ಲಸ್ಟ್ ಸ್ಟೋರಿಸ್ (Lust Stories) ತನ್ನ ಎರಡನೇ ಭಾಗದೊಂದಿಗೆ ಮರಳಲು ಸಿದ್ಧವಾಗಿದೆ. ಲಸ್ಟ್ ಸ್ಟೋರಿಸ್ 2 ಎಂಬ ಶೀರ್ಷಿಕೆಯ ಚಿತ್ರದಲ್ಲಿ ತಮನ್ನಾ ಭಾಟಿಯಾ, ವಿಜಯ್ ವರ್ಮಾ, ಅಮೃತಾ ಸುಭಾಷ್, ಅಂಗದ್ ಬೇಡಿ, ಕಾಜೋಲ್, ಕುಮುದ್ ಮಿಶ್ರಾ, ಮೃಣಾಲ್ ಠಾಕೂರ್, ನೀನಾ ಗುಪ್ತಾ ಸೇರಿದಂತೆ ಮೊದಲಾದ ನಟರು ಅಭಿನಯಿಸಿದ್ದಾರೆ. ಅಮಿತ್ ರವೀಂದ್ರನಾಥ್ ಶರ್ಮಾ, ಆರ್. ಬಾಲ್ಕಿ, ಕೊಂಕಣ ಸೇನ್ ಶರ್ಮಾ ಮತ್ತು ಸುಜೋಯ್ ಘೋಷ್ ಸೇರಿ ನಾಲ್ಕು ನಿರ್ದೇಶಕರು ಕಥೆ ರಚಿಸಿದ್ದಾರೆ. ಈ ಬಹುನಿರೀಕ್ಷಿತ ಚಿತ್ರದ ಟೀಸರ್ ಇಂದು ಅನಾವರಣಗೊಂಡಿದೆ.
ಲಸ್ಟ್ ಸ್ಟೋರಿಸ್ 2ರ ಟೀಸರ್ ಅನ್ನು ಮಂಗಳವಾರ (ಇಂದು, ಜೂನ್ 6) ಅನಾವರಣಗೊಳಿಸಲಾಯಿತು. ಇದು ವಿಭಿನ್ನ ಭಾವನೆಗಳ ಪರಿಪೂರ್ಣ ಸಂಯೋಜನೆಯಾಗಿದೆ. ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯ ಟೀಸರ್, ಡೈಲಾಗ್‌ಗಳು ಮತ್ತು ಚುಂಬನದ ಸೀನ್ಗಳನ್ನು ಒಳಗೊಂಡಿದೆ. ಟೀಸರ್ ಎಲ್ಲಾ ಪ್ರಮುಖ ನಟರನ್ನು ತೋರಿಸಿದೆ. ಲಸ್ಟ್ ಸ್ಟೋರಿಸ್ 2 ಅನ್ನು ಆರ್‌ಎಸ್‌ವಿಪಿ ಮತ್ತು ಫ್ಲೈಯಿಂಗ್ ಯುನಿಕಾರ್ನ್ ಎಂಟರ್ಟೈನ್ಮೆಂಟ್ ನಿರ್ಮಿಸಿದೆ. ಈ ಚಿತ್ರ ಸಂಬಂಧಗಳ ಮೇಲೆ ಬೆಳಕು ಚೆಲ್ಲಲಿದೆ.
ಐದು ವರ್ಷಗಳ ಹಿಂದಿನ 'ಲಸ್ಟ್ ಸ್ಟೋರಿನ' ಎರಡನೇ ಭಾಗದ ಮೇಲೆ ಅಭಿಮಾನಿಗಳ ನಿರೀಕ್ಷೆ ಸಾಕಷ್ಟಿದೆ. ಹಾಸ್ಯ ನಾಟಕದ ಮತ್ತೊಂದು ಭಾಗಕ್ಕೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಲಸ್ಟ್ ಸ್ಟೋರಿ 2 ಟೀಸರ್ ಬಿಡುಗಡೆಯಾದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏಕೆಂದರೆ, ಚಿತ್ರರಂಗದಲ್ಲಿ ಸದ್ಯ ಸದ್ದು ಮಾಡುತ್ತಿರುವ ವದಂತಿಯ ಜೋಡಿಗಳಾದ ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದಾರೆ.
ರೂಮರ್ ಲವ್ ಬರ್ಡ್ಸ್ನ ಈ ರೊಮ್ಯಾಂಟಿಕ್ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ತಮನ್ನಾ ಸಂಬಂಧದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ವದಂತಿಯ ಜೋಡಿಯ ಸಂಬಂಧ ಶುರುವಾಗಲು ಇದೇ ಚಿತ್ರ ಕಾರಣ ಎಂದು ನೆಟ್ಟಿಗರು ಅಂದಾಜಿಸುತ್ತಿದ್ದಾರೆ.