ಬಾಲಿವುಡ್ ಪವರ್ಫುಲ್ ಸ್ಟಾರ್ ಕಪಲ್ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ. ನಟ ರಣ್ವೀರ್ ಅವರು 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ವೀಕ್ಷಿಸಲು ಹೆಂಡತಿಯನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಹೋದಂತೆ ತೋರುತ್ತಿವೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಫೋಟೋಗಳು ಇದನ್ನೇ ಹೇಳುತ್ತಿವೆ. ಚಿತ್ರದ ಸ್ಪೆಷಲ್ ಸೆಲೆಬ್ರಿಟಿ ಶೋ ಅನ್ನು ಮಿಸ್ ಮಾಡಿಕೊಂಡಿದ್ದ ದೀಪಿಕಾ ಅಂತಿಮವಾಗಿ ರಣ್ವೀರ್ ಅವರೊಂದಿಗೆ ಸಿನಿಮಾ ನೋಡಿದ್ದಾರೆ. ಮುಂಬೈನಲ್ಲಿ ಪಿವಿಆರ್ನಿಂದ ಹೊರಬಂದ ದೀಪ್ವೀರ್ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದರು.
ಈಗಾಗಲೇ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿರುವ ಈ ಜೋಡಿ ಮತ್ತೊಮ್ಮೆ ಅಭಿಮಾನಿಗಳ ಮನ ಗೆದ್ದಿದ್ದಾರೆ. ರಣ್ವೀರ್ ಸಿಂಗ್ ಭಾವಚಿತ್ರವಿರುವ ದೀಪಿಕಾ ಅವರ ಡ್ರೆಸ್ ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ. ವೈರಲ್ ಫೋಟೋಗಳಲ್ಲಿ ರಣ್ವೀರ್ ಬ್ಲ್ಯಾಕ್ ಡ್ರೆಸ್, ಮಾಸ್ಕ್ನಲ್ಲಿ ಕಾಣಿಸಿಕೊಂಡರೆ, ದೀಪಿಕಾ ಡೆನಿಮ್ನಲ್ಲಿ ಕಾಣಿಸಿಕೊಂಡರು. ಸಪೋರ್ಟಿವ್ ವೈಫ್ ದೀಪಿಕಾ ಅವರ ಜಾಕೆಟ್ ಮೇಲೆ RS (Ranveer Singh) ಎಂದು ಬರೆಯಲಾಗಿತ್ತು. ಅಲ್ಲದೇ ಗಂಡನ ಭಾವಚಿತ್ರ ನಟಿಯ ಜಾಕೆಟ್ನಲ್ಲಿತ್ತು.
ಪದ್ಮಾವತ್ ಸಿನಿಮಾ ನಟಿ ತಮ್ಮ ವಿಶಿಷ್ಟ ಫ್ಯಾಶನ್ ಸೆನ್ಸ್ನಿಂದ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಎಂದಿಗೂ ಹಿನ್ನೆಡೆ ಕಂಡಿಲ್ಲ. ವಿಭಿನ್ನ ಫ್ಯಾಶನ್ ಸೆನ್ಸ್ಗೆ ಹೆಸರುವಾಸಿಯಾಗಿರುವ ನಟಿ ಇವರು. ನಟಿಯ ಡ್ರೆಸ್ಸಿಂಗ್ ಶೈಲಿಯನ್ನು ಹಲವರು ಫಾಲೋ ಮಾಡೋದುಂಟು. ಈ ಬಾರಿ ಪತಿಗೆ ಬೆಂಬಲ ಸೂಚಿಸುವ ಸಲುವಾಗಿ ತಮ್ಮ ಜಾಕೆಟ್ ಅನ್ನು ವಿಶೇಷವಾಗಿ ಡಿಸೈನ್ ಮಾಡಿಸಿಕೊಂಡಿದ್ದಾರೆ. ಹೌದು, ನಟಿ ತೊಟ್ಟ ಜಾಕೆಟ್ನ ಹಿಂಭಾಗದಲ್ಲಿ ರಣ್ವೀರ್ ಅವರ ದೊಡ್ಡ ಫೋಟೋ ಇದ್ದು, ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದೆ.