ಕರ್ನಾಟಕ

karnataka

ETV Bharat / entertainment

ಮೊದಲ ಬಾರಿಗೆ ತುಳು ಸಿನಿಮಾಗೆ ಧ್ವನಿಯಾದ ತೆಲುಗು ಗಾಯಕಿ ಮಂಗ್ಲಿ - ತುಳು ಸಿನಿಮಾಗೆ ಧ್ವನಿಯಾದ ತೆಲುಗು ಗಾಯಕಿ ಮಂಗ್ಲಿ

ಕನ್ನಡಿಗರ ಹೃದಯಕ್ಕೆ ಬಾಣ ಬಿಟ್ಟಿದ್ದ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ - ಇದೇ ಮೊದಲ ಬಾರಿ ತುಳು ಸಿನಿಮಾದ ಹಾಡಿಗೆ ಧ್ವನಿಯಾದ ಮಂಗ್ಲಿ - ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆ ಕಂಬಳದ ಕುರಿತು ತುಳು ಭಾಷೆಯಲ್ಲಿ ಸಿನಿಮಾ

Telugu singer Mangli
ತೆಲುಗು ಗಾಯಕಿ ಮಂಗ್ಲಿ

By

Published : Jan 13, 2023, 8:44 PM IST

‘ಕಣ್ಣೇ ಅದಿರಿಂದಿ’ ಎಂದು ಕನ್ನಡಿಗರ ಹೃದಯಕ್ಕೆ ಬಾಣ ಬಿಟ್ಟಿದ್ದ ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ, ಈಗ ಕನ್ನಡದ ಗಾಯಕಿಯೇ ಆಗಿ ಬಿಟ್ಟಿದ್ದಾರೆ. ಅವರ ಹಾಡು ಕೇಳಿದರೆ ಸಾಕು ಇದು ಮಂಗ್ಲಿ ಹಾಡಿರೋ ಹಾಡ ಅಂತ ಗುರುತಿಸೊ ಮಟ್ಟಿಗೆ ಕನ್ನಡಿಗರು ಇದ್ದಾರೆ. ಇದೀಗ ಮಂಗ್ಲಿ ಇದೇ ಮೊದಲ ಬಾರಿ ತುಳು ಸಿನಿಮಾವೊಂದರ ಹಾಡಿಗೆ ಧ್ವನಿಯಾಗಿದ್ದಾರೆ.

ತೆಲುಗು ಮತ್ತು ಕನ್ನಡದಲ್ಲಿ ತನ್ನದೇ ವಿಭಿನ್ನ ಕಂಠದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯಗೆದ್ದ ಗಾಯಕಿ ಮಂಗ್ಲಿ ಇದೇ ಮೊದಲ ಬಾರಿ ತುಳು ಜನತೆಯ ಮನಗೆಲ್ಲಲು ಸಜ್ಜಾಗಿದ್ದಾರೆ. ಹೌದು ಹಿರಿಯ ನಿರ್ದೇಶಕ ಎಸ್.ವಿ.ಬಾಬು ರಾಜೇಂದ್ರ ಸಿಂಗ್ ನಿರ್ದೇಶನದ ಬಿರ್ದ್‌ದ ಕಂಬಳ ಮತ್ತು ಕನ್ನಡದ ವೀರ ಕಂಬಳ ಸಿನಿಮಾಕ್ಕೆ ಮಂಗ್ಲಿ ಹಾಡಿದ್ದಾರೆ. ಈ ಸಿನಿಮಾ ತುಳು ಮತ್ತು ಕನ್ನಡ ಎರಡೂ ಭಾಷೆಯಲ್ಲೂ ಹಾಡು ಹಾಡಿರುವುದು ವಿಶೇಷ ವಾಗಿದೆ. ತುಳುವಿನ ಕೆ.ಕೆ.ಪೇಜಾವರ, ಕನ್ನಡದ ರಘು ಶಾಸ್ತ್ರಿ ಅವರ ಸಾಹಿತ್ಯಕ್ಕೆ ಕದ್ರಿ ಮಣಿಕಾಂತ್ ಸಂಗೀತ ನೀಡಿದ್ದಾರೆ.

ಕನ್ನಡದಲ್ಲಿ ರಾಬರ್ಟ್ ಸಿನಿಮಾದ ಕಣ್ಣೆ ಅದರಂದಿ ಹಾಡಿನ ಮೂಲಕ ಸ್ಯಾಂಡಲ್‌ವುಡ್ ಪ್ರವೇಶ ಮಾಡಿದ ಮಂಗ್ಲಿ, ಬಳಿಕ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಎಣ್ಣೆಗೂ ಹೆಣ್ಣಿಗೂ ಗೀತೆಗೂ ದನಿಯಾದರು. ನಂತರ ಪುಷ್ಪಾ ಸಿನಿಮಾದ ಕನ್ನಡದ ಡಬ್ಬಿಂಗ್ ಸಿನಿಮಾದಲ್ಲಿ ಐಟಂ ಸಾಂಗ್‌ಗೂ ಮಂಗ್ಲಿ ಹಾಡಿದ್ದರು. ವಿಶೇಷ ಏನೆಂದರೆ ಮಂಗ್ಲಿ ಹಾಡಿರುವ ಅಷ್ಟೂ ಹಾಡುಗಳು ಸೂಪರ್‌ಹಿಟ್ ಆಗಿವೆ.

