ಮುಂಬೈ: ದೀರ್ಘ ವಿರಾಮದ ಬಳಿಕ ತೆರೆ ಮೇಲೆ ಕಾಣಿಸಿಕೊಂಡ ಸನ್ನಿ ಡಿಯೋಲ್ ಅವರ 'ಗದಾರ್ 2' ಚಿತ್ರ ಕಳೆದ ಒಂದು ತಿಂಗಳಿನಿಂದ ಉತ್ತಮ ಪ್ರದರ್ಶನ ಕಾಣುವ ಮೂಲಕ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿತು. ಇದೀಗ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಜವಾನ್ ಬಿಡುಗಡೆಯಾದ ಬಳಿಕ ಕೊಂಚ ಮಂಕಾಗುವ ನಿರೀಕ್ಷೆ ಇದೆ. ಕಳೆದ ತಿಂಗಳು ಅಂದರೆ ಆಗಸ್ಟ್ 11 ರಂದು ಅಕ್ಷಯ್ ಕುಮಾರ್ ಅಭಿನಯದ ಒಎಂಜಿ 2 ಜೊತೆಗೆ ಬಿಡುಗಡೆಯಾದ 'ಗದಾರ್ 2' ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಫಲವಾಗಿವೆ. ಬಿಡುಗಡೆಯಾದ 24 ದಿನದಲ್ಲಿ 500 ಕೋಟಿ ಕಲೆಕ್ಷನ್ ಅನ್ನು ಚಿತ್ರ ಮಾಡುವ ಮೂಲಕ ಹೊಸ ಮೈಲಿಗಲ್ಲನ್ನು ಸೃಷ್ಟಿಸಿತು. ಇದೀಗ ಜವಾನ್ ಚಿತ್ರ ಬಿಡುಗಡೆಯಿಂದ ಚಿತ್ರ ವೀಕ್ಷಣೆಗೆ ಪ್ರೇಕ್ಷಕರ ಸಂಖ್ಯೆ ಇಳಿಕೆ ಕಂಡಿದ್ದು, ದೇಶಿಯ ಬಾಕ್ಸ್ ಆಫೀಸ್ನಲ್ಲಿ ಶೇ 65.7ರಷ್ಟು ಇಳಿಕೆ ವರದಿ ಆಗಿದೆ.
ಸಿನಿ ಉದ್ಯಮದ ಟ್ರಾಕರ್ ಸಕ್ನಿಲ್ಕ್ ಈ ಮುಂಚೆ ಅಂದಾಜಿಸಿದ ಪ್ರಕಾರ, ಗದಾರ್ 2 ಭಾರತದಲ್ಲಿ 28ನೇ ದಿನದಂದು 1 ಕೋಟಿ ಗಳಿಕೆ ಮಾಡಿದೆ. ಇದಕ್ಕೆ ಹಿಂದಿನ ದಿನ ಚಿತ್ರ 1.29 ಕೋಟಿ ಸಂಗ್ರಹಿಸಿತು. ಒಟ್ಟಾರೆ 28 ದಿನದಲ್ಲಿ ಥಿಯೇಟರ್ನಲ್ಲಿ 510 .09 ಕೋಟಿ ಸಂಗ್ರಹ ಮಾಡಿದೆ. ಇದೀಗ 28ನೇ ದಿನ ಥಿಯೇಟರ್ನ ಗಳಿಕೆಯಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಚಿತ್ರ ಒಟ್ಟಾರೆ ಶೇ 67.95ರಷ್ಟು ಇಳಿಕೆ ಕಾಣುವ ಮೂಲಕ 500 ಕೋಟಿ ರೂಗಳ ಗಡಿ ದಾಟಿದೆ.
