ಖ್ಯಾತ ಚಲನಚಿತ್ರ ನಿರ್ಮಾಪಕ ನಿತಿನ್ ಮನ್ಮೋಹನ್ ಇಂದು ನಿಧನರಾಗಿದ್ದಾರೆ. ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
ವರದಿಗಳ ಪ್ರಕಾರ, ಹಲವಾರು ಆರೋಗ್ಯ ಸಮಸ್ಯೆ ಹಿನ್ನೆಲೆ ನಿತಿನ್ ಮನ್ಮೋಹನ್ ಆಸ್ಪತ್ರೆಯಲ್ಲಿ ಸುಮಾರು 15 ದಿನಗಳ ಕಾಲ ವೆಂಟಿಲೇಟರ್‌ನಲ್ಲಿದ್ದರು. ತೀವ್ರ ಹೃದಯಾಘಾತದಿಂದ ಬಳಲುತ್ತಿದ್ದ ಅವರನ್ನು ಡಿಸೆಂಬರ್ 3 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಅವರ ಮೆದುಳಿನ ಅಸಹಜ ಪರಿಸ್ಥಿತಿ ನಂತರ ನಿಧನರಾದರು ಎಂದು ಅವರ ಮಗಳು ಪ್ರಾಚಿ ಮಾಹಿತಿ ನೀಡಿದ್ದಾರೆ. ವಿಷಯ ಕೇಳಿದ ಚಿತ್ರರಂಗ ಮತ್ತು ಅಭಿಮಾನಿ ಬಳಗ ಆಘಾತಕ್ಕೊಳಗಾಗಿದ್ದಾರೆ.
ನಿತಿನ್ ಮನ್ಮೋಹನ್ ಅನಾರೋಗ್ಯ: "ಮೆದುಳು ಮತ್ತು ದೇಹದ ಇತರ ಭಾಗಗಳಲ್ಲಿ ಆಮ್ಲಜನಕ ಮತ್ತು ರಕ್ತ ಪೂರೈಕೆಯಿಲ್ಲದೇ ಕೆಲವು ಹಾನಿಗೆ ಕಾರಣವಾಯಿತು. ನಿಧಾನವಾಗಿ ಅವರ ಸ್ಥಿತಿ ಕ್ಷೀಣಿಸಲು ಪ್ರಾರಂಭಿಸಿತು. ಅವರು ಇಂದು ಬೆಳಿಗ್ಗೆ 10-10.20 ರ ಸುಮಾರಿಗೆ ಇಹಲೋಕ ತ್ಯಜಿಸಿದರು" ಎಂದು ಪ್ರಾಚಿ ಸುದ್ದಿವಾಹಿನಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಬೇಶರಂ ರಂಗ್ ಹಾಡಿನಲ್ಲಿ ಬದಲಾವಣೆ ಮಾಡಲು ಚಿತ್ರತಂಡಕ್ಕೆ ಸಿಬಿಎಫ್‌ಸಿ ಸೂಚನೆ
ನಿತಿನ್ ಮನ್ಮೋಹನ್ ಸಿನಿಮಾಗಳು: ಬೋಲ್ ರಾಧಾ ಬೋಲ್, ಲಾಡ್ಲಾ, ಯಮ್ಲಾ ಪಗ್ಲಾ ದೀವಾನಾ, ಆರ್ಮಿ, ಶೂಲ್, ಲವ್ ಕೆ ಲಿಯೇ ಕುಚ್ ಭಿ ಕರೇಗಾ, ದಸ್, ಚಲ್ ಮೇರೆ ಭಾಯ್, ಮಹಾ-ಸಂಗ್ರಾಮ್, ಇನ್ಸಾಫ್, ದೀವಾಂಗಿ, ನಯೀ ಪಡೋಸನ್, ಅಧರ್ಮ್, ಬಾಘಿ, ಈನಾ ಮೀನಾ ದೀಕಾ ತಥಾಸ್ತು, ಟ್ಯಾಂಗೋ ಚಾರ್ಲಿ, ಗಲಿ ಗಲಿ ಚೋರ್ ಹೈ, ದಿಲ್ ಮಾಂಗೆ ಮೋರ್, ಸಬ್ ಕುಶಲ್ ಮಂಗಲ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಪತ್ನಿ ಡಾಲಿ, ಪುತ್ರ ಸೋಹಮ್, ಪುತ್ರಿ ಪ್ರಾಚಿ ಸೇರಿದಂತೆ ಚಿತ್ರರಂಗವನ್ನು ಅಗಲಿದ್ದಾರೆ.