ಬಾಲಿವುಡ್ ನಟಿ ಜಾನ್ವಿ ಕಪೂರ್ ತಂಗಿ, ಸಹೋದರಿ ಖುಷಿ ಕಪೂರ್ ಇಂದು 22ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನದಂದು ಸಹೋದರಿ ಜಾನ್ವಿ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.
ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಮತ್ತು ದಿವಂಗತ ನಟಿ ಶ್ರೀದೇವಿ ಅವರ ಪುತ್ರಿಯರಾದ ಜಾನ್ವಿ ಮತ್ತು ಖುಷಿ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರು. ಸಾಮಾಜಿಕ ಮಾಧ್ಯಮದಲ್ಲಿ ಬಗೆ ಬಗೆಯ ಫೋಟೋ ಹಂಚಿಕೊಳ್ಳುವುದರಲ್ಲಿ, ಪ್ರೀತಿ ವ್ಯಕ್ತಪಡಿಸುವುದರಲ್ಲಿ ವಿಫಲರಾಗಿಲ್ಲ. ಅದರಂತೆ ಇಂದು ಕೂಡ ಜಾನ್ವಿ ಕಪೂರ್ ಅವರು ಖುಷಿ ಕಪೂರ್ ಫೋಟೋ ಶೇರ್ ಮಾಡಿ ಜನ್ಮದಿನಕ್ಕೆ ಶುಭ ಕೋರಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿರುವ ಜಾನ್ವಿ ಕಪೂರ್, ''ಇಂದು ನನ್ನ ಮೆಚ್ಚಿನ ವ್ಯಕ್ತಿಯ ಜನ್ಮದಿನ, ಪ್ರಪಂಚದಲ್ಲೇ ನಾನು ಕಂಡ ಉತ್ತಮ ವ್ಯಕ್ತಿ, ನನ್ನ ಸಂಪೂರ್ಣ ಹೃದಯ ಮತ್ತು ಲೈಫ್ಲೈನ್, ಐ ಲವ್ ಯೂ ಖುಷಿ'' ಎಂದು ಬರೆದಿದ್ದಾರೆ.