ಕರ್ನಾಟಕ

karnataka

ETV Bharat / entertainment

ಕಾರ್ತಿಕ್ ಆರ್ಯನ್-ಕಿಯಾರಾ ಅಡ್ವಾಣಿ ನಟನೆಯ ಸತ್ಯಪ್ರೇಮ್​ ಕಿ ಕಥಾ ಬಿಡುಗಡೆಗೆ ಮುಹೂರ್ತ - actress Kiara Advani

ಸತ್ಯಪ್ರೇಮ್​ ಕಿ ಕಥಾ ಸಿನಿಮಾ 2023ರ ಜೂನ್ 29ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Kartik Aaryan, Kiara Advani
ಕಾರ್ತಿಕ್ ಆರ್ಯನ್-ಕಿಯಾರಾ ಅಡ್ವಾಣಿ

By

Published : Aug 26, 2022, 4:49 PM IST

ಭೂಲ್ ಭುಲಯ್ಯಾ ಚಿತ್ರದಲ್ಲಿ ಮೋಡಿ ಮಾಡಿದ ನಟ ಕಾರ್ತಿಕ್ ಆರ್ಯನ್ ಮತ್ತು ನಟಿ ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಚಿತ್ರ ಸತ್ಯಪ್ರೇಮ್​ ಕಿ ಕಥಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. 2023ರ ಜೂನ್ 29ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಯಾರಕರು ಇಂದು ಘೋಷಿಸಿದ್ದಾರೆ.

ಮರಾಠಿ ನಾಟಕ ಆನಂದಿ ಗೋಪಾಲ್‌ದಿಂದ ಖ್ಯಾತಿ ಪಡೆದ, ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಸಮೀರ್ ವಿದ್ವಾನ್ಸ್ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ನಮಃ ಪಿಕ್ಚರ್ಸ್ ಮತ್ತು ನಡಿಯಾದ್ವಾಲಾಸ್ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್‌ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ನಟ ಕಾರ್ತಿಕ್ ಆರ್ಯನ್ ಮತ್ತು ಸಾಜಿದ್ ನಡಿಯಾದ್ವಾಲ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ.

ಈ ಮೊದಲು ಚಿತ್ರಕ್ಕೆ ಸತ್ಯನಾರಾಯಣ್ ಕಿ ಕಥಾ ಎಂದು ಹೆಸರಿಡಲಾಗಿತ್ತು. ಬಳಿಕ ಸಿನಿಮಾದ ಶೀರ್ಷಿಕೆ ಬದಲಾಯಿಸಿ ಸತ್ಯಪ್ರೇಮ್​ ಕಿ ಕಥಾ ಎಂದು ಹೆಸರಿಡಲಾಯಿತು. ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಪ್ರೇಮ್​ ಕಹಾನಿ. ಇತ್ತೀಚಿಗೆ ಬಿಡುಗಡೆಯಾದ ಭೂಲ್ ಭುಲಯ್ಯಾ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾನಿ ತೆರೆಮೇಲೆ ಮೋಡಿ ಮಾಡಿದ್ದರು. ಇದು ವಿಶ್ವದಾದ್ಯಂತ ಒಟ್ಟು 230 ಕೋಟಿ ರೂ. ಗಳಿಸಿತ್ತು.

ಇದನ್ನೂ ಓದಿ:ಕನ್ನಡದ ರಾಕಿ ಭಾಯ್ ಯಶ್​ ನಂಬರ್​ ಒನ್​ ನಟ: ಶಾಹಿದ್ ಕಪೂರ್

ಸದ್ಯ ಕಾರ್ತಿಕ್ ಶೆಹಜಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲೇ ಈ ಸಿನಿಮಾ ಕೂಡ ತೆರೆ ಕಾಣಲಿದೆ. ಈ ರೊಮ್ಯಾಂಟಿಕ್ ಥ್ರಿಲ್ಲರ್ ಚಿತ್ರವನ್ನು ಏಕ್ತಾ ಕಪೂರ್ ನಿರ್ಮಿಸಿದ್ದಾರೆ. ಕಿಯಾರಾ ಅವರು ವಿಕ್ಕಿ ಕೌಶಲ್ ಮತ್ತು ಭೂಮಿ ಪೆಡ್ನೇಕರ್ ಅವರನ್ನೊಳಗೊಂಡ ಗೋವಿಂದ ನಾಮ್ ಮೇರಾ ಸಿನಿಮಾದಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ, ಕಿಯಾರಾ ತನ್ನ ವದಂತಿಯ ಗೆಳೆಯ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಸಿನಿಮಾವೊಂದನ್ನು ಮಾಡಲಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ABOUT THE AUTHOR

...view details