ಕರ್ನಾಟಕ

karnataka

ETV Bharat / entertainment

ಇಂದು ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ನೆರವೇರಲಿದೆ ನಂದಮೂರಿ ತಾರಕ ರತ್ನ ಅಂತ್ಯಕ್ರಿಯೆ

ಫೆಬ್ರವರಿ 18 ರಂದು ನಿಧನರಾಗಿದ್ದ ಟಾಲಿವುಡ್ ನಟ ನಂದಮೂರಿ ತಾರಕ ರತ್ನ ಅವರ ಅಂತ್ಯಕ್ರಿಯೆ ಇಂದು ಹೈದರಾಬಾದ್​ನ ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ನಡೆಯಲಿದೆ.

Nandamuri Taraka Ratna
ನಂದಮೂರಿ ತಾರಕ ರತ್ನ

By

Published : Feb 20, 2023, 11:07 AM IST

ಹೈದರಾಬಾದ್: ಶನಿವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಟಾಲಿವುಡ್ ನಟ ಹಾಗೂ ಟಿಡಿಪಿ ನಾಯಕ ನಂದಮೂರಿ ತಾರಕ ರತ್ನ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್​ನ ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ನಡೆಯಲಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಿಂದ ತಾರಕ ರತ್ನ ಅವರ ಮೃತ ದೇಹವನ್ನು ಮೊಕಿಲದಲ್ಲಿರುವ ಅವರ ನಿವಾಸಕ್ಕೆ ತರಲಾಗಿತ್ತು. ಮೊಕಿಲದಲ್ಲಿರುವ ಅವರ ನಿವಾಸಕ್ಕೆ ಆಗಮಿಸಿ ತಾರಕ ರತ್ನ ಅವರ ಪಾರ್ಥಿವ ಶರೀರಕ್ಕೆ ಹಲವು ಮುಖಂಡರು, ಚಿತ್ರರಂಗದ ಗಣ್ಯರು ಹಾಗೂ ನಂದಮೂರಿ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು.

ಇನ್ನು ತಾರಕ ರತ್ನ ಅವರ ಪತ್ನಿ ಅಲೇಖ್ಯಾ ರೆಡ್ಡಿ ಪತಿಯ ಸಾವಿನ ನಂತರ ಬಹಳ ಆಘಾತಕ್ಕೊಳಗಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಅಲೇಖ್ಯಾ ರೆಡ್ಡಿ ತನ್ನ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನನ್ನು ನೋಡಿಕೊಳ್ಳುತ್ತಿದ್ದು, ಕಳೆದ ಎರಡು ದಿನಗಳಿಂದ ಏನನ್ನೂ ತಿನ್ನಲಿಲ್ಲ, ಇದರಿಂದಾಗಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

ತಾರಕ ರತ್ನ ಅವರ ಪಾರ್ಥಿವ ಶರೀರವನ್ನು ಅಗಲಿದ ನಟನಿಗೆ ಅಂತಿಮ ನಮನ ಸಲ್ಲಿಸಲು ಇಂದು ಬೆಳಗ್ಗೆ ಹೈದರಾಬಾದ್‌ನ ಫಿಲ್ಮ್‌ನಗರದ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಗೆ ತರಲಾಗಿದೆ. ನಂತರ ಮಧ್ಯಾಹ್ನ 3 ಗಂಟೆಗೆ ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ಅವರು ತಾರಕ ರತ್ನ ಅವರ ಅಂತಿಮ ಸಂಸ್ಕಾರವನ್ನು ನೋಡಿಕೊಳ್ಳಲಿದ್ದಾರೆ.

ಆಂಧ್ರಪ್ರದೇಶದ ಸಚಿವ ಕೊಡಲಿ ನಾನಿ ಅವರು ತಾರಕ ರತ್ನ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಈ ಪಕ್ಷವನ್ನು ತಮ್ಮ ತಾತ ಎನ್‌ಟಿ ರಾಮರಾವ್ ಅವರು ಸ್ಥಾಪಿಸಿದ್ದರಿಂದ ಟಿಡಿಪಿ ಟಿಕೆಟ್‌ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆಯ ಬಗ್ಗೆ ಅಗಲಿದ ನಟ ಹೇಳುತ್ತಿದ್ದರು ಎಂದು ಅವರು ನೆನಪಿಸಿಕೊಂಡರು. ಇನ್ನು ವೈಎಸ್‌ಆರ್ ತೆಲಂಗಾಣ ಪಕ್ಷದ (ವೈಎಸ್‌ಆರ್‌ಟಿಪಿ) ಮುಖ್ಯಸ್ಥೆ ವೈ ಎಸ್ ಶರ್ಮಿಳಾ ಅವರು ತಾರಕ ರತ್ನ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಅಂತಿಮ ನಮನ ಸಲ್ಲಿಸಿದರು.

