ಕರ್ನಾಟಕ

karnataka

ETV Bharat / entertainment

ಪುನೀತ್ ರಾಜ್​ಕುಮಾರ್ ಅಭಿಮಾನಿಗಳಿಂದ ಡೊಳ್ಳು ಸಿನಿಮಾದ ಹಾಡು ಬಿಡುಗಡೆ - etv bharata kannada

ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿರುವ ಡೊಳ್ಳು ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ.

dollu movie song released
ಡೊಳ್ಳು ಸಿನಿಮಾದ ಹಾಡು ರಿಲೀಸ್

By

Published : Aug 24, 2022, 6:28 PM IST

Updated : Aug 24, 2022, 7:08 PM IST

ಶೀರ್ಷಿಕೆ, ಕಂಟೆಂಟ್, ಟ್ರೈಲರ್​​ನಿಂದ ಕನ್ನಡ ಚಿತ್ರರಂಗದಲ್ಲಿ ಸುದ್ದಿ ಆಗುತ್ತಿರುವ ಸಿನಿಮಾ ಡೊಳ್ಳು. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ದಾದಾಸಾಹೇಬ್ ಫಾಲ್ಕೆ ಬೆಸ್ಟ್ ಕನ್ನಡ ಫಿಲ್ಮ್ ಪ್ರಶಸ್ತಿ ಸೇರಿ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಹಾಗೂ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿರುವ ಈ ಚಿತ್ರದ ಮತ್ತೊಂದು ಹಾಡು ಬಿಡುಗಡೆ ಆಗಿದೆ. 'ಶಾಶ್ವತ ಯಾವುದು..' ಎಂಬ ಹಾಡನ್ನು ಪುನೀತ್ ರಾಜ್​​ಕುಮಾರ್ ಅಭಿಮಾನಿಗಳಿಂದ ರಿಲೀಸ್ ಮಾಡಿಸಲಾಗಿದೆ.

ಪುನೀತ್ ರಾಜ್​ಕುಮಾರ್ ಬದುಕಿದ್ದಾಗ ಈ ಹಾಡನ್ನು ಅವರ ಕೈಯಲ್ಲಿ ಬಿಡುಗಡೆ ಮಾಡಿಸಬೇಕು ಅಂತಾ ನಿರ್ಮಾಪಕ ಪವನ್ ಒಡೆಯರ್ ಹಾಗು ಅಪೇಕ್ಷಾ ಪುರೋಹಿತ್ ಅಂದುಕೊಂಡಿದ್ದರಂತೆ. ಯಾಕಂದ್ರೆ ಪವನ್ ಒಡೆಯರ್ ಪುನೀತ್ ರಾಜ್ ಕುಮಾರ್ ಅವರನ್ನು ತುಂಬಾ ಇಷ್ಟಪಡುವ ನಿರ್ದೇಶಕರಲ್ಲಿ ಒಬ್ಬರು. ಜೊತೆಗೆ ಅವರ ಪತ್ನಿ ಅಪೇಕ್ಷಾ ಪುರೋಹಿತ್ ಅವರು ಕೂಡಾ ಪುನೀತ್ ಅಭಿಮಾನಿ. ಇತ್ತೀಚೆಗೆ ಇದೇ ಚಿತ್ರದ ಮಾಯಾನಗರಿ ಎಂಬ ಹಾಡು ಹೊರಬಿದ್ದಿತ್ತು.

ಬಳಿಕ ಸಿನಿಮಾ ನಿರ್ಮಾಪಕರು, ನಿರ್ದೇಶಕ ಸಾಗರ್ ಪುರಾಣಿಕ್, ಸಂಗೀತ ನಿರ್ದೇಶಕ ಅನಂತ್ ಕಾಮತ್, ನಟ ಕಾರ್ತಿಕ್ ಮಹೇಶ್, ನಟಿ ನಿಧಿ ಹೆಗ್ಡೆ, ಚಂದ್ರ ಮಯೂರ್, ಚಿತ್ರಕಥೆ ಸಂಭಾಷಣೆ ಬರೆದಿರುವ ಶ್ರೀನಿಧಿ ಚಿತ್ರದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡರು.

ಡೊಳ್ಳು ಚಿತ್ರತಂಡ

ಪವನ್ ಒಡೆಯರ್ ಸಿನಿಮಾ ನಿರ್ಮಾಣದ ಜೊತೆಗೆ ಮನಮುಟ್ಟುವ ಹಾಡೊಂದನ್ನು ಬರೆದಿದ್ದಾರೆ. ಈ ಹಾಡನ್ನು ಗಾಯಕ ವಿಜಯ ಪ್ರಕಾಶ್ ಸೊಗಸಾಗಿ ಹಾಡಿದ್ದು, ಎಂ ಅನಂತ್ ಕಾಮತ್ ಸಂಗೀತ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಪವನ್ ಒಡೆಯರ್, ಡೊಳ್ಳು ಚಿತ್ರದ ಕಥೆ ಗೊತ್ತಿದ್ದರಿಂದ ಈ ಹಾಡು ಬರೆಯೋದಿಕ್ಕೆ ಸಾಧ್ಯವಾಯಿತೆಂದು ತಿಳಿಸಿದರು.

ಇದನ್ನೂ ಓದಿ:ಡೊಳ್ಳು ಚಿತ್ರದ ಮಾಯಾನಗರಿ ಸಾಂಗ್ ರಿಲೀಸ್.. ಡಾಲಿ ಧನಂಜಯ್ ಮೆಚ್ಚುಗೆ

ಅಪೇಕ್ಷಾ ಪುರೋಹಿತ್ ಮಾತನಾಡಿ, ಇಂದು ಅಪ್ಪು ಸರ್ ಅಭಿಮಾನಿಗಳು ಈ ಹಾಡನ್ನು ಬಿಡುಗಡೆ ಮಾಡಿದ್ದು, ಹರ್ಷ ವ್ಯಕ್ತಪಡಿಸಿದ್ದಾರೆ. ಅಪ್ಪು ಸಾರ್ ನೋಡಿ ನಾವು ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಲು ಸಾಧ್ಯವಾಯಿತು. ಅದಕ್ಕೆ ಅವರೇ ಸ್ಫೂರ್ತಿ. ಅವರು ಸದಾ ನಮ್ಮೊಂದಿಗಿದ್ದಾರೆ ಎಂದು ತಿಳಿಸಿದರು. ಈ ಚಿತ್ರ ಇದೇ 26ರಂದು ಬಿಗ್ ಸ್ಕ್ರೀನ್​ನಲ್ಲಿ ಕಾಣಿಸಿಕೊಳ್ಳಲಿದೆ.

Last Updated : Aug 24, 2022, 7:08 PM IST

ABOUT THE AUTHOR

...view details