ಕನ್ನಡ ಚಿತ್ರರಂಗದಲ್ಲಿ ವಿಕಟಕವಿ ಎಂದೇ ಕರೆಯಿಸಿಕೊಂಡಿರುವ ನಿರ್ದೇಶಕ ಹಾಗು ಎಣ್ಣೆ ಹಾಡುಗಳ ಗುರು, ಯೋಗರಾಜ್ ಭಟ್, ಬರೆದಿರುವ ಎಣ್ಣೆ ಹಾಡುಗಳು ಕುಡುಕರ ಆ್ಯಂಥಮ್ ಸಾಂಗ್ಗಳಾಗಿವೆ. ಈ ಸಾಲಿನಲ್ಲಿ ಈಗ ಗಣೇಶ್, ದಿಗಂತ್, ಪವನ್ ಕುಮಾರ್ ಅಭಿನಯದ ಹಾಗು ಯೋಗರಾಜ್ ಭಟ್ ನಿರ್ದೇಶನದ, ಗಾಳಿಪಟ 2 ಸಿನಿಮಾದ ದೇವ್ಲೆ ದೇವ್ಲೆ ಹಾಡು ಹೊಸ ಸೇರ್ಪಡೆ ಆಗುತ್ತಿದೆ. ಯೋಗರಾಜ್ ಭಟ್ ಈ ಗೀತರಚನೆಯನ್ನು ಬಹಳ ಡಿಫ್ರೆಂಟ್ ಆಗಿ ಬರೆದಿದ್ದಾರೆ.
ದೇವ್ರೇ ಬದಲು, ದೇವ್ಲೆ ದೇವ್ಲೆ ಅಂತಾ ತೊದಲು ನುಡಿಯಿಂದ ಹಾಡುವ ಗೀತೆ ಇದಾಗಿದೆ. ಗಾಳಿಪಟ 2 ಚಿತ್ರದ ಮೂರನೇ ಹಾಡು ಇದಾಗಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವಿಜಯ ಪ್ರಕಾಶ್ ಧ್ವನಿಯಾಗಿದ್ದಾರೆ. ಆನಂದ್ ಆಡಿಯೋ ಯೂ ಟ್ಯೂಬ್ ಚಾನೆಲ್ನಲ್ಲಿ ಹಾಡು ಬಿಡುಗಡೆ ಆಗಿದೆ. ಲೈಟ್ ಆಗಿ ಎಣ್ಣೆ ಹಾಕಿಕೊಂಡು ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ತಮ್ಮ ಹುಡುಗಿಯರ ಜೊತೆ ಫಾರಿನ್ ಲೋಕೇಶನ್ನಲ್ಲಿ ಸಖತ್ ಸ್ಟೆಪ್ಸ್ ಹಾಕಿದ್ದಾರೆ.
ಇನ್ನು ನಿರ್ದೇಶಕ ಯೋಗರಾಜ್ ಭಟ್, ಎಲ್ಲಾ ಕನ್ನಡ ಪದಗಳನ್ನು ಬಳಸಿ, ಬೇಜಾರು ಆಗಿ, ಗೋಲ್ಡನ್ ಸ್ಟಾರ್ ಬದಲ ಸ್ಟಾಲ್ ಮಾಡಿದ್ದಾರೆ. ದಿಗಂತ್, ಪವನ್ ಕುಮಾರ್ ಬದಲು, ಕಮಾಲ್, ಗಾಯಕ ವಿಜಯ್ ಪ್ರಕಾಶ್ ಬದಲು ಪ್ಲಕಾಶ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಬದಲು, ಅಲ್ಜುನ್ ಜನ್ಯ ಹೀಗೆ ಈ ಹಾಡಿನಲ್ಲಿ ಕೆಲಸ ಮಾಡಿರುವ ಹೆಸರುಗಳಿಗೆ ಯೋಗರಾಜ್ ಭಟ್ ಹೊಸ ಪದಗಳನ್ನು ಜೋಡಿಸಿರೋದು ಇಂಟ್ರಸ್ಟ್ರಿಂಗ್ ಆಗಿದೆ.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್ ಜೋಡಿಗಳಾಗಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್ ಅಭಿನಯಿಸಿದ್ದಾರೆ. ಇದರ ಜೊತೆಗೆ ಅನಂತ್ ನಾಗ್, ರಂಗಾಯಣ ರಘು ಹೀಗೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ. ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಮೇಶ್ ರೆಡ್ಡಿ ಗಾಳಿಪಟ 2 ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಬಿಡುಗಡೆ ಆಗಲಿರುವ ಎಣ್ಣೆ ಸಾಂಗ್ ಮೇಲೆ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಆಗಸ್ಟ್ 12ಕ್ಕೆ ಬಿಡುಗಡೆ ಆಗೋದಿಕ್ಕೆ ಸಜ್ಜಾಗಿರೋ ಗಾಳಿಪಟ 2 ಚಿತ್ರ, ಗಣೇಶ್ ಹಾಗು ಯೋಗರಾಜ್ ಭಟ್ ಜೋಡಿ ಮತ್ತೆ ಸಿಲ್ವರ್ ಸ್ಕ್ರೀನ್ ಮೇಲೆ ಮೋಡಿ ಮಾಡುತ್ತಾ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.
ಇದನ್ನೂ ಓದಿ :'ಇಸ್ಮಾರ್ಟ್ ಜೋಡಿ' ಶೋ ಬಗ್ಗೆ ಗೋಲ್ಡನ್ ಸ್ಟಾರ್ ಹೇಳಿದ್ದೇನು?