ತಾರಾ ದಂಪತಿಗಳು ಒಂದಲ್ಲ ಒಂದು ವಿಚಾರವಾಗಿ ಸದ್ದು ಮಾಡುತ್ತಲೇ ಇರುತ್ತಾರೆ. ತಮ್ಮ ಮೆಚ್ಚಿನ ಸ್ಟಾರ್ ಕಪಲ್ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸಹ ಉತ್ಸುಕರಾಗಿರುತ್ತಾರೆ. ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳ ಮೆಚ್ಚಿನ ತಾರಾ ದಂಪತಿ. ಈ ಜೋಡಿಯ ಫೋಟೋ, ವಿಡಿಯೋಗಳಿಗಾಗಿ ಕಾಯುತ್ತಿದ್ದ ಫ್ಯಾನ್ಸ್ಗೆ ಇದೀಗ ಹೊಸ ಸುಂದರ ಚಿತ್ರಗಳು ಲಭ್ಯವಾಗಿದೆ.
ವಿಕ್ಯಾಟ್ ಕಪಲ್ ಶುಕ್ರವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಏರ್ಪೋರ್ಟ್ ಟರ್ಮಿನಲ್‌ನಿಂದ ದಂಪತಿಗ ಹೊರಡುವ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಹೊರಟರೂ, ಇಬ್ಬರೂ ಪ್ರತ್ಯೇಕವಾಗಿ ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುವುದು ಕಂಡು ಬಂದಿದೆ.
ಪಾಪರಾಜಿಯೊಬ್ಬರು ನಟಿ ಕತ್ರಿನಾ ಕೈಫ್ ಅವರು ತಮ್ಮ ಕಾರಿನ ಕಡೆಗೆ ತೆರಳುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಟಿ ಬೂದು ಬಣ್ಣದ ಟಿ ಶರ್ಟ್, ಕಪ್ಪು ಪ್ಯಾಂಟ್ ಮತ್ತು ಶೂ ಧರಿಸಿದ್ದರು. ಜೊತೆಗೆ ಮಾಸ್ಕ್ ಮತ್ತು ಬ್ಲ್ಯಾಕ್ ಗ್ಲಾಸ್ ಅನ್ನು ಸಹ ಧರಿಸಿದ್ದರು. ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ಕೂಡ ಕೊಟ್ಟರು. ಮತ್ತೊಂದೆಡೆ, ವಿಕ್ಕಿ ಕೌಶಲ್ ಅವರು ಬಿಳಿ ಟಿ ಶರ್ಟ್, ಬೂದು ಬಣ್ಣದ ಜಾಕೆಟ್, ಕಪ್ಪು ಪ್ಯಾಂಟ್ ಧರಿಸಿದ್ದರು. ಬ್ಲ್ಯಾಕ್ ಗ್ಲಾಸ್ ಮತ್ತು ಕ್ಯಾಪ್ ಧರಿಸಿದ್ದರು. ವಿಕ್ಕಿ ಕೂಡ ತಮ್ಮ ಹಲವಾರು ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು. ಈ ವಿಡಿಯೋ ಮತ್ತು ಚಿತ್ರಗಳೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಫೋಟೋ, ವಿಡಿಯೋಗಳಿಗೆ ಸ್ಪಂದಿಸಿರುವ ಇನ್‌ಸ್ಟಾಗ್ರಾಮ್ ಬಳಕೆದಾರರು, "ಕತ್ರಿನಾ ಅವರನ್ನು ನಾನು ನೋಡಿಲ್ಲ ಎಂದು ನನಗೆ ಅನಿಸುತ್ತಿದೆ, ಕ್ಯಾಶುವಲ್ ಡ್ರೆಸ್ನಲ್ಲೂ ಅದ್ಭುತ, ಎವರ್ಗ್ರೀನ್'' ಎಂದು ಬರೆದಿದ್ದಾರೆ. ಮತ್ತೋರ್ವ ಬಳಕೆದಾರರು, ''ಬಹು ಸಮಯದ ನಂತರ ವಿಕ್ಯಾಟ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ, ಸ್ವೀಟ್ ಕಪಲ್'' ಎಂದು ಬರೆದಿದ್ದಾರೆ.