ಕರ್ನಾಟಕ

karnataka

ETV Bharat / entertainment

ಮದುವೆ ಬಳಿಕ ಮೊದಲ ದೀಪಾವಳಿ: ಹಬ್ಬದಾಚರಣೆಗೂ ಮುನ್ನ ಪ್ರವಾಸ ಕೈಗೊಂಡ ಸಿದ್ಧಾರ್ಥ್ ಕಿಯಾರಾ - ಕಿಯಾರಾ ಸಿದ್ಧಾರ್ಥ್ ದೀಪಾವಳಿ

Kiara Advani and Sidharth Malhotra: ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಏರ್​ಪೋರ್ಟ್ ಲುಕ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

Kiara Advani and Sidharth Malhotra
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ

By ETV Bharat Karnataka Team

Published : Nov 11, 2023, 1:40 PM IST

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಬಾಲಿವುಡ್​ನ ಜನಪ್ರಿಯ ಜೋಡಿಗಳಲ್ಲೊಂದು. ಅಪಾರ ಸಂಖ್ಯೆಯ ಅಭಿಮಾನಿಗಳ ಮೆಚ್ಚಿನ ಸೆಲೆಬ್ರಿಟಿ ಕಪಲ್​​. ಇದೇ ಸಾಲಿನ ಫೆಬ್ರವರಿಯಲ್ಲಿ ಹಸೆಮಣೆ ಏರಿದ ಲವ್​​ಬರ್ಡ್ಸ್​ ಸದ್ಯ ಬಾಲಿವುಡ್​ನ ಮಾದರಿ ದಂಪತಿ. ಪ್ರೇಮಪಕ್ಷಿಗಳು ಮದುವೆ ನಂತರ ತಮ್ಮ ಮೊದಲ ದೀಪಾವಳಿ ಆಚರಿಸಲು ಸಜ್ಜಾಗಿದ್ದಾರೆ. ಹಬ್ಬದ ಆಚರಣೆಗೂ ಮುನ್ನ ಶೇರ್ಷಾ ಜೋಡಿ ವಿಹಾರಕ್ಕೆ ಹೊರಟಿದ್ದು, ಇಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

