ಕರ್ನಾಟಕ

karnataka

ETV Bharat / entertainment

ರಾಮೋಜಿ ಫಿಲಂ ಸಿಟಿಯಲ್ಲಿ ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್.. ಜೂ. ಎನ್​ಟಿಆರ್ ಮುಖ್ಯ ಅಥಿತಿ - ಬ್ರಹ್ಮಾಸ್ತ್ರ ಚಿತ್ರತಂಡ

ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಸೆ.2ರಂದು ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್​ ನಡೆಯಲಿದೆ. ಆರ್​​ಆರ್​ಆರ್​ ಸ್ಟಾರ್ ಜೂನಿಯರ್ ಎನ್​ಟಿಆರ್ ಮುಖ್ಯ ಅಥಿತಿಯಾಗಿ​ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.

Junior NTR will be guest in Brahmastra pre release event at Ramoji film city
ರಾಮೋಜಿ ಫಿಲಂ ಸಿಟಿಯಲ್ಲಿ ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್

By

Published : Aug 31, 2022, 2:10 PM IST

ಬಾಲಿವುಡ್ ಸೂಪರ್​ ಸ್ಟಾರ್ ರಣ್​​ಬೀರ್ ಕಪೂರ್, ನಟಿ ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹು ನಿರೀಕ್ಷಿತ ಬ್ರಹ್ಮಾಸ್ತ್ರ ​ಸಿನಿಮಾ ಸೆಪ್ಟೆಂಬರ್​ 9ರಂದು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಈ ಫೇಮಸ್ ತಾರಾ ದಂಪತಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ ಬ್ರಹ್ಮಾಸ್ತ್ರ ​ಸಿನಿಮಾ ಪ್ರಚಾರ ಕಾರ್ಯಕ್ರಮಗಳು ದೇಶದ ಪ್ರಮುಖ ನಗರಗಳಲ್ಲಿ ಜೋರಾಗಿ ನಡೆಯುತ್ತಿದೆ. ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಸೆ.2ರಂದು ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್​ ನಡೆಯಲಿದೆ. ಆರ್​​ಆರ್​ಆರ್​ ಸ್ಟಾರ್ ಜೂನಿಯರ್ ಎನ್​ಟಿಆರ್ ಮುಖ್ಯ ಅಥಿತಿಯಾಗಿ​ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.

ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ವೇಳೆ​ ಜೂ. ಎನ್​ಟಿಆರ್ ಜೊತೆ ನಟಿ ಆಲಿಯಾ ಭಟ್, ನಟ ರಣ್​​ಬೀರ್ ಕಪೂರ್, ನಟ ನಾಗಾರ್ಜುನ್, ನಿರ್ದೇಶಕ ರಾಜಮೌಳಿ ಇರಲಿದ್ದಾರೆ. ಜೂ. ಎನ್​ಟಿಆರ್ ಅವರು ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ಭಾಗವಾಗುತ್ತಿರುವುದಕ್ಕೆ ಈ ಮೊದಲೇ ನಿರ್ದೇಶಕ ಅಯಾನ್‌ ಮುಖರ್ಜಿ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ತಿಳಿಸಿದ್ದರು.

ಆರ್​​ಆರ್​ಆರ್​ ಸ್ಟಾರ್ ಜೂನಿಯರ್ ಎನ್​ಟಿಆರ್

ಇನ್ನು, ಬಾಲಿವುಡ್ ಸಿನಿಮಾಗಳು ಸತತವಾಗಿ ಫ್ಲಾಪ್ ಆಗುತ್ತಿವೆ. ಬಾಲಿವುಡ್ ಸಿನಿಮಾಗಳನ್ನು ಬಹಿಷ್ಕರಿಸುವ ಟ್ರೆಂಡ್ ಸಹ ಜೋರಾಗಿದೆ. ಈ ಹಿನ್ನೆಲೆ ಹೆಚ್ಚಿನ ಬಾಲಿವುಡ್ ತಾರೆಯರು ಸೌತ್ ಇಂಡಿಯಾ ಮಾರುಕಟ್ಟೆಗೆ ಹೆಜ್ಜೆ ಇಡುತ್ತಿದ್ದಾರೆ. ವಿಶೇಷವಾಗಿ ತೆಲುಗು ರಾಜ್ಯಗಳ ಮೇಲೆ ದೃಷ್ಟಿ ಕೇಂದ್ರೀಕರಿಸಲಾಗಿದೆ. ಇತ್ತೀಚೆಗಷ್ಟೇ ಟಾಲಿವುಡ್​ನಲ್ಲಿ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮಾಡಿದ ಪ್ರಚಾರದ ರೇಂಜ್ ಎಲ್ಲರಿಗೂ ಗೊತ್ತೇ ಇದೆ. ನಾಗಾರ್ಜುನ ಜೊತೆಗೆ ಮೆಗಾಸ್ಟಾರ್ ಚಿರಂಜೀವಿ ಕೂಡ ಕ್ಷೇತ್ರಕ್ಕೆ ಕಾಲಿಟ್ಟು, ಅಮೀರ್ ಖಾನ್ ಅವರಿಗಾಗಿ ಪ್ರಮೋಷನ್ ಮಾಡಿದ್ದರು. ಆದರೆ ಚಿತ್ರಕ್ಕೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಟಾಲಿವುಡ್ ಸಿನಿಮಾಗಳು ಬಾಲಿವುಡ್‌ನಲ್ಲಿ ಸತತವಾಗಿ ಹಿಟ್ ಆಗುತ್ತಿದ್ದು, ತೆಲುಗು ಹೀರೋಗಳು ಅಲ್ಲಿ ಅಭಿಮಾನ ಗಳಿಸುತ್ತಿದ್ದಾರೆ. ಈ ಹಿನ್ನೆಲೆ ಬಾಲಿವುಡ್ ತಾರೆಗಳು ಪ್ರಚಾರದಲ್ಲಿ ಸೌತ್​ ಸಿನಿಮಾ ಇಂಡಸ್ಟ್ರಿಯವರ ನೆರವು ಪಡೆದಿದ್ದಾರೆ. ಇದೀಗ ತೆಲುಗು ನಟ ಜೂ. ಎನ್​ಟಿಆರ್ ಅವರು ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ಭಾಗವಾಗಲಿದ್ದಾರೆ.

