ಕರ್ನಾಟಕ

karnataka

ETV Bharat / entertainment

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟ ಸ್ಯಾಂಡಲ್​ವುಡ್ ಸ್ಟಾರ್ಸ್ - Hostel Hudugaru Bekagiddare celebrity show

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸೆಲೆಬ್ರಿಟಿ ಶೋಗೆ ಸ್ಯಾಂಡಲ್​ವುಡ್ ಸ್ಟಾರ್ಸ್ ಸಾಕ್ಷಿಯಾಗಿದ್ದರು.

Hostel Hudugaru Bekagiddare celebrity show
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

By

Published : Jul 26, 2023, 6:25 PM IST

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸೆಲೆಬ್ರಿಟಿ ಶೋ

ಕನ್ನಡ ಚಿತ್ರರಂಗದಲ್ಲಿ ಅದ್ಧೂರಿ ಮೇಕಿಂಗ್ ಜೊತೆಗೆ ಪ್ರೆಶ್ ಕಂಟೆಂಟ್ ಇರುವ ಸಿನಿಮಾಗಳು ನಿರ್ಮಾಣವಾಗುತ್ತಿದೆ. 2022ರಲ್ಲಿ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತಹ ಸಿನಿಮಾಗಳು ನಿರ್ಮಾಣವಾಗಿವೆ. ಕಾಂತಾರ, ಕೆಜಿಎಫ್​​ 2ಗಳಂತಹ ಸಿನಿಮಾಗಳು ದೇಶದೆಲ್ಲೆಡೆ ಅಬ್ಬರಿಸಿದೆ. ಕನ್ನಡ ಚಿತ್ರರಂಗದ ಪ್ರತಿಷ್ಠೆ ಮತ್ತಷ್ಟು ಹೆಚ್ಚಿದೆ. ಈ ಮಧ್ಯೆ ಹೊಸ ಪ್ರತಿಭೆಗಳ ಆಗಮನವೂ ಆಗುತ್ತಿದೆ. ಕಥೆ ಮಾತ್ರವಲ್ಲದೇ ಮೇಕಿಂಗ್​ ವಿಷಯದಲ್ಲೂ ಕಡಿಮೆ ಇಲ್ಲ ಎಂಬ ಮಟ್ಟಿಗೆ ಕನ್ನಡ ಸಿನಿಮಾಗಳು ನಿರ್ಮಾಣ ಆಗುತ್ತಿವೆ.

ಈ ಸಾಲಿನಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಾಗಿದ್ದಾರೆ' ಸಿನಿಮಾ ಇದೆ. ಕಳೆದ ವಾರವಷ್ಟೇ ರಾಜ್ಯಾದ್ಯಂತ ಬಿಡುಗಡೆ ಆಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸುತ್ತಿದೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈ ಸಿನಿಮಾದ ವಿಭಿನ್ನ ಪ್ರಚಾರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ. ಸಿನಿ ಪ್ರೇಮಿಗಳ ಪಾಸಿಟಿವ್​ ಟಾಕ್​ನಿಂದ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರುವ ಮನಸ್ಸು ಮಾಡುತ್ತಿದ್ದಾರೆ.

ಸ್ಪೆಷಲ್ ಸೆಲಿಬ್ರಿಟಿ ಶೋ...ಯೂತ್ ಸಬ್ಜೆಕ್ಟ್ ಒಳಗೊಂಡ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ಅವರೇ ಕಥೆ ಬರೆದು, ನಿರ್ದೇಶನನ್ನೂ ಮಾಡಿದ್ದಾರೆ. ಹಲವು ರಂಗಭೂಮಿ ಪ್ರತಿಭೆಗಳು ಈ ಸಿನಿಮಾದಲ್ಲಿ ಬಹಳ ಚೆನ್ನಾಗಿ ಅಭಿನಯಿಸುವ ಮೂಲಕ ಸಿನಿ ಪ್ರಿಯರ ಮನಸ್ಸು ಗೆದ್ದಿದ್ದಾರೆ. ಈ ಹಿನ್ನೆಲೆ ಕನ್ನಡ ಚಿತ್ರರಂಗದ ತಾರೆಯರಿಗಾಗಿಯೇ ಸ್ಪೆಷಲ್ ಸೆಲಿಬ್ರಿಟಿ ಶೋ ಅನ್ನು ಹಮ್ಮಿಕೊಳ್ಳಲಾಗಿತ್ತು.

