ಕರ್ನಾಟಕ

karnataka

ETV Bharat / entertainment

ಬಿಗ್​ ಅನೌನ್ಸ್​ಮೆಂಟ್! 'ಕಬ್ಜ 2' ಪೋಸ್ಟರ್ ರಿಲೀಸ್​, ಖಾಲಿ ಕುರ್ಚಿ ಮೇಲೆ ಕೂರೋರ‍್ಯಾರು? - Kabzaa latest news

'ಕಬ್ಜ 2' ನಿರ್ಮಾಣವಾಗಲಿದೆ ಎಂದು ನಿರ್ದೇಶಕ ಆರ್.ಚಂದ್ರು ಅಧಿಕೃತವಾಗಿ ಘೋಷಿಸಿ, ಮುಂದುವರಿದ ಭಾಗದ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

Kabzaa 2 poster
ಕಬ್ಜ 2 ಪೋಸ್ಟರ್ ರಿಲೀಸ್​

By

Published : Apr 14, 2023, 6:55 PM IST

ವಿಭಿನ್ನ ಕಥೆ, ಅದ್ಧೂರಿ ಮೇಕಿಂಗ್, ಕಥೆ ರವಾನಿಸದ ಶೈಲಿ​ ಮತ್ತು ಬಿಗ್​​ ಸ್ಟಾರ್​ ಕಾಸ್ಟ್ ಮೂಲಕ ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗೆ ಸದ್ದು ಮಾಡಿದ್ದ ಚಂದನವನದ ಚಿತ್ರ 'ಕಬ್ಜ'. ಆರ್.​ಚಂದ್ರು ಆ್ಯಕ್ಷನ್​ ಕಟ್​ ಹೇಳಿದ್ದ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಕರುನಾಡ ಚಕ್ರವರ್ತಿ ಶಿವ ರಾಜ್​​ಕುಮಾರ್ ನಟನೆ ಅಭಿಮಾನಿಗಳ ಮನ ತಲುಪಿ ಭರ್ಜರಿ ಕಲೆಕ್ಷನ್​ ಮಾಡುವಲ್ಲಿ ಚಿತ್ರ ಯಶಸ್ವಿಯಾಯಿತು.

ಮಾರ್ಚ್​ 17ರಂದು ಕನ್ನಡ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾದ ಕಬ್ಜ 1 ಬಾಕ್ಸ್ ಆಫೀಸ್​ನಲ್ಲಿ 200 ಕೋಟಿ ರೂಪಾಯಿಗೂ ಅಧಿಕ ಲೂಟಿ ಮಾಡಿದೆ. ಮುಂದುವರಿದ ಭಾಗದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಚಿತ್ರ ತೆರೆಕಂಡು ಒಂದು ತಿಂಗಳಾಗುವುದರೊಳಗೆ ಚಿತ್ರತಂಡದಿಂದ ಬಿಗ್​ ಅನೌನ್ಸ್​ಮೆಂಟ್ ಆಗಿದೆ. ಹೌದು, ನಿರ್ದೇಶಕ ಆರ್​.ಚಂದ್ರು 'ಕಬ್ಜ' ಸೀಕ್ವೆಲ್​ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.

ಆರ್​.ಚಂದ್ರು ಟ್ವೀಟ್:ನಿರ್ದೇಶಕ ಆರ್.ಚಂದ್ರು ತಮ್ಮ ಟ್ವಿಟರ್ ಖಾತೆಯಲ್ಲಿ 'ಕಬ್ಜ 2' ಪೋಸ್ಟರ್ ಶೇರ್ ಮಾಡಿದ್ದಾರೆ. ''ಬಿಗ್​ ಅನೌನ್ಸ್​ಮೆಂಟ್​, ಕಬ್ಜ 2, ಇದು ದೊಡ್ಡ ಯುದ್ಧಕ್ಕೆ ಸಾಕ್ಷಿಯಾಗುವ ಸಮಯ'' ಎಂಬ ಕ್ಯಾಪ್ಷನ್​ ಕೊಟ್ಟಿದ್ದಾರೆ. ಖಾಲಿ ಕುರ್ಚಿ ಇದ್ದು, 'ಕಬ್ಜ 2' ಎಂದು ಬರೆದಿದೆ. ಕುರ್ಚಿಗೆ ಬಂದೂಕನ್ನು ಒರಗಿಸಿ ಇಡಲಾಗಿದೆ. ಹಳೇ ಕಟ್ಟಡ, ವಾಹನಗಳು ಕುರ್ಚಿ ಹಿಂದೆ ಕಂಡುಬರುತ್ತದೆ. ಆದ್ರೆ ಶಿವ ರಾಜ್​​ಕುಮಾರ್, ಉಪೇಂದ್ರ, ಸುದೀಪ್​ ಅವರ ಫೋಟೋ ಇಲ್ಲ. ಹಾಗಾಗಿ ಮುಂದುವರಿದ ಭಾಗದ ಮೇಲೆ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ. ಇದೇ ನಾಯಕ ನಟರ ತಂಡ ತಂಡ ಮುಂದುವರಿಯಲಿದೆಯಾ, ಇವರ ಜೊತೆಗೆ ಹೊಸಬರ ಎಂಟ್ರಿಯೂ ಆಗಲಿದೆಯಾ ಎಂಬ ಕುತೂಹಲ ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು.