ಪಾಪರಾಜಿಗಳು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​​​ ಖಾತೆಯಲ್ಲಿ ಸಿದ್​ಕಿಯಾರಾ ಜೋಡಿಯ ವಿಡಿಯೋ ಹಂಚಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ವಿಡಿಯೋದಲ್ಲಿ, ನಟಿ ಕಿಯಾರಾ ಅಡ್ವಾಣಿ ಬೇಬಿ ಪಿಂಕ್ ಸಲ್ವಾರ್ ಸೂಟ್ ಧರಿಸಿ ವಿಮಾನ ನಿಲ್ದಾಣದತ್ತ ಆಗಮಿಸುತ್ತಿರುವುದನ್ನು ಕಾಣಬಹುದು. ಕೇಶರಾಶಿಯನ್ನು ಕಟ್ಟದೇ ಸಡಿಲವಾಗಿ ಬಿಟ್ಟಿದ್ದರು, ಸನ್​ ಗ್ಲಾಸ್​, ಕೈಯಲ್ಲೊಂದು ಬ್ಯಾಗ್​​ - ಒಟ್ಟಾರೆ ಕಿಯಾರಾ ನೋಟ ಮನಮೋಹಕವಾಗಿತ್ತು. ಮತ್ತೊಂದೆಡೆ ನಟ ಸಿದ್ಧಾರ್ಥ್ ಮಲ್ಹೋತ್ರಾ ಏರ್​ಪೋರ್ಟ್​ ಕ್ಯಾಶುವಲ್​ ಲುಕ್​ನಲ್ಲಿ ಕಾಣಿಸಿಕೊಂಡರು. ಇಬ್ಬರೂ ಸಹ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್​ ಸದ್ದು ಮಾಡುತ್ತಿದೆ. ಅಭಿಮಾನಿಗಳು ತಮ್ಮ ಮೆಚ್ಚಿನ ತಾರಾ ಜೋಡಿ ಮೇಲೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಭೂಲ್ ಭುಲೈಯಾ 2 ನಟಿ ಕಿಯಾರಾ ಅಡ್ವಾಣಿ, ತಾವು ಮತ್ತು ಸಿದ್ಧಾರ್ಥ್ ತಮ್ಮ ವೈಯಕ್ತಿಕ ಜೀವನದ ಕುರಿತು ಹೆಚ್ಚು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ, ವೈಯಕ್ತಿಕ ವಿಚಾರಗಳನ್ನು ಬಹಳ ವಿವೇಚನೆಯಿಂದ ನೋಡಿಕೊಳ್ಳುತ್ತೇವೆಂದು ಬಹಿರಂಗಪಡಿಸಿದ್ದರು. ಈ ಬಗ್ಗೆ ವಿವರಿಸುತ್ತಾ, ಕಿಯಾರಾ ಅವರು ತಮ್ಮ ಸಂಬಂಧವನ್ನು ರಕ್ಷಿಸಿಕೊಳ್ಳುವುದು ಮಹತ್ವದ ವಿಚಾರ ಎಂದು ಒತ್ತಿ ಹೇಳಿದ್ದರು. ಈ ವಿಷಯದ ಬಗ್ಗೆ ಮತ್ತಷ್ಟು ವಿವರಿಸಿದ್ದ ನಟಿ, ಇಬ್ಬರೂ ಸ್ವಯಂ ನಿರ್ಮಿತ ನಟರಾಗಿ ಉದ್ಯಮದಲ್ಲಿ ತಮ್ಮದೇ ಆದ ದಾರಿ ಕಂಡುಕೊಂಡಿರುವುದಾಗಿಯೂ ಹೇಳಿದ್ದರು. ಕಷ್ಟಪಟ್ಟು ಕೆಲಸ ಮಾಡಿದ್ದೇವೆ, ತಮ್ಮ ವೃತ್ತಿಜೀವನಕ್ಕೆ ಹೆಚ್ಚಿನ ಶ್ರಮ ಹಾಕಿದ್ದೇವೆ, ವೈಯಕ್ತಿಕ ಜೀವನವು ನಮ್ಮ ವೃತ್ತಿಪರ ಸಾಧನೆಗಳನ್ನು ಮರೆಮಾಡುವಂತಾಗಬಾರದು ಎಂದು ತಿಳಿಸಿದ್ದರು.

ಇದನ್ನೂ ಓದಿ:ದೀಪಾವಳಿ ಸಂಭ್ರಮದಲ್ಲಿ ಬಾಲಿವುಡ್ ಗಣ್ಯರು: ​​ಶಾರುಖ್​ ಸೇರಿದಂತೆ ಸೂಪರ್​ ಸ್ಟಾರ್ಸ್ ವಿಡಿಯೋ ನೋಡಿ

ಸ್ಟಾರ್​ ಕಪಲ್​ನ ಸಿನಿಮಾಗಳನ್ನು ಗಮನಿಸುವುದಾದರೆ, ಕಿಯಾರಾ ಅಡ್ವಾಣಿ ಕೊನೆಯದಾಗಿ ಸತ್ಯ ಪ್ರೇಮ್ ಕಿ ಕಥಾ ಚಿತ್ರದಲ್ಲಿ ಕಾಣಿಸಿಕೊಂಡರು. ಮುಂದೆ, ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ನಟ ಸಿದ್ಧಾರ್ಥ್ ಮಲ್ಹೋತ್ರಾ 'ಯೋಧಾ' ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಚಿತ್ರದಲ್ಲಿ ದಿಶಾ ಪಟಾನಿ ಮತ್ತು ರಾಶಿ ಖನ್ನಾ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಪ್ರಕರಣ: ಆರೋಪಿಗಳ ವಿರುದ್ಧ ಎಫ್ಐಆರ್​

ABOUT THE AUTHOR

...view details