ಮುಂಬೈ: ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿ ಬಾಲಿವುಡ್‌ನ ಜನಪ್ರಿಯ ತಾರಾ ಜೋಡಿಗಳಲ್ಲೊಂದು. ಬಹುತೇಕ ಬಾಲಿವುಡ್ ಸೆಲೆಬ್ರಿಟಿಗಳಂತೆ ಇವರೂ ಕೂಡಾ ಐಷಾರಾಮಿ ಜೀವನ ನಡೆಸುತ್ತಾರೆ. ಇದೀಗ ಪ್ರತಿಷ್ಟಿತ ಬಾಂದ್ರಾ ಪ್ರದೇಶದಲ್ಲಿ 119 ಕೋಟಿ ರೂಪಾಯಿಯ ಮೌಲ್ಯದ ಅಪಾರ್ಟ್ಮೆಂಟ್ ಒಂದರಲ್ಲಿ ನಾಲ್ಕಂತಸ್ತಿನ ಲಕ್ಸುರಿ ಮನೆ ಕೊಂಡುಕೊಂಡಿದ್ದಾರೆ. ಈ ಅಪಾರ್ಟ್ಮೆಂಟ್ ಸಮುದ್ರಕ್ಕೆ ಅಭಿಮುಖವಾಗಿದ್ದು, ಬಾಲಿವುಡ್‌ನ ನಟ ಶಾರುಖ್ ಖಾನ್ ಮನೆಗೂ ಸಮೀಪದಲ್ಲಿದೆ.
ವರದಿಯೊಂದರ ಪ್ರಕಾರ, 16, 17, 18 ಮತ್ತು 19ನೇ ಮಹಡಿಯನ್ನೊಳಗೊಂಡ ಮನೆ ಇದಾಗಿದ್ದು 1,300 ಚದರಡಿ ಟೆರೇಸ್ ಹೊಂದಿದೆ. ಪ್ರತಿಚದರಡಿಗೆ ಈ ಪ್ರದೇಶದಲ್ಲಿ 1.5 ಲಕ್ಷ ರೂ ಮೌಲ್ಯವಿದ್ದು, 19 ಕಾರುಗಳನ್ನು ಪಾರ್ಕಿಂಗ್ ಮಾಡುವ ಸ್ಥಳಾವಕಾಶ ಹೊಂದಿದೆ.