ಸ್ಯಾಂಡಲ್ವುಡ್ನ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'ಕಬ್ಜ' ರಿಲೀಸ್ಗೆ ದಿನಗಣನೆ ಆರಂಭವಾಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ಸಪ್ತಸಾಗರದಾಚೆ ಕೂಡಾ ಅಪ್ಪು ಜನ್ಮದಿನದಂದು ಬಿಡುಗಡೆ ಆಗಲಿದೆ ಈ ಪ್ಯಾನ್ ಇಂಡಿಯಾ ಚಿತ್ರ. ಅದ್ಧೂರಿ ಮೇಕಿಂಗ್, ಬಿಗ್ ಸ್ಟಾರ್ ಕಾಸ್ಟ್, ಟ್ರೇಲರ್, ಟೀಸರ್ನಿಂದ ಸದ್ದು ಮಾಡುತ್ತಿರುವ ಈ ಚಿತ್ರದ ಮೇಲೆ ಭಾರತದ ಕಣ್ಣಿದೆ.
ಭರ್ಜರಿ ಕಬ್ಜ ಪ್ರಚಾರ: 'ಕಬ್ಜ' ನಿರ್ದೇಶಕ ಆರ್ ಚಂದ್ರು ಕನಸಿನ ಕೂಸು. ಈ ಕಾರಣಕ್ಕೆ ರಿಲೀಸ್ ವಿಚಾರದಲ್ಲಿ ಕಾಂಪ್ರೋಮೈಸ್ ಆಗದೇ ದೊಡ್ಡ ಮಟ್ಟದಲ್ಲಿಯೇ ಬಿಡುಗಡೆ ಮಾಡಬೇಕೆಂಬ ಉತ್ಸಾಹದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈನಲ್ಲಿ ಭರ್ಜರಿ ಪ್ರಮೋಷನ್ ಮಾಡುತ್ತಿದ್ದಾರೆ. ಈ ಹಿನ್ನೆಲೆ ಜಗತ್ತಿನಾದ್ಯಂತ ಕಬ್ಜ ಕ್ರೇಜ್ ಇದೆ.
ಕಬ್ಜ ರಿಯಲ್ ಹೀರೋ ಆರ್ ಚಂದ್ರು:ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವ ರಾಜ್‍ಕುಮಾರ್ ನಟನೆಯಲ್ಲಿ ಕಬ್ಜ ರೆಡಿಯಾಗಿದೆ. ಚಿತ್ರದ ಹೀರೋ ರಿಯಲ್ ಸ್ಟಾರ್ ಉಪೇಂದ್ರ ಆದ್ರೂ ತೆರೆಯ ಹಿಂದಿನ ದೊರೆ, ತೆರೆಯ ಹಿಂದಿನ ಹೀರೋ ಅಂದ್ರೆ ಅದು ಆರ್.ಚಂದ್ರು. ಈ ಮಾತನ್ನು ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಒಪ್ಪಿಕೊಂಡಿದ್ದಾರೆ.
ಆರ್ ಚಂದ್ರು ಬಗ್ಗೆ ಗುಣಗಾನ: ಹೌದು, ಹೈದರಾಬಾದ್ನಲ್ಲಿ ಮಾತನಾಡಿದ ರಿಯಲ್ ಸ್ಟಾರ್ ಉಪ್ಪಿ ಇಡೀ ಸಿನಿಮಾ ಕ್ರೆಡಿಟ್ ಅನ್ನು ನಿರ್ದೇಶಕ ಆರ್.ಚಂದ್ರು ಅವರಿಗೆ ಕೊಟ್ಟರು. ಈ ಸಿನಿಮಾ ಆಗೋಕೆ ಕಾರಣ ಆರ್.ಚಂದ್ರು. 2018ರಲ್ಲಿ ಸಿನಿಮಾ ಶುರುವಾಯ್ತು. 19ರ ಕೊನೆಯಲ್ಲಿ ಕೋವಿಡ್ ಬಂತು. 20, 21, 22 ಆಯ್ತು. 2023ರಲ್ಲಿ ಕಬ್ಜ ನಿಮ್ಮ ಮುಂದೆ ಬರಲು ಸಜ್ಜಾಗಿದೆಯೆಂದ್ರೆ ಅದಕ್ಕೆ ಕಾರಣೀಭೂತರು ಒನ್ ಅಂಡ್ ಓನ್ಲಿ ಆರ್ ಚಂದ್ರು ಎಂದು ನಿರ್ದೇಶಕರ ಬಗ್ಗೆ ಮನಸಾರೆ ಕೊಂಡಾಡಿದ್ರು ರಿಯಲ್ ಸ್ಟಾರ್ ಉಪೇಂದ್ರ.