ಬಡವ ರಾಸ್ಕಲ್ ಹಾಗೂ ತೆಲುಗಿನ ಪುಷ್ಪ ಸಿನಿಮಾ ಸಕ್ಸಸ್ ಬಳಿಕ ಡಾಲಿ ಧನಂಜಯ್ ಈಗ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳು ಕೈಯಲ್ಲಿವೆ. ಇದೀಗ ತೋತಾಪುರಿ ಹಾಗೂ ಮಾನ್ಸೂನ್ ರಾಗ ಸಿನಿಮಾಗಳು ಈ ಇದೇ ತಿಂಗಳು ಬಿಡುಗಡೆ ಆಗುತ್ತಿದೆ. ಈ ಮಧ್ಯೆ ಡಾಲಿ ಧನಂಜಯ್ ಸಲಗ ಸಿನಿಮಾ ಬಳಿಕ ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿರುವ ಹೊಯ್ಸಳ ಸಿನಿಮಾದ ಬಿಡುಗಡೆ ದಿನಾಂಕವನ್ನ ಚಿತ್ರತಂಡ ಅನೌನ್ಸ್ ಮಾಡಿದೆ.
ಕಂಠೀರವ ಸ್ಟುಡಿಯೋದಲ್ಲಿ ಸೈಲೆಂಟ್ ಆಗಿ ಸೆಟ್ಟೇರಿದ ಹೊಯ್ಸಳ ಸಿನಿಮಾ ಭರದಿಂದ ಚಿತ್ರೀಕರಣ ಮಾಡಲಾಗುತ್ತಿದೆ. ಧನಂಜಯ್ ಅಭಿನಯದ 25ನೇ ಸಿನಿಮಾವಾಗಿರೋ ಹೊಯ್ಸಳ ಸಿನಿಮಾ, ಬೆಳಗಾವಿಯಲ್ಲಿ ನಡೆಯುವ ಒಬ್ಬ ದಿಟ್ಟ ಪೊಲೀಸ್ ಅಧಿಕಾರಿಯ ಸುತ್ತ ಹೆಣೆದಿರುವ ಕಥೆ ಎನ್ನಲಾಗಿದೆ.
ಈಗಾಗ್ಲೇ ಬೆಳಗಾವಿ, ಬೆಂಗಳೂರು, ಮೈಸೂರಿನಲ್ಲಿ ಬಹುತೇಕ ಚಿತ್ರೀಕರಣ ಮಾಡಿರುವ ಹೊಯ್ಸಳ ಸಿನಿಮಾ 30.03.2023ಕ್ಕೆ ಬಿಡುಗಡೆ ದಿನಾಂಕವನ್ನ ಚಿತ್ರತಂಡ ಅನೌನ್ಸ್ ಮಾಡಿದೆ. ಖಾಕಿ ಗೆಟಪ್ನಲ್ಲಿ ಧನಂಜಯ್ ಮುಖಕ್ಕೆ ಗ್ಯಾಸ್ ಮಾಸ್ಕ್ ಹಾಕಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆರಕ್ಷಕ ರಾಕ್ಷಸನಾದಾಗ ಎಂಬ ಟ್ಯಾಗ್ ಲೈನ್ ಹೊಂದಿರುವ ಪೋಸ್ಟರ್ ಇದಾಗಿದೆ.