ಆರ್​​ಆರ್​ಆರ್​ ಸ್ಟಾರ್ ಜೂನಿಯರ್ ಎನ್​ಟಿಆರ್

ಇದನ್ನೂ ಓದಿ:ಬಾಲಿವುಡ್​ ಬ್ಯೂಟಿ​ ಆಲಿಯಾ ಭಟ್​ಗೂ ತಟ್ಟಿದ ಬಾಯ್ಕಾಟ್​ ಬಿಸಿ

ಆರ್‌ಆರ್‌ಆರ್‌ ಸಿನಿಮಾ ಮೂಲಕ ಭಾರತದಾದ್ಯಂತ ಹೆಸರು ಮಾಡಿರುವ ಜೂ. ಎನ್‌ಟಿಆರ್‌ ಬ್ರಹ್ಮಾಸ್ತ್ರ ಸಿನಿಮಾ ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮ ಸೆಪ್ಟೆಂಬರ್ 2 ರಂದು ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿಯಾಗಿ ಜರುಗಲಿದೆ. ನಟ ನಾಗಾರ್ಜುನ ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿರ್ದೇಶಕ ರಾಜಮೌಳಿ ಅವರು ತೆಲುಗಿನಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಇದೀಗ ಪ್ರೀ ರಿಲೀಸ್ ಈವೆಂಟ್‌ಗೆ ಜೂ ಎನ್‌ಟಿಆರ್ ಅತಿಥಿಯಾಗಿ ಬರುತ್ತಿರುವುದರಿಂದ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ:ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ರಣಬೀರ್ ಕಪೂರ್.. ಯಾವ ಕಾರಣಕ್ಕಾಗಿ ಗೊತ್ತಾ

ಬ್ರಹ್ಮಾಸ್ತ್ರ ​ಸಿನಿಮಾ ನೋಡದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟರ್​​ ಅಭಿಯಾನ ಆರಂಭಿಸಲಾಗಿದೆ. ಸಂದರ್ಶನವೊಂದರಲ್ಲಿ ಬಾಲಿವುಡ್​​ ಚಿತ್ರಗಳಿಗೆ ತಟ್ಟುತ್ತಿರುವ ಬಾಯ್ಕಾಟ್​​ ಬಿಸಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬ್ರಹ್ಮಾಸ್ತ್ರ ನಾಯಕಿ ಆಲಿಯಾ ಭಟ್, ಬಾಯ್ಕಾಟ್ ಎಂದು ಹೇಳುವವರು ಅಥವಾ ನನ್ನನ್ನು ಇಷ್ಟಪಡದವರು ನನ್ನ ಸಿನಿಮಾಗಳನ್ನು ನೋಡಬೇಡಿ ಎಂದಿದ್ದರು. ಈ ಹೇಳಿಕೆ ಸಹಜವಾಗಿ ನೆಟಿಜನ್‌ಗಳನ್ನು ರೊಚ್ಚಿಗೆಬ್ಬಿಸಿದ್ದು, ಸಿನಿಮಾ ವೀಕ್ಷಿಸದಂತೆ ಟ್ವಿಟರ್‌ನಲ್ಲಿ 'ಬಹಿಷ್ಕಾರ ಬ್ರಹ್ಮಾಸ್ತ್ರ ಹ್ಯಾಶ್‌ಟ್ಯಾಗ್' ಅನ್ನು ಟ್ರೆಂಡ್ ಮಾಡುತ್ತಿದ್ದಾರೆ. ಬಾಯ್ಕಾಟ್​​ ಬಿಸಿ ನಡುವೆಯೂ ಬ್ರಹ್ಮಾಸ್ತ್ರ ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಸೆಪ್ಟೆಂಬರ್​ 9ರ ನಂತರವೇ ಸಿನಿಮಾ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಅನ್ನೋದು ಗೊತ್ತಾಗಲಿದೆ.

ABOUT THE AUTHOR

...view details