ಕರ್ನಾಟಕ

karnataka

ETV Bharat / entertainment

ಬಿಗ್​ ಬಾಸ್ ಸೀಸನ್​ 10: ಗ್ರ್ಯಾಂಡ್​ ಈವೆಂಟ್​ಗೆ ಕ್ಷಣಗಣನೆ - ಸ್ಪರ್ಧಿಗಳ್ಯಾರಿರಬಹುದು? - ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​

Kannada Bigg Boss Season 10: ಕನ್ನಡ ಬಿಗ್​ ಬಾಸ್​ 10ನೇ ಸೀಸನ್ ಇಂದಿನಿಂದ ಆರಂಭ ಆಗಲಿದೆ. ಸಂಜೆ 6ಕ್ಕೆ ಬಿಗ್​ ಬಾಸ್​​ ಗ್ರ್ಯಾಂಡ್​ ಲಾಂಚ್​ ಈವೆಂಟ್​​ ಪ್ರಸಾರ ಆಗಲಿದ್ದು, ಪ್ರೇಕ್ಷಕರು ಉತ್ಸುಕರಾಗಿದ್ದಾರೆ.

Bigg Boss Season 10
ಬಿಗ್​ ಬಾಸ್ ಸೀಸನ್​ 10

By ETV Bharat Karnataka Team

Published : Oct 8, 2023, 4:22 PM IST

Updated : Oct 8, 2023, 4:45 PM IST

ಬಿಗ್​ ಬಾಸ್.. ಅತ್ಯಂತ ಜನಪ್ರಿಯ ಟಿವಿ ಕಾರ್ಯಕ್ರಮ. ಕಿರುತೆರೆಯಲ್ಲಿ ಪ್ರಸಾರ ಆಗುವ ಈ ಶೋ ದೊಡ್ಡ ಸಂಖ್ಯೆಯ ಪ್ರೇಕ್ಷಕರನ್ನು ಸಂಪಾದಿಸಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ನಡೆಸಿಕೊಡುವ ಈ ಕಾರ್ಯಕ್ರಮ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು.

ಬಿಗ್​ ಬಾಸ್​ 10ನೇ ಸೀಸನ್.. ಸಕತ್​ ಪಾಪುಲರ್​ ಪ್ರೋಗ್ರಾಮ್​ ಈಗಾಗಲೇ ಒಂಭತ್ತು ಸೀಸನ್​ಗಳನ್ನು ನಡೆಸಿಕೊಟ್ಟಿದೆ. ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿದೆ. ಬಹುದಿನಗಳಿಂದ ಕಾರ್ಯಕ್ರಮಕ್ಕಾಗಿ ಕನ್ನಡಿಗರು ಕಾದು ಕುಳಿತಿದ್ದರು. ಅಂತಿಮವಾಗಿ ಹೊಸ ಸೀಸನ್​ ಶುರುವಾಗೋ ಹೊತ್ತು ಬಂದಿದೆ. ಬಿಗ್​ ಬಾಸ್​ 10ನೇ ಸೀಸನ್ ಇಂದಿನಿಂದ ಆರಂಭ ಆಗಲಿದೆ. ಸಂಜೆ 6ಕ್ಕೆ ಕಲರ್ಸ್ ಕನ್ನಡದಲ್ಲಿ ಬಿಗ್​ ಬಾಸ್​​ ಗ್ರ್ಯಾಂಡ್​ ಲಾಂಚ್​ ಈವೆಂಟ್​​ ಪ್ರಸಾರ ಆಗಲಿದೆ. ಈ ಬಾರಿಯ ಬಿಗ್​ ಬಾಸ್​ ಹೊಸತನದಿಂದ ಕೂಡಿರಲಿದೆ ಎಂದು ತಂಡ ಹೇಳಿಕೊಂಡಿದ್ದು, ಪ್ರೇಕ್ಷಕರು ಸಾಕಷ್ಟು ಕುತೂಹಲರಾಗಿದ್ದಾರೆ. ಸಂಪೂರ್ಣ ಮನೆ ಹೇಗಿರಬಹುದು, ಸ್ಪರ್ಧಿಗಳು ಯಾರಾಗಬಹುದು ಎಂದು ಕುತೂಹಲ ವ್ಯಕ್ತಪಡಿಸುತ್ತಿದ್ದು, ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