ಭಾರತದಲ್ಲಿ ಚಿತ್ರ ಮೊದಲ ದಿನವೇ 40.1 ಕೋಟಿಯೊಂದಿಗೆ ತೆರೆ ಕಂಡಿತು. ಸ್ವಾತಂತ್ರ್ಯ ದಿನಾಚರಣೆಯಂದು ಚಿತ್ರ 55.4 ಕೋಟಿಯನ್ನು ಗಳಿಕೆ ಮಾಡುವ ಮೂಲಕ ಉತ್ತಮ ಕಲೆಕ್ಷನ್ಗೆ ಮುಂದಾಯಿತು. 'ಪಠಾಣ್' ಕಲೆಕ್ಷನ್ ಅನ್ನು ಮೀರಿಸಲಿದೆ ಎಂಬ ಲೆಕ್ಕಾಚಾರವನ್ನು ಸಿನಿ ಪಂಡಿತರು ನಡೆಸಿದ್ದರು. ಆದರೆ, ಚಿತ್ರ ದೇಶೀಯ ಮಾರುಕಟ್ಟೆಯಲ್ಲಿ 33 ಕೋಟಿ ಕಡಿಮೆ ಗಳಿಕೆ ಮಾಡುವ ಮೂಲಕ ಈ ಲೆಕ್ಕಾಚಾರ ತಪ್ಪಿತು. 'ಪಠಾಣ್' ಸಿನಿಮಾ ಭಾರತದ ದೇಶೀಯ ಮಾರುಕಟ್ಟೆಯಲ್ಲಿ 543.09 ಕೋಟಿ ಸಂಪಾದಿಸಿದರೆ, 'ಗದಾರ್ 2' ಸಿನಿಮಾ 510 ಕೋಟಿ ಸಂಗ್ರಹ ಮಾಡಿದೆ.
ಗದಾರ್ 2 ಚಿತ್ರ ಕುರಿತು: 2001ರಲ್ಲಿ ಬಂದಿದ್ದ 'ಗದಾರ್; ಏಕ್ ಪ್ರೇಮ್ ಕಥಾ' ಚಿತ್ರದಲ್ಲಿ ನಟ ಸನ್ನಿ ಡಿಯೋಲ್ ತಾರಾ ಸಿಂಗ್ ಆಗಿ ಕಾಣಿಸಿಕೊಂಡಿದ್ದರು. ಟ್ರಕ್ ಡ್ರೈವರ್ ಆಗಿದ್ದ ಅವರು ಪಾಕಿಸ್ತಾನ ಸೇರಿದ್ದ ತಮ್ಮ ಹೆಂಡತಿ ಅಮಿಶಾ ಪಟೇಲ್ ಅವರನ್ನು ಕರೆ ತರುವ ಕಥೆ ಹೊಂದಿತ್ತು. ಇದೀಗ ಗದಾರ್ 2 ಚಿತ್ರ 1971ನೇ ಕಾಲಮಾನದಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯುವ ಕಥೆ ಹೊಂದಿದೆ. ಈ ಚಿತ್ರದಲ್ಲಿ ತಾರಾ ಸಿಂಗ್ ತಮ್ಮ ಮಗ ಚರಂಜಿತ್ನನ್ನು ಕರೆ ತರುವ ಕಥೆ ಹೊಂದಿದೆ. 'ಗದಾರ್' ಸಿನಿಮಾ ನಿರ್ದೇಶಕ ಅನಿಲ್ ಶರ್ಮಾ ಅವರ ಮಗ ಉತ್ಕರ್ಷ್ ಶರ್ಮಾ ಇದರಲ್ಲಿ ತಾರಾ ಸಿಂಗ್ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Jawan celebration: ಚಲೇಯಾ ಹಾಡು ಪ್ರದರ್ಶನವಾಗುತ್ತಿದ್ದಂತೆ ಚಿತ್ರಮಂದಿರದಲ್ಲಿ ಗೆಳತಿಗೆ ಪ್ರಪೋಸ್ - ವಿಡಿಯೋ ನೋಡಿ!