ಮೈಸೂರಿನಲ್ಲಿ ದಸರಾ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಈ ಮಧ್ಯೆ 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ಮತ್ತು 'ಲವ್ ಮಾಕ್ಟೇಲ್' ಬೆಡಗಿ ಮಿಲನಾ ನಾಗರಾಜ್ ನಟಿಸಿರುವ 'F0R REGN' (ಫಾರ್ ರಿಜಿಸ್ಟ್ರೇಷನ್) ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಯಿತು. ಜೊತೆಗೆ 'ಲವ್ ಗಳ್ ಸುಮಧುರ ಹಾರ್ಟ್ ಗಳ್ ಗಿರಗಿರ' ಎಂಬ ಟ್ರಾವೆಲ್ ವಿಡಿಯೋ ಹಾಡೊಂದನ್ನು ಅನಾವರಣಗೊಳಿಸಲಾಯಿತು.
'ಮಾಲ್ ಆಫ್ ಮೈಸೂರು' ಮಲ್ಟಿಪ್ಲೆಕ್ಸ್ನಲ್ಲಿ ಪ್ರವಾಸೋದ್ಯಮ ಇಲಾಖೆಯ ಜಾಯಿಂಟ್ ಕಮೀಷನರ್ ಕೆ.ಎಂ.ಸವಿತಾ ಅವರು ಹಾಡು ಹಾಗೂ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದ ನಾಯಕಿ ಮಿಲನಾ ನಾಗರಾಜ್, ನಿರ್ದೇಶಕ ನವೀನ್ ದ್ವಾರಕನಾಥ್ ಹಾಗೂ ನಿರ್ಮಾಪಕ ನವೀನ್ ರಾವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾಲ್ನಲ್ಲಿ ಮೊಳಗಿದ ಈ ಸುಮಧುರ ಗೀತೆಗೆ ಅಭಿಮಾನಿಗಳು ಫಿದಾ ಆದರು. ನಾಗಾರ್ಜುನ ಶರ್ಮ ಈ ಹಾಡನ್ನು ಬರೆದಿದ್ದು, ಆರ್.ಕೆ ಹರೀಶ್ ಸಂಗೀತ ನೀಡಿದ್ದಾರೆ. ಐರಾ ಉಡುಪಿ ಹಾಗೂ ದೀಪಕ್ ದೊಡ್ಡೇರ ಹಾಡಿದ್ದಾರೆ. ಸದ್ಯದಲ್ಲೇ ನಮ್ಮ ಚಿತ್ರವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ವೀಕ್ಷಿಸಲಿದೆ. ಚಿತ್ರದ ನಾಯಕ ಪೃಥ್ವಿ ಅಂಬರ್ ವಿದೇಶ ಪ್ರವಾಸದಲ್ಲಿದ್ದು, ನವೆಂಬರ್ ನಲ್ಲಿ ಬರಲಿದ್ದಾರೆ. ಅವರು ಬಂದ ಕೂಡಲೆ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡುವುದಾಗಿ ನಿರ್ದೇಶಕ ನವೀನ್ ದ್ವಾರಕನಾಥ್ ತಿಳಿಸಿದ್ದಾರೆ.
ಮೈಸೂರು ದಸರಾ ವೈಭವದ ಮಧ್ಯೆ 'F0R REGN' ಫಸ್ಟ್ ಲುಕ್ ಅನಾವರಣ ಇದನ್ನೂ ಓದಿ:ಉಡುಪಿ ಕಡಲ ತೀರದಲ್ಲಿ ನಿಧಿಮಾ ಜೊತೆಗೆ ರೊಮ್ಯಾನ್ಸ್ ಮಾಡಿದ ಪೃಥ್ವಿ ಅಂಬರ್...!
ಕ್ಯೂಟ್ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಕಥೆ ಆಧರಿಸಿರೋ ಫಾರ್ ರಿಜಿಸ್ಟ್ರೇಷನ್ ಚಿತ್ರದ ಆಡಿಯೋ ಹಕ್ಕನ್ನು ಈಗಾಗಲೇ 30 ಲಕ್ಷ ರೂಪಾಯಿ ಮೊತ್ತ ಕೊಟ್ಟು ಪ್ರತಿಷ್ಟಿತ ಝೇಂಕಾರ್ ಮ್ಯೂಸಿಕ್ ಸಂಸ್ಥೆ ಖರೀದಿಸಿದೆ. ಈ ಚಿತ್ರದಲ್ಲಿ ಆರು ಹಾಡಿಗಳಿದ್ದು, ಆರ್.ಕೆ.ಹರೀಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಹದ್ದೂರ್ ಚೇತನ್ ಕುಮಾರ್, ಕವಿರಾಜ್ ಹಾಗೂ ನಾಗಾರ್ಜುನ ಶರ್ಮಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಹಾಡುಗಳು ವಿಜಯ್ ಪ್ರಕಾಶ್, ಚಂದನ್ ಶೆಟ್ಟಿ ಹಾಗೂ ವಾಸುಕಿ ವೈಭವ್ ಧ್ವನಿಯಲ್ಲಿ ಮುದ್ದಾಗಿ ಮೂಡಿ ಬಂದಿದೆ.
ನಿಶ್ಚಲ್ ಫಿಲಂಸ್ ಮೂಲಕ ಎನ್.ನವೀನ್ ರಾವ್ 'F0R REGN' ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕ ನವೀನ್ ಅವರೇ ಬರೆದಿದ್ದಾರೆ. ಹರೀಶ್ ಸಂಗೀತ ನಿರ್ದೇಶನ, ಅಭಿಷೇಕ್ ಕಲ್ಲತ್ತಿ ಮತ್ತು ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್ ಅವರ ಸಂಕಲನವಿದೆ. ಚಿತ್ರದಲ್ಲಿ ಪೃಥ್ವಿ ಅಂಬರ್, ಮಿಲನಾ ನಾಗರಾಜ್, ರವಿಶಂಕರ್, ಬಾಬು ಹಿರಣ್ಣಯ್ಯ, ಸ್ವಾತಿ, ಸುಧಾ ಬೆಳವಾಡಿ, ತಬಲನಾಣಿ, ರಮೇಶ್ ಭಟ್, ಸಿಹಿಕಹಿ ಚಂದ್ರು ಮುಂತಾದವರು ಇದ್ದಾರೆ.
ಇದನ್ನೂ ಓದಿ:ರೊಮ್ಯಾಂಟಿಕ್ ಸಿನಿಮಾದಲ್ಲಿ ಪೃಥ್ವಿ ಅಂಬರ್ ಜೊತೆ ಮಿಲನಾ ನಾಗರಾಜ್