ಸುದೀಪ್​ ಅವರನ್ನೊಳಗೊಂಡ ವಿಡಿಯೋ ಶೇರ್: ಕಲರ್ಸ್​ ಕನ್ನಡ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​​ (ಟ್ವಿಟರ್​) ನಲ್ಲಿ ಸುದೀಪ್​ ಅವರನ್ನೊಳಗೊಂಡ ವಿಡಿಯೋ ಒಂದನ್ನು ಶೇರ್ ಮಾಡಿದೆ.ಕೌಂಟ್ ಡೌನ್ ಮುಗೀತು; ಬಿಗ್ ಬಾಸ್ ಕನ್ನಡ ಸೀಸನ್ ಹತ್ತರ ಗ್ರಾಂಡ್ ಪ್ರೀಮಿಯರ್, ಇವತ್ತು! ಬಿಗ್ ಬಾಸ್! ಗ್ರ್ಯಾಂಡ್​ ಪ್ರೀಮಿಯರ್​ ಇಂದು ಸಂಜೆ 6ಕ್ಕೆ, ಶೋ ಪ್ರತಿ ರಾತ್ರಿ 9:30ಕ್ಕೆ ಎಂದು ಬರೆದುಕೊಂಡಿದೆ.

ಇದನ್ನೂ ಓದಿ:ಸಿಕ್ಕಿಂ ಪ್ರವಾಹದಲ್ಲಿ ತೆಲುಗು ಹಿರಿಯ ನಟಿ ಸರಳ ಕುಮಾರಿ ನಾಪತ್ತೆ: ತಾಯಿಯನ್ನು ಪತ್ತೆ ಹಚ್ಚುವಂತೆ ಮಗಳ ಮನವಿ

ಸ್ಪೆಷಲ್​ ಬಿಗ್​ ಬಾಸ್​ ಹೌಸ್​:ಈ ಹಿಂದಿನ ಸೀಸನ್​ಗಳಿಗೆ ಹೋಲಿಸಿದರೆ, ಈ ಬಾರಿ ಸಖತ್​ ಸ್ಪೆಷಲ್​ ಇರಲಿದೆ ಎಂಬುದನ್ನು ಈಗಾಗಲೇ ಬಿಗ್​ ಬಾಸ್​ ತಂಡ ಖಚಿತ ಪಡಿಸಿದೆ. ಬಿಗ್​ ಬಾಸ್​ ಎಂದ ಮೇಲೆ ಮೊದಲು ಎಲ್ಲರ ಗಮನಕ್ಕೆ ಬರೋದು ಮನೆ. ದೊಡ್ಮನೆ ಹೇಗಿರಬಹದು ಎಂಬ ಕುತೂಹಲ ಸಹಜವಾಗಿ ಇರುತ್ತದೆ. ಅದಕ್ಕೆ ತಕ್ಕಂತೆ ಕುತೂಹಲ ಮೂಡಿಸುವ ವಿಡಿಯೋವನ್ನೂ ಕೂಡ ಕಲರ್ಸ್ ಕನ್ನಡ ಹಂಚಿಕೊಂಡಿತ್ತು. 4 ತಿಂಗಳಲ್ಲಿ ಬಿಗ್​ ಬಾಸ್ ಹೊಸ ಮನೆ ನಿರ್ಮಾಣ ಆಗಿದೆ. ಹೊಸ ಸೀಸನ್​ಗೆ ತಕ್ಕಂತೆ ಮನೆಯೂ ಸ್ಪೆಷಲ್ ಆಗಿದೆ. ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಒಳಗೊಂಡು 12 ಸಾವಿರ ಚದರ​ ಅಡಿಯಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಮನೆ ನಿರ್ಮಿಸುತ್ತಿರುವ ವಿಡಿಯೋವನ್ನು ಇತ್ತೀಚೆಗಷ್ಟೇ ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿತ್ತು. ಇನ್ನೇನು ಕೆಲವೇ ಕ್ಷಣಗಳಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ಪರ್ಧಿಗಳ ಕುರಿತೂ ಕೂಡ ಒಂದು ಸಣ್ಣ ಸುಳಿವು ಬಿಟ್ಟುಕೊಟ್ಟಿದ್ದು, ಸಂಜೆ 6ಕ್ಕೆ ಎಲ್ಲವೂ ಖಚಿತ ಆಗಲಿದೆ.

ಇದನ್ನೂ ಓದಿ:ಸ್ಟೈಲಿಶ್​ ಲುಕ್​ನಲ್ಲಿ ಸಮಂತಾ ರುತ್​ ಪ್ರಭು: ಹೊಸ ಫೋಟೋಗಳಿಲ್ಲಿವೆ ನೋಡಿ

Last Updated : Oct 8, 2023, 4:45 PM IST

ABOUT THE AUTHOR

...view details