''ಬಿಗ್ ಬಾಸ್'' ಅತ್ಯಂತ ಜನಪ್ರಿಯ ಕಾರ್ಯಕ್ರಮ. ಬಹುಭಾಷೆಗಳಲ್ಲಿ ಪ್ರಸಾರವಾಗುವ ಈ ಶೋ ಸಾಕಷ್ಟು ಸಂಖ್ಯೆಯ ಪ್ರೇಕ್ಷಕರನ್ನು ಸಂಪಾದಿಸಿದೆ. ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರೆ, ಬಾಲಿವುಡ್ನಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿ ಕೊಡುತ್ತಾರೆ.
ಹಿಂದಿ ಬಿಗ್ ಬಾಸ್ ಒಟಿಟಿ ಶೀಘ್ರದಲ್ಲೇ ಆರಂಭವಾಗಲಿದೆ. ಸಲ್ಮಾನ್ ಖಾನ್ ಈ ಶೋನ ಹೋಸ್ಟ್ ಆಗಿ ಕೆಲಸ ಮಾಡಲಿದ್ದಾರೆ. ದಬಾಂಗ್ ನಟ ಮೊದಲ ಬಾರಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸಿದೆ. ಮಾಹಿತಿ ಪ್ರಕಾರ, ಬಿಗ್ ಬಾಸ್ OTT 2 ಆರು ವಾರಗಳವರೆಗೆನಡೆಯಲಿದೆ. ಮನೆಗೆ ಎಂಟ್ರಿ ಕೊಡಲಿರುವ ಸೆಲೆಬ್ರಿಟಿಗಳ ಬಗ್ಗೆ ಸಾಕಷ್ಟು ಕುತೂಹಲ ವ್ಯಕ್ತವಾಗುತ್ತಿದೆ.
ಕಚಾ ಬಾದಂ ಖ್ಯಾತಿಯ ಅಂಜಲಿ ಅರೋರಾ ಅವರು ಬಿಗ್ ಬಾಸ್ ಒಟಿಟಿ 2ರಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಇಂಟರ್ನೆಟ್ ಸೂಪರ್ ಸ್ಟಾರ್ ಮತ್ತು ಜನಪ್ರಿಯ ಹಾಡು ಕಚಾ ಬಾದಮ್ ತಾರೆ ಅಂಜಲಿ ಅರೋರಾ ಅವರನ್ನು ಬಿಗ್ ಬಾಸ್ OTT 2ಗೆ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರಸಾರವಾಗಲಿರುವ ''ಬಿಗ್ ಬಾಸ್'' ಒಟಿಟಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಮಾಹಿತಿ ಪ್ರಕಾರ, ಸಲ್ಮಾನ್ ಖಾನ್ ಬಿಗ್ ಬಾಸ್ ಒಟಿಟಿಗೆ ವಿಡಿಯೋವೊಂದನ್ನು ಚಿತ್ರೀಕರಿಸಿದ್ದಾರೆ. ಒಟಿಟಿ ಎರಡನೇ ಸೀಸನ್ ಜೂನ್‌ನಲ್ಲಿ ಪ್ರೀಮಿಯರ್ ಆಗಲಿದೆ. ಕಾರ್ಯಕ್ರಮಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಸ್ಪರ್ಧಿಗಳ ಆಯ್ಕೆ ಕಾರ್ಯ ಚುರುಕಾಗಿದೆ.
ವರದಿಗಳ ಪ್ರಕಾರ, ಬಿಗ್ ಬಾಸ್ ಸ್ಪರ್ಧಿಗಳ ಪೈಕಿ ಮೂವರು ಇತ್ತೀಚೆಗೆ ಟೀಸರ್ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಅವರು ಬಿಗ್ ಬಾಸ್ನಲ್ಲಿ ಕಾಣಿಸಿಕೊಳ್ಳೋದು ಖಚಿತ. ಇದಕ್ಕೂ ಮೊದಲು, ಅಂಜಲಿ ಅರೋರಾ ಅವರು ಕಂಗನಾ ರಣಾವತ್ ಅವರ ಲಾಕ್ ಅಪ್‌ನಲ್ಲಿ ಕಾಣಿಸಿಕೊಂಡಿದ್ದರು. ಇವರ ಜೊತೆಗೆ, ಪೂಜಾ ಗೋರ್, ಫೈಸಲ್ ಶೇಖ್, ಸಂಭಾವನಾ ಸೇಠ್, ಪೂನಂ ಪಾಂಡೆ, ಉಮರ್ ರಿಯಾಜ್ ಮತ್ತು ಜಿಯಾ ಶಂಕರ್ ಬಿಗ್ ಬಾಸ್ OTTಯ ಎರಡನೇ ಸೀಸನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಂಬಲಾಗಿದೆ.
ಇದನ್ನೂ ಓದಿ:ವಿಕ್ಕಿ ಕೌಶಲ್ ಅಭಿನಯದ ಸಿನಿಮಾದಲ್ಲಿ ಪತ್ನಿ ಕತ್ರಿನಾ ಕೈಫ್ ಯಾಕಿಲ್ಲಾ ಗೊತ್ತಾ?
ಬಾಲಿವುಡ್ ಚಲನಚಿತ್ರ ನಿರ್ಮಾಪಕ, ನಿರೂಪಕ ಕರಣ್ ಜೋಹರ್ ಬಿಗ್ ಬಾಸ್ ಒಟಿಟಿಯ ಮೊದಲ ಸೀಸನ್ ಅನ್ನು ನಡೆಸಿಕೊಟ್ಟಿದ್ದರು. ಇದು ಒಮದು ಮಟ್ಟಿನ ಯಶಸ್ಸನ್ನು ಕಂಡಿತ್ತು. ಆದರೆ, ಮೂಲ (ಟಿವಿ ಕಾರ್ಯಕ್ರಮ) ಬಿಗ್ ಬಾಸ್ ನಿರೂಪಕ ಸಲ್ಮಾನ್ ಖಾನ್ ಒಟಿಟಿಯ ಎರಡನೇ ಸೀಸನ್‌ಗೆ ಹೋಸ್ಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ OTT 2 ಉಚಿತವಾಗಿ ಲಭ್ಯವಿರುತ್ತದೆ.
ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕನ್ನಡ ಚಿತ್ರರಂಗದ ಕನಸುಗಾರ'...ರವಿಚಂದ್ರನ್ ಅಪರೂಪದ ಚಿತ್ರಗಳಿವು!
'ಬಿಗ್ ಬಾಸ್ ಒಟಿಟಿ' ಜನಪ್ರಿಯ ಭಾರತೀಯ ರಿಯಾಲಿಟಿ ಟಿವಿ ಶೋ 'ಬಿಗ್ ಬಾಸ್'ನ ಡಿಜಿಟಲ್ ಆವೃತ್ತಿ. ಇದು ವಿಶೇಷವಾಗಿ Vootನಲ್ಲಿ ಪ್ರಸಾರವಾಗುತ್ತದೆ. ಕರಣ್ ಜೋಹರ್ ಹೋಸ್ಟ್ ಮಾಡಿದ್ದ ಮೊದಲ ಸೀಸನ್ ಅನ್ನು 2021ರ ಆಗಸ್ಟ್ನಲ್ಲಿ ಪ್ರಥಮ ಬಾರಿಗೆ ಪ್ರದರ್ಶಿಸಲಾಯಿತು. ಇದೀಗ ಸಲ್ಮಾನ್ ಖಾನ್ ಈ ಶೋ ಅನ್ನು ನಿರೂಪಿಸಲು ಸಜ್ಜಾಗಿದ್ದಾರೆ.