ಕಾಲಿವುಡ್ ಸೂಪರ್ಸ್ಟಾರ್ ನಟ ದಳಪತಿ ವಿಜಯ್ ಮುಂಬರುವ ಬಹುನಿರೀಕ್ಷಿತ ಚಿತ್ರ 'ಲಿಯೋ'. ಇದೇ ಅಕ್ಟೋಬರ್ 19ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲು ಸಿದ್ಧಗೊಂಡಿದೆ. ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಪೋಸ್ಟರ್, ಹಾಡುಗಳಿಂದ ಪ್ರಚಾರ ಕಾರ್ಯ ಶುರು ಮಾಡಿದೆ. ಇದೀಗ ಟ್ರೇಲರ್ ಬಿಡುಗಡೆಯ ದಿನಾಂಕ ಕೂಡ ಅನೌನ್ಸ್ ಆಗಿದೆ.
'ಲಿಯೋ' ಸಿನಿಮಾದ ನಿರ್ಮಾಣ ಸಂಸ್ಥೆ ಸೆವೆನ್ ಸ್ಕ್ರೀನ್ ಸ್ಟುಡಿಯೋ ಹೊಸ ಪೋಸ್ಟರ್ನೊಂದಿಗೆ ಲಿಯೋ ಟ್ರೇಲರ್ ದಿನಾಂಕವನ್ನು ತಿಳಿಸಿದೆ. "ನಿಮ್ಮ ಆರ್ಡರ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಲಿಯೋ ಟ್ರೇಲರ್ ಆನ್ ದಿ ವೇ. ನಿಮ್ಮ ಊಟವನ್ನು ಆನಂದಿಸಲು ಸಿದ್ಧರಾಗಿ. ಸೆವೆನ್ ಸ್ಕ್ರೀನ್ ಸ್ಟುಡಿಯೋ ಅಕ್ಟೋಬರ್ 5 ರಂದು ನಿಮ್ಮಲ್ಲಿಗೆ ತಲುಪಿಸುತ್ತಿದೆ" ಎಂದು ಬರೆದುಕೊಂಡಿದೆ. ಲಿಯೋ ಟ್ರೇಲರ್ ಇದೇ ಅಕ್ಟೋಬರ್ 5 ರಂದು ಬಿಡುಗಡೆಯಾಗಲಿದೆ.
ಲಿಯೋ ಕನ್ನಡ ಪೋಸ್ಟರ್: ಇದಕ್ಕೂ ಮುನ್ನ 'ಲಿಯೋ' ಕನ್ನಡ ಪೋಸ್ಟರ್ ಅನಾವರಣಗೊಂಡಿತ್ತು. "ಶಾಂತವಾಗಿರಿ ಮತ್ತು ನಿಮ್ಮನ್ನು ನೀವು ಪಾರು ಮಾಡಿಕೊಳ್ಳಲು ಸಂಚು ರೂಪಿಸಿ. #LeoPosterFeast ಕಥೆಗಳನ್ನು ಅನಾವರಣಗೊಳಿಸುತ್ತದೆ. ಒಂದು ಸಮಯದಲ್ಲಿ ಒಂದು ಪೋಸ್ಟರ್. ಕನ್ನಡದಲ್ಲಿ ಲಿಯೋ ಭರ್ಜರಿ ರಿಲೀಸ್" ಎಂಬ ಶೀರ್ಷಿಕೆಯೊಂದಿಗೆ ಸೆವೆನ್ ಸ್ಕ್ರೀನ್ ಸ್ಟುಡಿಯೋ ಕನ್ನಡ ಪೋಸ್ಟರ್ ಅನ್ನು ಹಂಚಿಕೊಂಡಿತ್ತು.
ಇದನ್ನೂ ಓದಿ:'ಲಿಯೋ' ಚಿತ್ರದಿಂದ ಸಂಜಯ್ ದತ್ ಫಸ್ಟ್ ಲುಕ್ ಔಟ್: ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