ತುಳುನಾಡಿನ ಹೆಮ್ಮೆಯ ಜಾನಪದ ಕ್ರೀಡೆ ಕಂಬಳದ ಕುರಿತು ತುಳು ಮತ್ತು ಕನ್ನಡದಲ್ಲಿ ಚಿತ್ರ ನಿರ್ಮಾಣವಾಗಿದೆ. ಈ ಚಿತ್ರ ಸಂಪೂರ್ಣ ಕರಾವಳಿಯ ಜಾನಪದ ಕಲೆ ಕಂಬಳದ ಕುರಿತಾಗಿದ್ದು, ಚಿತ್ರೀಕರಣದ ವೇಳೆ ಸುಮಾರು 20 ಜೊತೆ ಕೋಣ ಹಾಗೂ 500ಕ್ಕೂ ಹೆಚ್ಚಿನ ಕಲಾವಿದರೊಂದಿಗೆ ಚಿತ್ರೀಕರಣ ನಡೆದಿದೆ. ಈ ಚಿತ್ರ ಕೂಡ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ವಿಶೇಷ ಮೈಲಿಗಲ್ಲು ನಿರ್ಮಿಸಿರುವ ಕಾಂತಾರ ಚಿತ್ರದಂತೆ ತನ್ನ ಕರಾವಳಿ ಸೊಬಗನ್ನು ಪ್ರೇಕ್ಷಕರಿಗೆ ತೋರಿಸಿ ಮೈಲಿಗಲ್ಲು ನಿರ್ಮಿಸಲು ಚಿತ್ರ ಸಿದ್ದಗೊಂಡಿದೆ.

ಚಿತ್ರ ತಂಡದಲ್ಲಿ ತುಳುನಾಡಿನ ಹಲವಾರು ಪ್ರಸಿದ್ಧ ರಂಗಭೂಮಿ ಕಲಾವಿದರಾದ ನವೀನ್ ಡಿ ಪಡಿಲ್ ಬೋಜರಾಜ ವಾಮಂಜೂರು ಉಷಾ ಭಂಡಾರಿ, ರಾಧಿಕಾ ನಾರಾಯಣ, ಗೋಪಿನಾಥ್ ಭಟ್, ಜೊತೆಯಲ್ಲಿ ಖ್ಯಾತ ನಟರಾದ ಪ್ರಕಾಶ್ ರಾಜ್, ರವಿಶಂಕರ್ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಕೋಣಗಳನ್ನು ಓಡಿಸುವುದರಲ್ಲಿ ಪ್ರಸಿದ್ಧರಾದ ಶ್ರೀನಿವಾಸ ಗೌಡ ಹಾಗೂ ಕಾಂತಾರ ಚಿತ್ರದ ಗುರುವಖ್ಯಾತಿಯ ಸ್ವರಾಜ್ ಶೆಟ್ಟಿ ಕಂಬಳ ಓಡಿಸುವವರ ಪಾತ್ರದಲ್ಲಿ ಕಾಣಿಸಿಕೊಂಡರೆ, ನಟ ಆದಿತ್ಯ ವಿಶೇಷ ಪಾತ್ರದಲ್ಲಿ ಕಾಣೀಸಿಕೊಂಡಿದ್ದಾರೆ.

ಈ ಚಿತ್ರಕ್ಕೆ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರು ಚಿತ್ರಕಥೆ- ಸಂಭಾಷಣೆ ಬರೆದಿದ್ದು, ಶ್ರೀನಿವಾಸ್ ಬಾಬು, ಸಂಕಲನ ಹಾಗೂ ಛಾಯಾಗ್ರಹಣ ಆರ್ ಗಿರಿ ನಿರ್ವಹಿಸಿದ್ದಾರೆ. ಇನ್ನೂ ಈ ಚಿತ್ರಕ್ಕೆ ಡಿಫರೆಂಟ್ ಡ್ಯಾನಿ ಮತ್ತು ಮಾಸ್ ಮಾದ ಅವರ ಸಾಹಸವಿದ್ದು, ಮೈಕೆರಳಿಸುವ ಸನ್ನಿವೇಶಗಳು ಮೂಡಿ ಬಂದಿವೆ. ರಾಜೇಶ್ ಕುಡ್ಲ ಕಾರ್ಯಾಕಾರಿ ನಿರ್ಮಾಪಕರಾಗಿ, ಮದನ್ ಹರಿಣಿ ನೃತ್ಯ, ಕಲೆ ಚಂದ್ರಶೇಖರ್ ಸುವರ್ಣ ಅವರ ಪರಿಶ್ರಮವಿದೆ. ಈಗಾಗಲೇ ಚಿತ್ರೀಕರಣ ಕೊನೇ ಹಂತದಲ್ಲಿದ್ದು, ಶೀಘ್ರದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಎ.ಆರ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಅರುಣ್ ರೈ ತೋಡಾರ್ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ :ಪಾದರಾಯ ಸಿನಿಮಾ: ನಾಗಶೇಖರ್ ಜೋಡಿಯಾಗಿ ಗಾಯಕಿ ಮಂಗ್ಲಿ

ABOUT THE AUTHOR

...view details