ಕರ್ನಾಟಕ

karnataka

ETV Bharat / entertainment

ಬಾಂಡ್ ರವಿ ಸಿನಿಮಾದ ಮೊದಲ ಹಾಡು ಬಿಡುಗಡೆ - ETv Bahrat kannada news

ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಮೂಡಿರುವ ಬಂದಿರುವ ಮಜಾ ಮಜಾ ಮಾಡು ಬಾ ಸಾಂಗ್ ಬಿಡುಗಡೆಯಾಗಿದೆ.

josh sang from the movie bond ravi in jail
ಜೈಲಿನಲ್ಲಿ ಬಾಂಡ್ ರವಿ ಸಿನಿಮಾದ ಜ್ಯೋಷ್ ಸಾಂಗ್

By

Published : Nov 20, 2022, 11:52 AM IST

ಸ್ಯಾಂಡಲ್​​ವುಡ್ ಅಂಗಳದ ಪ್ರತಿಭಾನ್ವಿತ ನಟ ಪ್ರಮೋದ್ ನಟನೆಯ ಬಹುನಿರೀಕ್ಷಿತ ಚಿತ್ರ ಬಾಂಡ್ ರವಿ. ಸಿನಿಮಾ ಶೂಟಿಂಗ್‌ ಕೆಲಸ ಮುಗಿಸಿ ಬಿಡುಗಡೆಗೆ ಎದುರು ನೋಡುತ್ತಿರುವ ಚಿತ್ರತಂಡ ಮೊದಲ ಹಾಡು ಬಿಡುಗಡೆ ಮಾಡಿದೆ.

ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಅರಳಿರುವ 'ಮಜಾ ಮಜಾ ಮಾಡು ಬಾ' ಹಾಡಿಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ದನಿಯಾಗಿದ್ದಾರೆ. ಮನೋಮೂರ್ತಿ ಸಂಗೀತವಿದೆ. ಜೈಲಿನಲ್ಲಿ ನಡೆಯುವ ಹಾಡು ಇದಾಗಿದ್ದು ಅಪರಾಧಿಗಳಿಗೆ ಧೈರ್ಯ ತುಂಬುತ್ತಾ ಸಖತ್ ಜೋಶ್‌ನಲ್ಲಿ ಎಲ್ಲರೊಂದಿಗೆ ನಾಯಕ ಪ್ರಮೋದ್ ಹೆಜ್ಜೆ ಹಾಕಿದ್ದಾರೆ.

ಗೀತಾ ಬ್ಯಾಂಗಲ್ ಸ್ಟೋರ್ ಚಿತ್ರದ ಮೂಲಕ ಸ್ಯಾಂಡಲ್​ವುಡ್‌ಗೆ ನಾಯಕ ನಟನಾಗಿ ಎಂಟ್ರಿ ಕೊಟ್ಟ ಪ್ರಮೋದ್ ‘ಮತ್ತೆ ಉದ್ಭವ', ‘ಪ್ರೀಮಿಯರ್ ಪದ್ಮಿನಿ' ಹಾಗೂ ‘ರತ್ನನ್ ಪ್ರಪಂಚ’ದಲ್ಲಿ ಅಭಿನಯಿಸಿದ್ದಾರೆ.

ಬಾಂಡ್ ರವಿ ಆಕ್ಷನ್ ಲವ್ ಸ್ಟೋರಿ ಸಿನಿಮಾ. ಯುವ ಪ್ರತಿಭೆ ಪ್ರಜ್ವಲ್ ಎಸ್.ಪಿ ಈ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ನರಸಿಂಹಮೂರ್ತಿ ವಿ ಅವರು ಲೈಫ್ ಲೈನ್ ಫಿಲಂ ಬ್ಯಾನರ್‌ನಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಣ ಚಿತ್ರಕ್ಕಿದೆ.

ಕಾಜಲ್ ಕುಂದರ್ ನಾಯಕಿಯಾಗಿದ್ದಾರೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್, ಗೋವಿಂದೇ ಗೌಡ, ಹಂಸ, ಮಿಮಿಕ್ರಿ ಗೋಪಿ, ಪವನ್, ಕಾಮಿಡಿ ಕಿಲಾಡಿ ಸಂತೋಷ್, ರವಿಪ್ರಕಾಶ್ ತಾರಾ ಬಳಗದಲ್ಲಿದ್ದಾರೆ.

ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನೀಲ್ ಮತ್ತು ದೇವ್ ಎನ್ ರಾಜ್ ಸಂಭಾಷಣೆ, ಬಿ. ಧನಂಜಯ ನೃತ್ಯ ನಿರ್ದೇಶನವಿದೆ. ಡಿಸೆಂಬರ್‌ನಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಇದನ್ನೂ ಓದಿ:’ಸದ್ದು ವಿಚಾರಣೆ ನಡೆಯುತ್ತಿದೆ’ ಅಂತಿದ್ದಾರೆ ನಟಿ ಪಾವನ ಗೌಡ!

ABOUT THE AUTHOR

...view details