ಇಂದು ಆರಂಭವಾಗಿರುವ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival) ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಲಿರುವ ಭಾರತೀಯ ಸೆಲೆಬ್ರಿಟಿಗಳ ಪೈಕಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಮಾನುಷಿ ಚಿಲ್ಲರ್ ಕೂಡ ಸೇರಿದ್ದಾರೆ. ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವದಲ್ಲಿ ಭಾಗಿ ಆಗುತ್ತಿದ್ದಾರೆ. ಇಬ್ಬರೂ ಚೆಲುವೆಯರು ಫ್ರಾನ್ಸ್‌ಗೆ ತೆರಳಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ.
ಜನಪ್ರಿಯ 76ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್ ಇಂದು ಆರಂಭಗೊಂಡಿದ್ದು, ಮೇ 27ರವರೆಗೆ ನಡೆಯಲಿದೆ. ಸೆಲೆಬ್ರಿಟಿಗಳಾದ ವಿಜಯ್ ವರ್ಮಾ ಮತ್ತು ಊರ್ವಶಿ ರೌಟೇಲಾ ಈಗಾಗಲೇ ಫ್ರಾನ್ಸ್ನ ಫ್ರೆಂಚ್ ರಿವೇರಿಯಾ ಪ್ರದೇಶಕ್ಕೆ ತಲುಪಿದ್ದಾರೆ. ಸಾರಾ ಮತ್ತು ಮಾನುಷಿ ಅವರು ಸೋಮವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಿಂದ ಹೊರಟರು. ಆ ವೇಳೆ, ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಕೇನ್ಸ್ ರೆಡ್ ಕಾರ್ಪೆಟ್ ನಡಿಗೆಯು ಸಿನಿಮಾ ವೃತ್ತಿಜೀವನದ ಮೈಲಿಗಲ್ಲು ಎಂದು ಪರಿಗಣಿಸಲಾಗಿದ್ದು, ಸಾಗರೋತ್ತರ ಪ್ರದೇಶಗಳಿಗೆ ಹಾರುವ ವೇಳೆ ಈ ಇಬ್ಬರೂ ಚೆಲುವೆಯರು ಸ್ಟೈಲಿಶ್ ಏರ್ ಪೋರ್ಟ್ ಲುಕ್ ಅನ್ನು ಆಯ್ಕೆ ಮಾಡಿಕೊಂಡರು.
ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್, ಬ್ಲ್ಯಾಕ್ ಜಾಕೆಟ್ ಮತ್ತು ಡೆನಿಮ್ ಧರಿಸಿದ್ದರು. ಬ್ಲ್ಯಾಕ್ ಬ್ಯಾಗ್‌ನೊಂದಿಗೆ ತಮ್ಮ ವಿಮಾನ ನಿಲ್ದಾಣದ ನೋಟವನ್ನು ಪೂರ್ಣಗೊಳಿಸಿಕೊಂಡಿದ್ದರು. ಮತ್ತೊಂದೆಡೆ ಮಾಜಿ ವಿಶ್ವ ಸುಂದರಿ ವೈಟ್ ಟಾಪ್, ಬ್ಲ್ಯೂ ಜೀನ್ಸ್‌ನೊಂದಿಗೆ ಕಾಣಿಸಿಕೊಂಡರು. ಈ ನಟಿಮಣಿಯರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.