ಹೊಸಬರ ಎಂಟ್ರಿ?:ಕಬ್ಜ ಮೊದಲ ಭಾಗದ ಪ್ರಕಾರ, ಸೀಕ್ವೆಲ್​​ನಲ್ಲಿ ಶಿವ ರಾಜ್​​ಕುಮಾರ್​ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಊಹಿಸಲಾಗಿತ್ತು. ಕನ್ನಡದ ದಿಗ್ಗಜರು 'ಕಬ್ಜ 2'ನಲ್ಲಿ ಮುಂದುವರಿಯಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದ್ರೆ 'ಕಬ್ಜ 2' ಪೋಸ್ಟರ್​ನಲ್ಲಿ ನಟರ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ ಆರ್​. ಚಂದ್ರು. ಪೋಸ್ಟರ್ ನೋಡಿದ ಸಿನಿಪ್ರಿಯರು ಕಬ್ಜ ಸೀಕ್ವೆಲ್ ಹೇಗಿರಬಹುದು, ಕಥೆ ಏನಾಗಬಹುದು ಎಂದು ಅಂದಾಜಿಸುತ್ತಿದ್ದಾರೆ.

ಒಟಿಟಿಗೆ ಎಂಟ್ರಿ: ಇಂದಿನಿಂದ ಈ ಚಿತ್ರ ಅಮೆಜಾನ್ ಪ್ರೈಮ್​ನಲ್ಲಿ ಪ್ರಸಾರ ಆಗುತ್ತಿದೆ. ಥಿಯೇಟರ್​ನಲ್ಲಿ ಮಿಸ್​ ಮಾಡಿಕೊಂಡವರು, ಮತ್ತೆ ಸಿನಿಮಾ ನೋಡಬೇಕೆಂದುಕೊಂಡವರು ನೀವಿದ್ದ ಸ್ಥಳದಿಂದಲೇ ಸಿನಿಮಾ ವೀಕ್ಷಿಸಬಹುದು.

ಇದನ್ನೂ ಓದಿ:'ಮೊದಲು ಜಾನ್​​ ಅಂತಾರೆ, ನಂತ್ರ ಜೀವ​​ ತೆಗೀತಾರೆ': ಬಾಲಿವುಡ್​ ಬ್ಯಾಚುಲರ್​ ಸಲ್ಲು

ಕಬ್ಜ ಚಿತ್ರತಂಡ:ಸಾಮಾನ್ಯ ವ್ಯಕ್ತಿ ಹೇಗೆ ಗ್ಯಾಂಗ್​ಸ್ಟರ್ ಆಗುತ್ತಾನೆಂಬ ಕಥೆಯನ್ನು ಕಬ್ಜ ಒಳಗೊಂಡಿದೆ. ಸುಮಾರು 1942ರ ಸಂದರ್ಭಕ್ಕೆ ತಕ್ಕಂತೆ ಹೆಣೆಯಲಾದ ಈ ಕಥೆಯಲ್ಲಿಶ್ರೀಯಾ ಶರಣ್​, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮಾ, ನವಾಬ್ ಷಾ, ಪೊಸನಿ ಕೃಷ್ಣ ಮುರಳಿ ಚಿತ್ರದಲ್ಲಿ ನಟಿಸಿದ್ದಾರೆ. ಎಂ.ಟಿ.ಬಿ ನಾಗರಾಜ್ ಅರ್ಪಿಸಿರುವ ಈ ಚಿತ್ರವನ್ನು ನಿರ್ದೇಶಕ ಆರ್​ ಚಂದ್ರು ಅವರೇ ನಿರ್ಮಿಸಿದ್ದಾರೆ. ಆನಂದ ಪಂಡಿತ್‌ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು. ಎ.ಜೆ ಶೆಟ್ಟಿ ಕ್ಯಾಮರಾ ವರ್ಕ್, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್​ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಪೌಟ್-ಫೇಸ್ ಸೆಲ್ಫಿ: ಚಂದ್ರನಿಗೆ ಹೋಲಿಸಿದ ಅಭಿಮಾನಿ

ABOUT THE AUTHOR

...view details