 'ಲೆಟ್ಸ್ ಗೆಟ್​ ಮ್ಯಾರೀಡ್' ಸಿನಿಮಾ ಧೋನಿ ಅಭಿಮಾನಿಗಳಿಗಂತೂ ನಿರಾಸೆ ಮೂಡಿಸಿದೆ. ಈ ಚಿತ್ರವು ತೆಲುಗಿನಲ್ಲಿ ಆಗಸ್ಟ್ 4 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ:Deepika Padukone: ಗಂಡನ ಸಿನಿಮಾ ವೀಕ್ಷಿಸಿದ ದೀಪಿಕಾ ಪಡುಕೋಣೆ; ಜಾಕೆಟ್​​ನಲ್ಲಿ ರಣ್​​​ವೀರ್​ ಭಾವಚಿತ್ರ

ಎಲ್​ಜಿಎಂ ಚಿತ್ರತಂಡ ಹೀಗಿದೆ..ಇನ್ನು ಎಲ್​ಜಿಎಂ ಚಿತ್ರಕ್ಕೆ ವಿಶ್ವಜಿತ್​ ಸಂಗೀತ ನಿರ್ದೇಶನ ಮಾಡುತ್ತಿದ್ದು, ಪ್ರದೀಪ್​ ರಾಗವ್​ ಸಂಕಲನವಿದೆ. ನಟ ಹರೀಶ್ ಕಲ್ಯಾಣ್ ಮತ್ತು ಇವಾನಾ ಪ್ರಮುಖ ಪಾತ್ರದಲ್ಲಿದ್ದಾರೆ. ಇವರಲ್ಲದೇ, ಹಿರಿಯ ನಟಿ ನದಿಯಾ, ಯೋಗಿ ಬಾಬು, ಆರ್‌ಜೆ ವಿಜಯ್, ವಿಟಿವಿ ಗಣೇಶ್, ದೀಪಾ ಮತ್ತು ವೆಂಕಟ್ ಪ್ರಭು ಕೂಡ ನಟಿಸಿದ್ದಾರೆ.

ಚಿತ್ರದ ಕಥೆಯು ವಿಶಿಷ್ಟವಾಗಿದೆ ಮತ್ತು ಇದೊಂದು ಕೌಟುಂಬಿಕ ಸಿನಿಮಾವಾಗಿದೆ. ಮೀರಾ (ಇವಾನಾ) ತನ್ನ ಸಹುದ್ಯೋಗಿ ಗೌತಮ್ (ಹರೀಶ್) ನೊಂದಿಗೆ ಪ್ರೀತಿಯಲ್ಲಿ ಬೀಳುವ ಕಥೆಯಿದು. ಅವಿಭಕ್ತ ಕುಟುಂಬ, ಮದುವೆಗೆ ಒಪ್ಪಿಸಲು ಗೌತಮ್ ಪ್ರಯತ್ನ, ಎಲ್ಲರನ್ನು ಒಪ್ಪಿಸಿ ಅವರು ಹೇಗೆ ಮದುವೆಯಾದರು? ಆ ಅವಿಭಕ್ತ ಕುಟುಂಬದಲ್ಲಿರಲು ಮೀರಾ ಒಪ್ಪಿದರೇ? ಈ ಎಲ್ಲ ಇಂಟ್ರೆಸ್ಟಿಂಗ್​ ವಿಷಯಗಳನ್ನು ಸಿನಿಮಾ ಒಳಗೊಂಡಿದೆ. ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಸಿನಿಮಾವನ್ನು ರಮೇಶ್ ತಮಿಳ್ಮಣಿ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:Bro movie: ₹50 ಕೋಟಿ ಕ್ಲಬ್​ ಸೇರಿದ 'ಬ್ರೋ': ಪವನ್​ ಕಲ್ಯಾಣ್​- ಸಾಯಿ ತೇಜ್​ ಕಾಂಬೋ ಹಿಟ್​

ABOUT THE AUTHOR

...view details