ಅತ್ಯುತ್ತಮ ಅಭಿನಯದ ಮೂಲಕ ಬಹು ಬೇಡಿಕೆ ನಟನಾಗಿ ಸ್ಯಾಂಡಲ್ವುಡ್ನಲ್ಲಿ ಮಿಂಚುತ್ತಿರುವ ನಟ ಡಾಲಿ ಧನಂಜಯ್. ಮಾನ್ಸೂನ್ ರಾಗ ಸಿನಿಮಾ ಸಕ್ಸಸ್ ಖುಷಿಯಲ್ಲಿರೋ ಧನಂಜಯ್ ತಮ್ಮ ಡಾಲಿ ಪಿಕ್ಚರ್ ಅಡಿ ನಿರ್ಮಾಣವಾಗಿರುವ ಹೆಡ್ ಬುಷ್ ಸಿನಿಮಾ ಜಪ ಮಾಡುತ್ತಿದ್ದಾರೆ.
ನಾರ್ವೆ ದೇಶದದಲ್ಲಿ ಡಾಲಿ ಜಾಲಿ ರೌಂಡ್ಸ್ ಬೆಂಗಳೂರಿನ ಒಂದು ಕಾಲದ ಭೂಗತ ದೊರೆ ಎಂ.ಪಿ ಜಯರಾಜ್ ಪಾತ್ರದ ಮೂಲಕ ಅಭಿಮಾನಿಗಳನ್ನು ಮತ್ತೊಮ್ಮೆ ಸೆಳೆಯಲು ಸಜ್ಜಾಗಿದ್ದಾರೆ. ಇದೀಗ ಎಲ್ಲಿಗೆ ಹೋದರೂ ಧನಂಜಯ್ ರೆಟ್ರೋ ಸ್ಟೈಲ್ನ ಬೆಲ್ ಬಾಟಮ್ ಕಾಸ್ಟ್ಯೂಮ್ ತೊಟ್ಟು ಗಮನ ಸೆಳೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ವೈಟ್ ಆ್ಯಂಡ್ ವೈಟ್ ಕಾಸ್ಟ್ಯೂಮ್ ಧರಿಸುವ ಮೂಲಕ ಡಾನ್ ಜಯರಾಜ್ ಗೆಟಪ್ನಲ್ಲಿ ಧನಂಜಯ್ ಗಮನ ಸೆಳೆದಿದ್ದರು.
ನಾರ್ವೆ ದೇಶದದಲ್ಲಿ ಡಾಲಿ ಜಾಲಿ ರೌಂಡ್ಸ್ ದುಬೈನಲ್ಲಿ ನಡೆದ ರಾಜ್ ಕಪ್ ಕ್ರಿಕೆಟ್ ಬಳಿಕ ಡಾಲಿ ನಾರ್ವೆ ದೇಶಕ್ಕೆ ಸ್ನೇಹಿತರ ಜೊತೆ ಭೇಟಿ ಕೊಟ್ಟಿದ್ದಾರೆ. ಅಲ್ಲಿರುವ ಇಂಗ್ಲಿಷ್ ಅಭಿಮಾನಿಗಳು ಕೂಡ ಡಾಲಿಗೆ ಹೂಗುಚ್ಛ ನೀಡುವ ಮೂಲಕ ಹೆಡ್ ಬುಷ್ ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಬಳಿಕ ನಾರ್ವೆ ದೇಶದಲ್ಲಿ ರೌಂಡ್ಸ್ ಹಾಕಿದ್ದಾರೆ. ಸತಃ ಕಾರ್ ಚಲಾಯಿಸಿ ಎಂಜಾಯ್ ಮಾಡಿದ್ದಾರೆ. ಜಗತ್ತಿನ ದುಬಾರಿ ಕಾರಿನ ಮುಂದೆ ನಿಂತು ಕೋಟಿ ಬೆಲೆಯ ಕಾರು ನಮ್ಮ ದೇಶದಲ್ಲಿ ಉಪಯೋಗಕ್ಕೆ ಬರೋಲ್ಲ, ನಮ್ಮ ಅಂಬಾಸಿಡರೇ ಬೆಸ್ಟು ಅಂತಾ ಪಂಚಿಂಗ್ ಡೈಲಾಗ್ ಹೊಡೆದಿದ್ದಾರೆ. ಇನ್ನು, ಅಲ್ಲಿರುವ ಕನ್ನಡದ ಜನರಿಗೂ ಸಿನಿಮಾ ವೀಕ್ಷಿಸಿ ಹರಸಿ ಎಂದು ಕೇಳಿಕೊಂಡರು.
ಇದನ್ನೂ ಓದಿ:ಹೆಡ್ ಬುಷ್ ಸಿನಿಮಾ ಪ್ರಚಾರ: ಡಾನ್ ಜಯರಾಜ್ ಗೆಟಪ್ನಲ್ಲಿ ದುಬೈಗೆ ಹಾರಿದ ಡಾಲಿ ಧನಂಜಯ್
1970ರ ಸಮಯದಲ್ಲಿ ಬೆಂಗಳೂರು ಭೂಗತ ಜಗತ್ತನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನವನ್ನು ಚಿತ್ರದ ನಿರ್ದೇಶಕ ಶೂನ್ಯ ಮಾಡಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಈ ಚಿತ್ರದಲ್ಲಿ ಧನಂಜಯ್ ಅಲ್ಲದೇ ಕ್ರೇಜಿಸ್ಟಾರ್ ರವಿಚಂದ್ರನ್, ಪಾಯಲ್ ರಜ್ಪೂತ್, ಲೂಸ್ ಮಾದ ಯೋಗಿ, ದೇವರಾಜ್, ವಸಿಷ್ಠ ಸಿಂಹ, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಬಾದಲ್ ನಂಜುಂಡಸ್ವಾಮಿ ಕಲಾ ನಿರ್ದೇಶನವಿದೆ. ಅಕ್ಟೋಬರ್ 21ರಂದು ಸಿನಿಮಾ ಬಿಡುಗಡೆಯಾಗಲಿದೆ.