ಕರ್ನಾಟಕ

karnataka

ETV Bharat / entertainment

ದೂದ್ ಪೇಡಾ ದಿಗಂತ್ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾಗೆ ಸಿಕ್ಕಿದ್ರು ಸುಂದರಿ ಧನು ಹರ್ಷ - digant next film

ಎಡಗೈಯೇ ಅಪಘಾತಕ್ಕೆ ಕಾರಣ ಎಂಬ ಟೈಟಲ್ ಹೊಂದಿರುವ ಚಿತ್ರತಂಡ ಇಂದು ವಿಶ್ವ ಎಡಚರ ದಿನದ (ಎಡಗೈಯನ್ನು ಹೆಚ್ಚಾಗಿ ಬಳಸುವವರು) ಅಂಗವಾಗಿ ಚಿತ್ರತಂಡ ನಾಯಕಿಯನ್ನು ಪರಿಚಯಿಸಿದೆ.

Edagaiye Apaghatakke Karana film actress dhanu harsha introduction teaser out
ಎಡಗೈಯೇ ಅಪಘಾತಕ್ಕೆ ಕಾರಣ

By

Published : Aug 13, 2022, 4:49 PM IST

ಸ್ಯಾಂಡಲ್​ವುಡ್​ನಲ್ಲಿ ವಿಭಿನ್ನ ಕಥೆಗಳ ಸಿನಿಮಾಗಳ ಮೂಲಕ ತನ್ನದೇ ಸ್ಟಾರ್ ಡಮ್ ಹೊಂದಿರುವ ನಟ ದೂದ್ ಪೇಡಾ ದಿಗಂತ್. ಗಾಳಿಪಟ 2 ಸಿನಿಮಾದ ಯಶಸ್ಸಿನ ಖುಷಿಯಲ್ಲಿರೋ ದೂದ್ ಪೇಡಾ ಕ್ಯಾಚಿ ಟೈಟಲ್ ಸಿನಿಮಾವೊಂದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಎಡಗೈಯೇ ಅಪಘಾತಕ್ಕೆ ಕಾರಣ' ಎಂಬ ಟೈಟಲ್ ಹೊಂದಿರುವ ಚಿತ್ರತಂಡ ಇಂದು 'ವಿಶ್ವ ಎಡಚರ ದಿನ'ದ (ಎಡಗೈಯನ್ನು ಹೆಚ್ಚಾಗಿ ಬಳಸುವವರು) ಅಂಗವಾಗಿ ಚಿತ್ರತಂಡ ನಾಯಕಿಯನ್ನು ಪರಿಚಯಿಸಿದೆ.

ಧನು ಹರ್ಷ ಎಂಬ ಯುವ ಪ್ರತಿಭೆ ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್​ಗೆ ಎಂಟ್ರಿ ಕೊಡುತ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ವಿಶ್ವ ಎಡಚರ ದಿನದ ಅಂಗವಾಗಿ ನಾಯಕಿಯ ಇಂಟ್ರೂಡಕ್ಷನ್ ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ.

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದಲ್ಲಿ ಧನು ದಿಗಂತ್​ಗೆ ಜೋಡಿಯಾಗಿ ನಟಿಸಲಿದ್ದು, ರಾಧಿಕಾ ಎಂಬ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಎಡಗೈ ಆಧಾರಿತ ಪರಿಕಲ್ಪನೆ ಸಿನಿಮಾವಾಗಿರೋದ್ರಿಂದ ಈ ಪಾತ್ರ ತಮಗೆ ವಿಶೇಷವಾಗಿದ್ದು, ಡಿಫರೆಂಟ್ ಶೇಡ್​ನಲ್ಲಿ ಕಾಣಿಸಿಕೊಳ್ಳುವುದಾಗಿ ಧನು ಹರ್ಷ ಹೇಳಿದ್ದಾರೆ.

ಇದನ್ನೂ ಓದಿ:ಗಾಳಿಪಟ 2 ಹೊಸದಾಖಲೆ.. ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್​​ನಲ್ಲಿ ಲೂಟಿ ಮಾಡಿದ ಗೋಲ್ಡನ್​ ಜೋಡಿ

ಸಮರ್ಥ್ ಬಿ ಕಡ್ಕೋಳ್ ನಿರ್ದೇಶನದಲ್ಲಿ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಮೂಡಿಬರುತ್ತಿದ್ದು, ಗುರುದತ್ತ ಗಾಣಿಗ ಮತ್ತು ಸಮರ್ಥ ಕಡ್ಕೋಳ್ ಜಂಟಿಯಾಗಿ ಈ ಸಿನಿಮಾನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅಭಿಮನ್ಯು ಸದಾನಂದ್ ಛಾಯಾಗ್ರಹಣವಿದೆ. ಆಗಸ್ಟ್ ತಿಂಗಳಾಂತ್ಯಕ್ಕೆ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಈ ಹಿಂದೆ ದಿಗಂತ್ ಫಸ್ಟ್ ಲುಕ್​ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ನಾಯಕಿ ಇಂಟ್ರೂಡಕ್ಷನ್ ಟೀಸರ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ABOUT THE AUTHOR

...view details