ಕರ್ನಾಟಕ

karnataka

ETV Bharat / entertainment

ಬಾಲಿವುಡ್​ಗೆ ಕಾಲಿಟ್ಟ 'ಕಾಂತಾರ' ನಟಿ: ದಿ ವ್ಯಾಕ್ಸಿನ್​ ವಾರ್​ ಚಿತ್ರದಲ್ಲಿ ಸಪ್ತಮಿ ಗೌಡ - Vivek Ranjan Agnihotri

ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ ಅವರ ಹೊಸ ಚಿತ್ರ 'ದಿ ವ್ಯಾಕ್ಸಿನ್ ವಾರ್' ನಲ್ಲಿ ಕಾಂತಾರ ನಟಿ ಸಪ್ತಮಿ ಗೌಡ ನಟಿಸಲಿದ್ದಾರೆ. ಈ ಮೂಲಕ ಬಾಲಿವುಡ್​ಗೆ ನಟಿ ಸಪ್ತಮಿ ಎಂಟ್ರಿ ಕೊಡ್ತಿದ್ದಾರೆ.

Sapthami Gowda
ಸಪ್ತಮಿ ಗೌಡ

By

Published : Jan 15, 2023, 10:47 AM IST

ಮುಂಬೈ: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ 'ಕಾಂತಾರ' ಸಿನಿಮಾದಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದ ನಟಿ ಸಪ್ತಮಿ ಗೌಡ ಇದೀಗ ಬಾಲಿವುಡ್​ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಕಾಂತಾರ ಸೂಪರ್‌ ಹಿಟ್ ಆದ ಬಳಿಕ ಸಪ್ತಮಿ ಅವರಿಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ ಒದಗಿ ಬಂದಿತ್ತು. ಇದೀಗ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ರಂಜನ್​ ಅಗ್ನಿಹೋತ್ರಿ ಅವರ ಹೊಸ ಚಿತ್ರದಲ್ಲಿ ಕನ್ನಡತಿ ಬಣ್ಣ ಹಚ್ಚಲಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಕಾಂತಾರ ಚಿತ್ರವು ಬಾಲಿವುಡ್​ನಲ್ಲಿ ಭಾರಿ ಸದ್ದು ಮಾಡಿರುವುದರಿಂದ ಸಪ್ತಮಿ ಗೌಡಗೆ ಒಳ್ಳೆಯ ಅವಕಾಶ ದೊರೆತಿದೆ. ಸದ್ಯಕ್ಕೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ 'ದಿ ವ್ಯಾಕ್ಸಿನ್ ವಾರ್' ಎಂಬ ಚಿತ್ರ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಸಪ್ತಮಿ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:'ಕಾಂತಾರ' ಚಿತ್ರ ಕುರಿತು ಹೇಳಿಕೆ; ಬಾಲಿವುಡ್​ ನಿರ್ದೇಶಕರ ನಡುವೆ ಟ್ವೀಟ್​ ವಾರ್​​

ಈ ಕುರಿತು ತಮ್ಮ ಇನ್ಸ್​ಸ್ಟಾಗ್ರಾಮ್ ಖಾತೆಯಲ್ಲಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪೋಸ್ಟ್​ವೊಂದನ್ನು ಮಾಡಿದ್ದು, "ಸುಸ್ವಾಗತ ಸಪ್ತಮಿ, 'ದಿ ವ್ಯಾಕ್ಸಿನ್ ವಾರ್​'ನಲ್ಲಿ ನಿಮ್ಮ ಪಾತ್ರವು ಖಂಡಿತ ಜನರ ಹೃದಯ ಮುಟ್ಟುತ್ತದೆ" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ನಟಿ, "ನಾನು ನಿಮ್ಮ ಈ ಪ್ರಾಜೆಕ್ಟ್​ನ ಭಾಗವಾಗಿರುವುದು ಸಂತಸ ನೀಡಿದೆ. ನಿಮ್ಮೊಟ್ಟಿಗೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್." ಎಂದಿದ್ದಾರೆ.

ಇದನ್ನೂ ಓದಿ:ಕಾಂತಾರ ಸುಂದರಿ ಸಪ್ತಮಿ ಗೌಡ ಬಗ್ಗೆ ಯಾರಿಗೂ ಗೊತ್ತಿರದ ಇಂಟ್ರಸ್ಟಿಂಗ್​ ಸಂಗತಿಗಳಿವು!

'ದಿ ವ್ಯಾಕ್ಸಿನ್​ ವಾರ್' ಸಿನಿಮಾದ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ. ಕೋವಿಡ್​ ಸಂದರ್ಭದಲ್ಲಿನ ನೈಜ ಘಟನೆಗಳನ್ನು ಆಧರಿಸಿ ಚಿತ್ರ ತಯಾರಾಗುತ್ತಿದೆ. ಜೊತೆಗೆ, ಭಾರತೀಯ ವಿಜ್ಞಾನಿಗಳ ಕಥೆಯಾಧರಿತವಾಗಿದೆ. ಇದರಲ್ಲಿ ಸಪ್ತಮಿ ಗೌಡ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ. ದಿ ವ್ಯಾಕ್ಸಿನ್ ವಾರ್ ಸಿನಿಮಾದ ಚಿತ್ರೀಕರಣ ಈಗಾಗಲೇ ಲಕ್ನೋದಲ್ಲಿ ಪ್ರಾರಂಭವಾಗಿದೆ.

ಇದನ್ನೂ ಓದಿ:ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ಸೆಟ್ಟೇರಿದ ಕಾಳಿ ಸಿನಿಮಾ.. ಅಭಿಷೇಕ್​ಗೆ ಕಾಂತಾರದ ಸಪ್ತಮಿ ಗೌಡನಾಯಕಿ

ಸಪ್ತಮಿ ಗೌಡ ಯಾರು?: ಬೆಂಗಳೂರಿನವರಾದ ಸಪ್ತಮಿಗೌಡ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ಅವರ ಪುತ್ರಿ. ಇವರು ದುನಿಯಾ ಸೂರಿ ನಿರ್ದೇಶನದ, ಧನಂಜಯ್ ಅಭಿನಯದ ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಸಿನಿಮಾ ಮಾತ್ರವಲ್ಲದೇ ಅಡ್ವೆಂಚರ್ಸ್ ಬಗ್ಗೆ ಕ್ರೇಜ್ ಹೊಂದಿರುವ ಸಪ್ತಮಿ ಗೌಡ, ಫಿಟ್‌ನೆಸ್‌ಗೆ ತುಂಬಾನೇ ಮಹತ್ವ ಕೊಡ್ತಾರಂತೆ.

ಇದನ್ನೂ ಓದಿ:ಕಾಂತಾರ ಸಿನಿಮಾದ ಸಿಂಗಾರ ಸಿರಿಯೆ ಹಾಡಿನಿಂದ ಕನ್ನಡಿಗರ ಮನಗೆದ್ದ ನಟಿ ಸಪ್ತಮಿ ಗೌಡ

ABOUT THE AUTHOR

...view details