ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ಮತ್ತು ತಂತ್ರಗಾರಿಕೆ ಚುರುಕಾಗಿದೆ. ಪ್ರತಿ ಸ್ಪರ್ಧಿಗಳು ತಮ್ಮ ಸಾಮರ್ಥ್ಯ, ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ. ಪ್ರತೀ ಟಾಸ್ಕ್ ವಿಚಾರದಲ್ಲೂ ಕೊಂಚ ವಾದ ವಿವಾದ, ಚರ್ಚೆ, ಮನಸ್ತಾಪಗಳು ಆಗೋದು ಸಹಜ. ಅದರಂತೆ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದ್ದು, ಸ್ಪರ್ಧಿಗಳು ಟಾಸ್ಕ್ ವೇಳೆ ಧರಣಿಗೆ ಕುಳಿತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್ ಮಾಡಿದ್ದು, ಇದರಲ್ಲಿ ಸ್ಪರ್ಧಿ ಅರುಣ್ಸಾಗರ್ ಧರಣಿಗೆ ಕೂರುತ್ತಿರುವುದಾಗಿ ತಿಳಿಸಿದ್ದಾರೆ. ಅರುಣ್ಸಾಗರ್ ವರ್ತನೆಗೆ ಮನೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಕೆ ಧರಣಿಗೆ ಕುಳಿತರು, ಸ್ಪರ್ಧಿಗಳ ಅಸಮಾಧಾನವೇನು? ಎಂಬುದು ಇಂದಿನ ಸಂಪೂರ್ಣ ಸಂಚಿಕೆಯಲ್ಲಿ ತಿಳಿಯಲಿದೆ.