ಮುಂಬೈ:ಬಾಲಿವುಡ್ ಸ್ಟಾರ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬುಧವಾರ ಸಂಜೆ ಮುಂಬೈ ಪ್ರೆಸ್ ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದ ಅನೇಕ ಪೋಟೋಗಳು ಹಾಗೂ ವಿಡಿಯೊಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೊರಬಿದ್ದಿವೆ. ಹೆಣ್ಣು ಮಗುವಿಗೆ ಪೋಷಕರಾದ ನಂತರ ಮೊದಲ ಬಾರಿಗೆ ಆಲಿಯಾ ಮತ್ತು ರಣಬೀರ್ ಕಪೂರ್ ಜೋಡಿಯಾಗಿ ಇಂತಹ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ. ಹೊರಬಿದ್ದಿರುವ ಕಾರ್ಯಕ್ರಮದ ಫೋಟೋಗಳನ್ನು ನೋಡಿ ಆಲಿಯಾ ಭಟ್ ಮತ್ತೆ ತಾಯಿಯಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕಮೆಂಟ್ಗಳ ಸುರಿಮಳೆ ಹರಿಸಿದ್ದಾರೆ.
ಏನಿದೆ ಪೋಟೋಗಳಲ್ಲಿ?:ಮುಂಬೈ ಪ್ರೆಸ್ಕ್ಲಬ್ನಲ್ಲಿ ಆಯೋಜನೆಗೊಂಡಿದ್ದ ಕ್ಯಾಲೆಂಡರ್ ಬಿಡುಗಡೆ ಮತ್ತು ಮುಂಬೈ ಮೊಮೆಂಟ್ಸ್ 2023 ಎಕ್ಸಲೆನ್ಸ್ ಇನ್ ಫೋಟೋಗ್ರಫಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ಆಲಿಯಾ ತುಂಬಾ ಲೂಸ್ ಫಿಟ್ ಡ್ರೆಸ್ ಹಾಕಿಕೊಂಡು ಬಂದಿದ್ದರು. ಹೆಚ್ಚಾಗಿ ತಾರೆಯರು ತಮ್ಮ ಪ್ರೆಗ್ನೆನ್ಸಿ ಸಮಯದಲ್ಲಿ ಲೂಸ್ ಫಿಟ್ನಲ್ಲೇ ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ನಾನಾ ರೀತಿಯ ಕಮೆಂಟ್ಗಳನ್ನು ನೀಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಆಲಿಯಾ ಲೈಟ್ ಮೇಕಪ್‌ನಲ್ಲಿ, ಸಡಿಲವಾದ ಬಿಳಿ ಬಣ್ಣದ ಪ್ಯಾಂಟ್ ಮತ್ತು ಬ್ಲೇಜರ್‌ನಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಉಡುಪಿನ ಮೇಲೆ ಕೂದಲನ್ನು ತೆರೆದು ಬಿಟ್ಟಿದ್ದರು. ರಣಬೀರ್ ಬಿಳಿ ಟೀ ಶರ್ಟ್ ಮತ್ತು ನೀಲಿ ಜೀನ್ಸ್‌ನಲ್ಲಿ ಜಾಕೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋಗಳಲ್ಲಿ ಆಲಿಯಾ ಹೆಚ್ಚಿನ ಹೊತ್ತು ಬ್ಲೇಜರ್ನಿಂದ ತಮ್ಮ ಹೊಟ್ಟೆಯನ್ನು ಕವರ್ ಮಾಡಿಕೊಳ್ಳುತ್ತಲೇ ಇದ್ದರು.
ಇದಕ್ಕೆ ಇಂಬು ನೀಡುವಂತೆ ಆಲಿಯಾ ಭಟ್ ಬುಧವಾರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನೂ ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ ಯಾವುದೋ ಭಾಗ 2ರ ಸುಳಿವು ನೀಡಿದ್ದಾರೆ. ಬುಧವಾರ, ಅವರು ಎರಡು ಹೂವುಗಳ ಮೂಲಕ ಕ್ಯಾಮೆರಾವನ್ನು ನೋಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. "2.0 (ಸೂರ್ಯ ಎಮೋಜಿ) ಟ್ಯೂನ್ ಆಗಿರಿ" ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ನಿಗೂಢ ಪೋಸ್ಟ್ ಹಂಚಿಕೊಂಡಿದ್ದು, ಹೆಚ್ಚಿನ ವಿವರಗಳನ್ನು ನೀಡಿಲ್ಲ. ಅದು ಏನಾಗಿರಬಹುದು ಎಂಬುದರ ಕುರಿತು ತಾರೆಯ ಅಭಿಮಾನಿಗಳು ಊಹಾಪೋಹಗಳ ಕಮೆಂಟ್ ಮಾಡುತ್ತಿದ್ದಾರೆ. ಆಲಿಯಾ ಮತ್ತು ಪತಿ ರಣಬೀರ್ ಕಪೂರ್ ಮತ್ತೆ ಮಗು ನಿರೀಕ್ಷಿಸುತ್ತಿದ್ದಾರೆ ಎಂದು ಅನೇಕರು ನಂಬುವಂತೆ ಮಾಡಿದೆ.
ತರಹೇವಾರಿ ಕಮೆಂಟ್ಗಳು:ನಟಿ ಆಲಿಯಾ ತಮ್ಮ ಪ್ರೊಡಕ್ಷನ್ ಹೌಸ್ನಿಂದ ಮತ್ತೊಂದು ಚಿತ್ರ ಬರುತ್ತಿದೆ ಎಂಬ ಸುಳಿವು ನೀಡುತ್ತಿದ್ದಾರೆಯೇ? ಎನ್ನುವ ಕಮೆಂಟ್ಗಳೂ ಬಂದಿವೆ. ಆಲಿಯಾ ಪೋಸ್ಟ್‌ಗೆ ಮಾಡಿರುವ ಕಮೆಂಟ್ನಲ್ಲಿ ಸೂರ್ಯನ ಇಮೋಜಿ ಇರುವ ಕಾರಣ 'ಎಟರ್ನಲ್ ಸನ್ಶೈನ್ ಪ್ರೊಡಕ್ಷನ್' ಬಗ್ಗೆ ಹೇಳಿರುವ ಸಾಧ್ಯತೆಯೂ ಇದೆ ಎಂದು ಅಭಿಮಾನಿಗಳು ಚರ್ಚಿಸಿದ್ದಾರೆ. ಅಥವಾ ನಟಿಯ ವೈಯಕ್ತಿಕ ಜೀವನಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯಾ? ಅವಳು ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಇತ್ತೀಚೆಗೆ ರಣಬೀರ್ ಹಾಗೂ ಆಲಿಯಾ ಕಾಣಿಸಿಕೊಂಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಅವಳು ಗರ್ಭಿಣಿಯಂತೆ ಕಾಣಿಸುತ್ತಿದ್ದರು. ಬ್ರೈಟ್ ಆಗಿ ಕಾಣಿಸುತ್ತಿದ್ದಳು ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.