ಕರ್ನಾಟಕ

karnataka

ETV Bharat / entertainment

ಅಕ್ರಮ ಹಣ ವರ್ಗಾವಣೆ ಕೇಸ್​: ಇಡಿ ವಿಚಾರಣೆಗೆ ಹಾಜರಾದ ಜಾಕ್ವೆಲಿನ್ ಫರ್ನಾಂಡೀಸ್​

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಬಾಲಿವುಡ್​ ನಟಿ ಜಾಕ್ವೆಲಿನ್ ಫರ್ನಾಂಡೀಸ್​ರನ್ನು 2ನೇ ಬಾರಿ ವಿಚಾರಣೆಗೆ ಒಳಪಡಿಸಿದರು.

ಇಡಿ ವಿಚಾರಣೆಗೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡೀಸ್​
ಇಡಿ ವಿಚಾರಣೆಗೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡೀಸ್​

By

Published : Jun 27, 2022, 5:37 PM IST

ನವದೆಹಲಿ:ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ವಿಚಾರಣೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇವರು 2ನೇ ಬಾರಿಗೆ ವಿಚಾರಣೆಗೆ ಹಾಜರಾದರು.

200 ಕೋಟಿ ರೂಪಾಯಿ ಸುಲಿಗೆ ಮಾಡಿದ ಆರೋಪದ ಮೇಲೆ ಪ್ರಮುಖ ಆರೋಪಿ ಸುಕೇಶ್​ ಚಂದ್ರಶೇಖರ್​ ಈಗಾಗಲೇ ಜೈಲು ಪಾಲಾಗಿದ್ದಾನೆ. ಪ್ರಕರಣದಲ್ಲಿ ಜಾಕ್ವೆಲಿನ್​ ಹೆಸರು ಕೂಡಾ ಕೇಳಿ ಬಂದಿದ್ದು, ತಮ್ಮ ಹೇಳಿಕೆ ದಾಖಲಿಸುವಂತೆ ಇಡಿ ಸಮನ್ಸ್‌ ಜಾರಿ ಮಾಡಿತ್ತು.

ಏಪ್ರಿಲ್​ನಲ್ಲಿ ಇಡಿ ಅಧಿಕಾರಿಗಳು ಜಾಕ್ವೆಲಿನ್​ಗೆ ಸೇರಿದ 7 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿ ವಿಚಾರಣೆ ನಡೆಸಿತ್ತು. ಬಳಿಕ ಅಗತ್ಯವಿದ್ದಾಗ ತನಿಖೆಗೆ ಲಭ್ಯವಿರಬೇಕು, ವಿದೇಶಕ್ಕೆ ತೆರಳಬಾರದು ಎಂದು ನಿರ್ಬಂಧ ವಿಧಿಸಿತ್ತು. ಇದಾದ 2 ತಿಂಗಳ ಬಳಿಕ ಇಂದು ನಟಿಯನ್ನು ಮತ್ತೆ ವಿಚಾರಣೆಗೆ ಒಳಪಡಿಸಲಾಗಿದೆ.

ಪ್ರಕರಣವೇನು?:ಉದ್ಯಮಿಯೊಬ್ಬರ ಪತ್ನಿಗೆ 200 ಕೋಟಿ ರೂಪಾಯಿ ವಂಚಿಸಿರುವ ಆರೋಪದಡಿ ಸುಕೇಶ್ ಚಂದ್ರಶೇಖರ್​​ನನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದಾಗ ನಟಿ ಜಾಕ್ವೆಲಿನ್​ ಹಾಗೂ ಸುಕೇಶ್​ ಚಂದ್ರಶೇಖರ್​ ನಡುವಿನ ಸಂಬಂಧ ಬಯಲಾಗಿದೆ.

ವಿಚಾರಣೆಯ ಸಂದರ್ಭದಲ್ಲಿ ಸುಕೇಶ್,​ ನಟಿ ಜಾಕ್ವೆಲಿನ್​ಗೆ ಐಷಾರಾಮಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿಕೊಂಡಿದ್ದ. ಇದರ ಬೆನ್ನಲ್ಲೇ ಜಾಕ್ವೆಲಿನ್-ಸುಕೇಶ್ ಜೊತೆಗಿನ ಕೆಲವು ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅದರ ಜೊತೆಗೆ ಆತ ಜಾಕ್ವೆಲಿನ್​ಗಾಗಿ ಮೂರು ಸರಣಿಗಳ 500 ಕೋಟಿ ರೂ. ಬಜೆಟ್​​ನ ಸೂಪರ್ ಹೀರೋ​ ಪ್ರಾಜೆಕ್ಟ್​ ಮಾಡಲು ಮುಂದಾಗಿದ್ದ ಎಂದು ಗೊತ್ತಾಗಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ನಟಿ ನೋರಾ ಫತೇಹಿ ಅವರನ್ನೂ ಇಡಿ ವಿಚಾರಣೆಗೊಳಪಡಿಸಿದೆ.

ಇದನ್ನೂ ಓದಿ:'ವಿಕ್ರಾಂತ್​ ರೋಣ' ಟ್ರೈಲರ್​ ಹಂಚಿಕೊಂಡು ಸಿನಿಮಾ ವೀಕ್ಷಿಸುವಂತೆ ಅಮಿತಾಬ್​ ಬಚ್ಚನ್​ ಮನವಿ

ABOUT THE AUTHOR

...view details