ಇದನ್ನೂ ಓದಿ:ರಾಕಿ ರಾಣಿ ಲವ್​ ಸ್ಟೋರಿ: ಆಲಿಯಾಗೆ ಸಪೋರ್ಟ್ ಮಾಡಲು ಬಂದ ರಣ್​ಬೀರ್​-ರಣ್​ವೀರ್ ಜೊತೆ ದೀಪಿಕಾ ಇರಬೇಕಿತ್ತೆಂದ ಫ್ಯಾನ್ಸ್

ಶಿವ ರಾಜ್​ಕುಮಾರ್, ವಿಜಯ ರಾಘವೇಂದ್ರ, ರಮೇಶ್ ಅರವಿಂದ್, ನೆನಪಿರಲಿ ಪ್ರೇಮ್, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ವಿಕ್ರಮ್ ರವಿಚಂದ್ರನ್, ಅನೂಪ್ ಭಂಡಾರಿ, ಸಂಚಿತ್ ಸಂಜೀವ್, ಪ್ರಮೋದ್ ಶೆಟ್ಟಿ, ಗುರುಕಿರಣ್, ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಸಂಗೀತ ಶೃಂಗೇರಿ, ಸಂಯುಕ್ತಾ ಹೊರನಾಡ್, ಚೈತ್ರಾ ಆಚಾರ್ ಸೇರಿದಂತೆ ಬಹುತೇಕ ಕನ್ನಡ ಚಿತ್ರರಂಗದ ತಾರೆಯರು, ನಿರ್ದೇಶಕರು, ನಿರ್ಮಾಪಕರು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನೋಡಿ ಮೆಚ್ಚಿಕೊಂಡರು. ಶಿವ ರಾಜ್​ಕುಮಾರ್, ವಿಜಯ ರಾಘವೇಂದ್ರ, ರಕ್ಷಿತ್ ಶೆಟ್ಟಿ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಈ ಚಿತ್ರದ ಸನ್ನಿವೇಶಗಳನ್ನು ನೋಡಿ ಸಖತ್ ಎಂಜಾಯ್ ಮಾಡುವ ಮೂಲಕ ಹೊಸ ಪ್ರತಿಭೆಗಳ ಸಿನಿಮಾಗೆ ಸಪೋರ್ಟ್ ಮಾಡಿದರು.

ಇದನ್ನೂ ಓದಿ:15 ಕೋಟಿ ರೂ. ಬಜೆಟ್​ನಲ್ಲಿ ಶಾರುಖ್​ ಸಾಂಗ್ ಶೂಟ್ - 1,000 ಲೇಡಿ ಡ್ಯಾನ್ಸರ್ಸ್ ಮಧ್ಯೆ ಕಿಂಗ್​ ಖಾನ್ ಡ್ಯಾನ್ಸ್

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಅರವಿಂದ್ ಕಶ್ಯಪ್ ಛಾಯಾಗ್ರಹಣ, ಸುರೇಶ್ ಅವರ ಸಂಕಲನ ಇದೆ. ವರುಣ್ ಸ್ಟುಡಿಯೋಸ್ ಹಾಗೂ ಗುಲ್ ಮೋಹರ್ ಫಿಲಂಸ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ 2023ರಲ್ಲಿ ಪ್ರೇಕ್ಷಕರು ಮೆಚ್ಚಿದ ಸಿನಿಮಾಗಳಲ್ಲಿ ಒಂದಾಗಿದೆ.

ABOUT THE AUTHOR

...view details