ತೆಲುಗು ಸಿನಿಮಾಟೋಗ್ರಾಫರ್ ನಂದಮೂರಿ ಮೋಹನ್ ಕೃಷ್ಣ ಅವರ ಪುತ್ರ ಮತ್ತು ತೆಲುಗು ನಟ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್‌ಟಿ ರಾಮರಾವ್ ಅವರ ಮೊಮ್ಮಗನಾಗಿರುವ ತಾರಕ ರತ್ನ ಅವರು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿದ್ದರು. ಜನವರಿ 27 ರಂದು ಆಂಧ್ರಪ್ರದೇಶದ ಕುಪ್ಪಂನಲ್ಲಿ ತೆಲುಗು ದೇಶಂ ಪಕ್ಷದ (ಟಿಡಿಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ರಾಜ್ಯಾದ್ಯಂತ 'ಯುವಘಳಂ ಪಾದಯಾತ್ರೆ'ಗೆ ಚಾಲನೆ ನೀಡಿ ಪ್ರಚಾರದ ವೇಳೆ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 23 ದಿನಗಳ ಹೋರಾಟದ ನಂತರ, ಫೆಬ್ರವರಿ 18 ರಂದು (40) ವರ್ಷದ ತಾರಕ ರತ್ನರವರು ನಿಧನರಾದರು.

ಪ್ರೀತಿಸಿ ವಿವಾಹವಾಗಿದ್ದ ತಾರಕ ರತ್ನ: ನಂದಮೂರಿ ತಾರಕ ರತ್ನ ಅವರ ಪತ್ನಿ ಅಲೇಖ್ಯಾ ರೆಡ್ಡಿ ಫ್ಯಾಷನ್ ಡಿಸೈನರ್ ಆಗಿದ್ದು, ಇವರಿಬ್ಬರಿದ್ದು ಪೋಷಕರ ಆಶಯದ ವಿರುದ್ಧವಾಗಿ ಲವ್​ ಮ್ಯಾರೇಜ್​ ಆಗಿದ್ದರು. ಅಲೇಖ್ಯಾ ರೆಡ್ಡಿ ರಾಜ್ಯಸಭಾ ಸದಸ್ಯ ವಿ.ವಿಜಯಸಾಯಿ ರೆಡ್ಡಿ ಅವರ ಹತ್ತಿರದ ಸಂಬಂಧಿ ಎನ್ನಲಾಗಿದೆ. ತಾರಕ್ ರತ್ನ ಮತ್ತು ಅಲೇಖ್ಯಾ ರೆಡ್ಡಿಯವರ ಪ್ರೀತಿ ಚಿಗುರಿದ್ದೇ ದಯಾ ಮೂವೀ ಚಿತ್ರೀಕರಣದ ಸಮಯದಲ್ಲಿ. ಮೂವೀ ಸೆಟ್‌ನಲ್ಲಿ ಅಲೇಖ್ಯಾ ವಸ್ತ್ರ ವಿನ್ಯಾಸಕಿಯಾಗಿದ್ದರು. ಇವರ ಪ್ರೀತಿಗೆ ಮನೆಯವರು ಒಪ್ಪದೇ ಇದ್ದ ಕಾರಣ ನಂದಮೂರಿ ತಾರಕ ರತ್ನ ಅವರು 2012 ರಲ್ಲಿ ಹೈದರಾಬಾದ್‌ನ ದೇವಸ್ಥಾನದಲ್ಲಿ ಅಲೇಖ್ಯಾ ಅವರನ್ನು ವಿವಾಹವಾಗಿದ್ದರು. ಅಲ್ಲದೇ ಇವರ ಮದುವೆಗೆ ನಂದಮೂರಿ ಕುಟುಂಬದಿಂದ ಯಾರೂ ಬಂದಿರಲಿಲ್ಲ. ಆದರೆ ಕೆಲವು ವರ್ಷಗಳ ನಂತರ, ತಾರಕ್ ಅವರ ಪೋಷಕರು ಈ ದಂಪತಿಗಳನ್ನು ಒಪ್ಪಿಕೊಂಡಿದ್ದರು.

ಇದನ್ನೂ ಓದಿ:ದಿ. ನಟ ನಂದಮೂರಿ ತಾರಕರತ್ನರ ಅಪರೂಪದ ಫೋಟೋಗಳಿಲ್ಲಿವೆ ನೋಡಿ!

ABOUT THE AUTHOR

...view details